ಶ್ರೀ ತೇರುಮಲ್ಲೇಶ್ವರಸ್ವಾಮಿಯ ವೈಭವದ ಬ್ರಹ್ಮರಥೋತ್ಸವ

ಹಿರಿಯೂರು:

      ದಕ್ಷಿಣಕಾಶಿ ಎಂದೇ ಪ್ರಖ್ಯಾತವಾದ ಹಿರಿಯೂರಿನ ಶ್ರೀತೇರುಮಲ್ಲೇಶ್ವರಸ್ವಾಮಿಯ ಬ್ರಹ್ಮರಥೋತ್ಸವ ಶುಕ್ರವಾರ ಮದ್ಯಾಹ್ನ 1.30ರ ಸಮಯದಲ್ಲಿ ಮಘಾ ನಕ್ಷತ್ರದಲ್ಲಿ ವೈಭವದಿಂದ ನೆರವೇರಿತು. ಈ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಕ್ತಿಯಿಂದ ಭಾಗವಹಿಸಿ ಸ್ವಾಮಿಯ ಕೃಪಾಶಿರ್ವಾದ ಪಡೆದರು.

       ಸುಮಾರು 30 ಅಡಿ ಏತ್ತರದ ನಾಲ್ಕು ಕಲ್ಲಿನಚಕ್ರದ ರಥವನ್ನು ಭಕ್ತರು ಹರಹರಮಹಾದೇವ ಎಂಬ ಜಯಘೋಷದೊಂದಿಗೆ ದೇವಸ್ಥಾನದ ಮುಂಬಾಗದಿಂದ ಸುಮಾರು 500 ಮೀಟರ್ ದೂರವಿರುವ ಸಿದ್ದನಾಯಕ ಸರ್ಕಲ್‍ವರೆಗೆ ರಥಕ್ಕೆ ಕಟ್ಟಿರುವ ಕಬ್ಬಿಣದ ಸರಪಳಿಗಳನ್ನು ಹಿಡಿದು ಭಕ್ತಿಭಾವದಿಂದ ರಥಎಳೆದರು.

       ರಥೋತ್ಸವದಲ್ಲಿ ಕರಡಿವಾದ್ಯಕ್ಕೆ ಯುವಕರು ಕುಣಿಯುತ್ತಾ ಹೆಜ್ಜೆಹಾಕಿ ಸಂಭ್ರಮಿಸಿದರು. ರಥದಲ್ಲಿ ಕುಳ್ಳಿರಸಲಾಗಿದ ದೇವರಿಗೆ ದಾರಿಯುದ್ದಕ್ಕೂ ಭಕ್ತರು ಬಾಳೆಹಣ್ಣು, ಧವನ, ಹಣ್ಣುಕಾಯಿಗಳನ್ನು ಏಸೆದು ಭಕ್ತಿಸಮರ್ಪಿಸಿದರು. ಅನೇಕ ಸಂಘ-ಸಂಸ್ಥೆಗಳು ಹಾಗೂ ಯುವಕರ ತಂಡಗಳು ರಥಬೀದಿಯುದ್ದಕ್ಕೂ ಜಾತ್ರೆಗೆಬಂದ ಜನರಿಗೆ ಪಾನಕ, ಕೋಸಂನಬರಿ, ಮಜ್ಜಿಗೆ, ಪುಳಿಯೊಗೆರೆ, ಮೊಸರನ್ನಗಳನ್ನು, ನೀಡುತ್ತಿದ್ದರು, ದೇವಾಲಯದ ಆವರಣದಲ್ಲಿ ದೂರದ ಊರಿಂದ ಬಂದಂತಹ ಜನರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು, ರಥೋತ್ಸವದಲ್ಲಿ ಮಹಿಳೆಯರು, ಯುವತಿಯರು ಬಣ್ಣದ ಉಡುಗೆ-ತೂಡಿಗೆಗಳನ್ನು ತೂಟ್ಟು ಜಾತ್ರೆಯಲ್ಲಿ ಸಂಬ್ರಮದಿಂದ ಓಡಾಡುತ್ತಿದ್ದ ದೃಶ್ಯ ಕಂಡು ಬಂತು. ಅಲ್ಲಿಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

