ವ್ಯಕ್ತಿ ಕಣ್ಮರೆ : ಪ್ರಕರಣ ದಾಖಲು

ಕೊರಟಗೆರೆ

       ರೈತನ ಬೋರ್‍ವೆಲ್‍ನಲ್ಲಿ ನೀರು ಕಡಿಮೆಯಾಗಿ ಅಡಕೆ ಮತ್ತು ತೆಂಗಿನ ತೋಟ ಉಳಿಸುವ ಉದ್ದೇಶದಿಂದ ಟ್ರ್ಯಾಕ್ಟರ್‍ನಲ್ಲಿ ಟ್ಯಾಂಕರ್ ಮೂಲಕ ನೀರು ತರಲು ಕೊರಟಗೆರೆ ಪಟ್ಟಣಕ್ಕೆ ಮಾ.5 ರ ಮಂಗಳವಾರ ಹೋದ ವ್ಯಕ್ತಿಯೋರ್ವ ಕಾಣೆ ಆಗಿರುವ ಘಟನೆ ಇತ್ತೀಚೆಗೆ ನಡೆದಿದೆ.

        ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಕುನಿತಿಮ್ಮನಹಳ್ಳಿ ಗ್ರಾಮದ ವಾಸಿಯಾದ ಲೇ.ದಾಸಪ್ಪನವರ ಮಗನಾದ ತಿಮ್ಮರಾಜು(37) ಸ್ವಗ್ರಾಮದಿಂದ ಮಾ.5ರಂದು ಕೊರಟಗೆರೆ ಪಟ್ಟಣಕ್ಕೆ ನೀರು ತರುತ್ತೇನೆ ಎಂದು ಹೋಗಿ, ಕಾಣೆ ಆಗಿದ್ದಾನೆ ಎಂದು ತಿಳಿದು ಬಂದಿದೆ.

       ಕಾಣೆಯಾದ ತಿಮ್ಮರಾಜು ಮನೆಯಿಂದ ಹೊರಟಾಗ ಕಪ್ಪು-ನೀಲಿ ಮಿಶ್ರಿತ ಟೀಶರ್ಟ್, ನೀಲಿ ಬಣ್ಣದ ಪಂಚೆ ಮತ್ತು ಹಸಿರು ಟವೆಲ್ ಹಾಕಿದ್ದಾನೆ. ಕಪ್ಪು ಬಣ್ಣ ಮತ್ತು ದುಂಡು ಮುಖದ ಈತ ಐದೂವರೆ ಅಡಿ ಎತ್ತರವಿದ್ದಾನೆ. ಎಂಎ ಪದವೀಧರ ಆಗಿರುವ ಈತ ಕನ್ನಡ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ. ಎಡಕಣ್ಣಿನ ಮೇಲ್ಬಾಗ ಹಳೆಯ ಗಾಯದ ಗುರುತುಇದೆ.

       ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ತಿಮ್ಮರಾಜುವಿನ ಅಣ್ಣ ರಂಗಧಾಮಯ್ಯ ಮಾ.23ರ ಶನಿವಾರ ದೂರು ನೀಡಿದ್ದು, ಕಾಣೆಯಾದ ಪ್ರಕರಣ ದಾಖಲಾಗಿದೆ. ಕಾಣೆಯಾಗಿರುವ ವ್ಯಕ್ತಿಯ ಮಾಹಿತಿ ದೊರೆತರೆ ಕೊರಟಗೆರೆ ಪೊಲೀಸ್‍ಠಾಣೆ ಸಂಖ್ಯೆ: 08138-232136, ಸಿಪಿಐ ನದಾಫ್ 9480802954, ಪಿಎಸ್‍ಐ ಮಂಜುನಾಥ-9480802988 ನಂಬರಿಗೆ ಕರೆ ಮಾಡುವಂತೆ ಮನವಿ ಮಾಡಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link