ವಿಜೃಂಭಣೆಯಿಂದ ಜರುಗಿದ ತೇರುಹನುಮಪ್ಪ ರಥೋತ್ಸವ

ಹೂವಿನಹಡಗಲಿ :

      ಪಟ್ಟಣದ ತೇರು ಹನುಮಪ್ಪ ರಥೋತ್ಸವವು ಇಂದು ವಿಜೃಂಭಣೆಯಿಂದ ಜರುಗಿತು. ರಥೋತ್ಸವದ ಸಂದರ್ಭದಲ್ಲಿ ಹೊಸಪೇಟೆ ಜಾನಪದ ಕಲಾತಂಡದಿಂದ ಮರಗಾಲು ಕುಣಿತ ಹಾಗೂ ಹಗಲುವೇಷಗಾರರು, ಮತ್ತು ಡೊಣ್ಣು ಕುಣಿತ, ನಂದಿಕೋಲು ಕುಣಿತಗಳು ರಥೋತ್ಸವಕ್ಕೆ ಮೆರುಗನ್ನು ನೀಡಿದವು. ಪ್ರಥಮಬಾರಿಗೆ ಮುಜರಾಯಿ ಇಲಾಖೆವತಿಯಿಂದ ಜರುಗಿದ ರಥೋತ್ಸವದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹನುಮಪ್ಪ ದೇವರಿಗೆ ಭಕ್ತಿ ಸಮರ್ಪಿಸಿದರು.

      ಮುಜರಾಯಿ ಸಚಿವರಾದ ಪಿ.ಟಿ.ಪರಮೇಶ್ವರನಾಯ್ಕ, ತೇರು ಹನುಮಪ್ಪ ದೇವಸ್ಥಾನ ಸಮಿತಿಯ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ ಎಸ್.ಬಿ.ಕೂಡಲಗಿ, ಪುರಸಭೆ ಅಧ್ಯಕ್ಷೆ ಮರ್ದಾನ್‍ಬೀ, ಅಧ್ಯಕ್ಷರಾದ ಅಟವಾಳಗಿ ಕೊಟ್ರೇಶ್, ಉಪಾಧ್ಯಕ್ಷ ಟಿ.ಮಹಾಂತೇಶ, ಕಾರ್ಯದರ್ಶಿ ಮಲ್ಲಿಕಾರ್ಜುನ, ಹಾಗೂ ಸೊಪ್ಪಿನ ಮಂಜುನಾಥ, ಪ್ರೇಮಾ ಚನ್ನಪ್ಪ, ಭರತೇಶ ಜೈನ್, ಹಕ್ಕಂಡಿ ಶಿವನಾಗಪ್ಪ, ಗೋಣೆಪ್ಪ, ಧರ್ಮಕರ್ತರಾದ ರಾಮಸ್ವಾಮಿ ವೆಂಕಟೇಶಯ್ಯ, ಮುಖಂಡರಾದ ಐಗೋಳ್ ಚಿದಾನಂದ, ಎಂ.ಪರಮೇಶ್ವರಪ್ಪ, ಆರ್.ಪಕ್ಕೀರಪ್ಪ, ಪುರಸಭೆ ಸದಸ್ಯರಾದ ಯು.ಹನುಮಂತಪ್ಪ, ಎಸ್.ತಿಮ್ಮಣ್ಣ, ಇರ್ಫಾನ್, ಸುರೇಶ, ಹಾಗೂ ಶ್ಯಾನಬೋಗರ ಸುಧಾಕರ, ಸೇರಿದಂತೆ ಹಲವರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link