        ಬೆಳಗ್ಗೆ 10:30 ಗಂಟೆಗೆ ಶಿವದನಸ್ಸು ಪೂಜೆ ಮತ್ತು ಮೆರವಣೆಗೆ ನಡೆಸಲಾಯಿತ್ತು ಶ್ರೀತೇರುಮಲ್ಲೇಶ್ವರಸ್ವಾಮಿಗೆ ಮಹಾಅಭಿಷೇಕದ ನಂತರ ಕಾರ್ಯಕ್ರಮ ಪ್ರಾರಂಭಗೊಂಡು, ವಿವಿಧ ಪೂಜಾಕಾರ್ಯಗಳೊಂದಿಗೆ ಮದ್ಯಾಹ್ನ 1.30ಕ್ಕೆ ಸರಿಯಾಗಿ ಶ್ರೀತೇರುಮಲ್ಲೇಶ್ವರ ಸ್ವಾಮಿಯ ಉತ್ಸವಮೂರ್ತಿಯನ್ನು ವಿಜೃಂಭಣೆಯಿಂದ ಅಲಂಕಾರಗೊಂಡ ಬ್ರಹ್ಮರಥದಲ್ಲಿ ಕುಳ್ಳರಿಸಿ ರಥೋತ್ಸವ ನೆರವೇರಿಸಲಾಯಿತು.

        ಈ ರಥೋತ್ಸವಕ್ಕೆ ಮೊದಲು ಕ್ಷೇತ್ರದ ಶಾಸಕರಾದ ಶ್ರೀಮತಿ ಪೂಣಿಮಾಶ್ರೀನಿವಾಸ್ ಹಾಗೂ ರಾಜ್ಯ ಬಿ.ಜೆ.ಪಿ.ಮುಖಂಡ ಡಿ.ಟಿ.ಶ್ರೀನಿವಾಸ್‍ರವರು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ, ಶ್ರೀ ತೇರುಮಲ್ಲೆಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

        ಬ್ರಹ್ಮ ರಥೋತ್ಸವ ಸಂದರ್ಭದಲ್ಲಿ ಈ ವರ್ಷದ ಜಾತ್ತೋತ್ಸವದ ಮುಕ್ತಿಬಾವುಟವನ್ನು ಕ್ಷೇತ್ರದ ಮಾಜಿ ಶಾಸಕರಾದ ಸುಧಾಕರ್ ರವರು ಹರಾಜಿನಲ್ಲಿ 11 ಲಕ್ಷ ರೂಗಳಿಗೆ ಪಡೆದು ತೇರುಮಲ್ಲೆಶ್ವರಸ್ವಾಮಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿಸಚಿವ ಆನೆಕಲ್ಲು ನಾರಾಯಣಸ್ವಾಮಿ, ಚಿತ್ರದುರ್ಗ ಸಂಸದ ಬಿ.ಎನ್.ಚಂದ್ರಪ್ಪ ಸೇರಿದಂತೆ ಅವರ ಬೆಂಬಲಿಗರು ಹಾಜರಿದ್ದರು.

        ಈ ರಥೋತ್ಸವ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಮಂಜುಳ, ಮಾಜಿ ಅಧ್ಯಕ್ಷ ಚಂದ್ರಶೇಖರ್, ಈ ಮಂಜುನಾಥ್, ಉಪಾಧ್ಯಕ್ಷೆ ಇಮ್ರಾನಬಾನು, ನಗರಸಭೆ ಸದಸ್ಯರುಗಳಾದ ಪ್ರೇಮ್‍ಕುಮಾರ್, ನಟರಾಜ್, ರವಿಚಂದ್ರನಾಯ್ಕ, ಎಸ್.ಪಿ.ಟಿ.ದಾದಾಪೀರ್, ಬಿ.ಜೆ.ಪಿ.ಅಧ್ಯಕ್ಷ ದ್ಯಾಮಣ್ಣ, ಜಿ.ಪಂ.ಸದಸ್ಯರುಗಳಾ ನಾಗೇಂದ್ರನಾಯ್ಕ್, ಶ್ರೀಮತಿ ರಾಜೇಶ್ವರಿ, ತಾ.ಪಂ.ಅಧ್ಯಕ್ಷರಾದ ಚಂದ್ರಪ್ಪ, ತಾ.ಪಂ.ಸದಸ್ಯರಾದ ಯಶ್ವಂತರಾಜ್, ಮುಕುಂದಪ್ಪ, ಓಂಕಾರಪ್ಪ ಅರ್ಚಕವಿಶ್ವನಾಥಾಚಾರ್, ಭೋಜನಾಯಕ, ಓಬನಾಯಕ, ಸಿದ್ದನಾಯಕ ಸೇರಿದಂತೆ ಮುಜರಾಯಿ ಅಧಿಕಾರಿಗಳು ಹಾಗೂ ತಾ||ತಹಶಿಲ್ದಾರ್‍ರಾದ ವೆಂಕಟೇಶಯ್ಯ, ಶಿರಸ್ಥೇದಾರರು ಹಾಗೂ ಮುಜರಾಯಿಸಿಬ್ಬಂದಿವರ್ಗ ಪಾಲ್ಗೊಂಡಿದ್ದರು.

        ಈ ರಥೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಅಸಂಖ್ಯಾತ ಭಕ್ತಾಧಿಗಳು ಆಗಮಿಸಿದ್ದು ಈ ರಥೋತ್ಸವಕ್ಕೆ ಹೂಸದಾಗಿ ಮದುವೆಯಾಗಿರುವ ಗಂಡು-ಹೆಣ್ಣುಗಳು ತಪ್ಪದೇ ಬರುವುದು ಇಲ್ಲಿನ ಸಂಪ್ರದಾಯ. ಹೊಸದಾಗಿ ಮದುವೆಯಾಗಿರುವ ಗಂಡು-ಹೆಣ್ಣುಗಳು ಈ ರಥೋತ್ಸವದಲ್ಲಿ ಭಕ್ತಿ ಭಾವದಿಂದ ಭಾಗವಹಿಸುವುದರಿಂದ ಮುಂದಿನ ವರ್ಷದ ರಥೋತ್ಸವದೊಳಗಾಗಿ ಆ ದಂಪತಿಗಳಿಗೆ ಮಕ್ಕಳಾಗುತ್ತವೆ.

         ಎಂಬುದು ಇಲ್ಲಿಯ ಜನರ ಬಹು ದಿನದ ನಂಬಿಕೆ. ಈ ಕಾರಣಕ್ಕೋ ಏನೋ ಈ ರಥೋತ್ಸವ ಸಂದರ್ಭದಲ್ಲಿ ಎಲ್ಲೆಲ್ಲೋ ನವ ವಧು-ವರರು ಹಾಗೂ ಹೊಸದಾಗಿ ಮದುವೆಯಾಗಿರುವ ನವ ದಂಪತಿಗಳೆ ಹೆಚ್ಚಾಗಿ ಕಾಣಸಿಗುತ್ತಾರೆ. ಬ್ರಹ್ಮ ರಥೋತ್ಸವದ ನಂತರ ಮದ್ಯಾಹ್ನ ದೇವಸ್ಥಾನದಲ್ಲಿ ಅನ್ನಸಂತರ್ಪಣ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಸಂಜೆ 5 ಗಂಟೆಗೆ ಶ್ರೀಚಂದ್ರಮೌಳೇಶ್ವರ ಹಾಗೂ ಶ್ರೀಉಮಾಮಹೇಶ್ವರ ರಥೋತ್ಸವ ಸಹ ವಿಜೃಂಭಣೆಯಿಂದ ನೆಡೆಸಲಾಯಿತು.

         ಜಾತ್ರೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನೆಡಯದಂತೆ ಹಿರಿಯೂರು ಪೋಲೀಸ್‍ಅಧಿಕಾರಿಗಳಾದ ಡಿ.ವೈ.ಎಸ್.ಪಿ. ನಾಗೇಂದ್ರನಾಯ್ಕ, ವೃತ್ತನಿರೀಕ್ಷಕರಾದ ಗುರುರಾಜ್, ಸಬ್‍ಇನ್ಸ್‍ಪೆಕ್ಟರ್‍ಗಳಾದ ಮಂಜುನಾಥ್, ತಮ್ಮ ಸಿಬ್ಬಂಧಿಯೊಂದಿಗೆ ಸೂಕ್ತ ಬಂದೋಬಸ್ತು ವ್ಯವಸ್ಥೆ ಕೈಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap