ಬ್ಯಾಡಗಿ:
ತಾಲೂಕಿನ ಕದರ ಮಂಡಲಗಿ ಗ್ರಾಮದ ಕಸ್ತೂರಬಾ ವಸತಿ ಶಾಲೆ ಅವ್ಯವಸ್ಥೆಯ ಆಗರವಾಗಿದ್ದು, ಇರುವ ಒಂದೇ ಶೌಚಾಲಯವನ್ನು ನೂರುಮಕ್ಕಳು ಬಳಸಬೇಕಿದೆ , ಅಲ್ಲದೇ ಶೌಚಾಲಯ ತುಂಬಿ ಗಬ್ಬು ವಾಸನೆ ಬೀರುತ್ತಿದ್ದು ಮಕ್ಕಳ ಪಾಲಿಗೆ ವಸತಿ ಶಾಲೆ ನರಕವಾಗಿ ಪರಿಣಮಿಸಿದೆ.
ಈ ಕುರಿತಂತೆ ಹಲವಾರು ಸಭೆಗಳಲ್ಲಿ ದುರಸ್ಥಿ ಮಾಡಿಸುವಂತೆ ತಿಳಿಸಿದ್ದರೂ ಕೂಡಾ ಸ್ಥಳೀಯ ಬಿಇಓ ಎಂ.ಮಂಜುನಾಥ ಸ್ವಾಮಿ ಮಾತಿನಲ್ಲೆ ಮನೆ ಕಟ್ಟುತ್ತಾ ಕಾಲ ಹರಣ ಮಾಡುತ್ತ ಹೋರಟಿದ್ದಾರೆ, ಕೂಡಲೇ ವ್ಯವಸ್ಥೆ ಸರಿಪಡಿಸದಿದ್ದಲ್ಲಿ ಅಧಿಕಾರಿಗಳನ್ನೆ ವಸತಿ ಶಾಲೆಯಲ್ಲಿಕೂಡಿ ಹಾಕಿ ವಾಸ್ತವ ಸ್ಥಿತಿ ತಿಳಿಸಬೇಕಾಗುತ್ತದೆ ಎಂದು ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ ಶಿಕ್ಷಣ ಇಲಾಖೆಯ ಇಸಿಒ ಬಸವರಾಜ ಸೋಮಕ್ಕಳವರ ಅವರಿಗೆ ಖಡಕ್ ಎಚ್ಚರಿಕೆ ನೀಡಿದ ಘಟನೆ ಬುಧವಾರ ನಡೆದ ಮಾಸಿಕ ತಾಪಂ ಕೆಡಿಪಿ ಸಭೆಯಲ್ಲಿ ನಡೆಯಿತು.
ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಂದರ್ಭದಲ್ಲಿ ಈ ವಿಷಯ ಕುರಿತಂತೆ ಮಾತನಾಡಿದ ಅಧ್ಯಕ್ಷೆ ಕಸ್ತೂರ ಬಾ ವಸತಿ ಶಾಲೆಯಲ್ಲಿ ಶೌಚಾಲಯ ದುರಸ್ಥಿ ಮಾಡಿಸುವಂತೆ ಇಗಾಲೆ ನಾಲ್ಕೈದು ಸಭೆಗಳಲ್ಲಿ ಬಿಇಓಗೆ ತಿಳಿಸಲಾಗಿದೆ.ಅಂತ್ಯಾಗ್ಯೂ ನಾವು ಭೇಟಿ ನೀಡುತ್ತೇವೆ ಎಂದು ತಿಳಿದು ನಿನ್ನೆ ಕಾಟಾಚಾರಕ್ಕೆ ಸ್ವಚ್ಚ ಮಾಡಲಾಗಿದೆ.ಅಲ್ಲದೇ ಗುಣಮಟ್ಟದ ಆಹಾರ ನೀಡದೇ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಮೊಬೈಲ್‍ಗಳಲ್ಲಿ ಸಂಗ್ರಹಿಸಿದ್ದ ಪೋಟೊಗಳನ್ನು ತೋರಿಸಿ ಮಾಹಿತಿ ಇಲ್ಲದೇ ಬಂದಿದ್ದ ಬಿಇಓ ಪರವಾಗಿ ಬಂದಿದ್ದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಸುಳ್ಳು ಸಂದರ್ಶನ ವರದಿ:ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯೋನ್ಮೂಖರಾಗದೇ ಸ್ಥಳೀಯ ಬಿಇಓ ಕೇವಲ ಮಾತಿನಲ್ಲೆ ಮನೆ ಕಟ್ಟುತ್ತ ಹೊರಟಿದ್ದಾರೆ, ಇಲಾಖೆ ಮಾಡಿದ ವಡವಟ್ಟಿನಿಂದ 1 ವರ್ಷವಾದರೂ ಅತಿಥಿ ಶಿಕ್ಷಕರಿಗೆ ಸಂಬಳ ದೊರೆತಿಲ್ಲ ನಿಮ್ಮ ಸಂಬಳ ಒಂದು ದಿನ ತಡವಾದರೇ ಸುಮ್ಮನಿರುತ್ತೀರಾ..? ಮಿಶನ್ 10 ಎಂದು ಹೇಳುತ್ತ, ಶಾಲೆಗಳಿಗೆ ವಿಸಿಟ್ ಮಾಡದೇ ಸುಳ್ಳು ಸಂದರ್ಶನ ವರದಿ ಸೃಷ್ಠಿ ಮಾಡಿ ಇಲಾಖೆಗೆ ಸಲ್ಲಿಸುತ್ತಿರುವ ಬಗ್ಗೆ ಮತ್ತು 3 ಘಂಟೆಗೆ ವಾಪಸ ತಮ್ಮೂರಿಗೆ ಹೊರಡುತ್ತಿರುವ ಮಾಹಿತಿ ಲಭ್ಯ ವಾಗಿದೆಇದನ್ನುಕೂಡಲೇ ಉಪ ನಿರ್ದೇಶಕರು ಹಾಗೂ ಕಮಿಷನರ್‍ಗೆ ಸಲ್ಲಿಸುತ್ತೇನೆಎಂದರು.
ಸಾವು ನೋವಿಗೆ ನೀವೇ ಹೋಣೆ: ತಾಪಂ ಟಿಇಓ ಅಬೀಬ್ ಗದ್ಯಾಳ ಮಾತನಾಡಿ, ನೂರಾರು ವರ್ಷ ಕಂಡ ಕದರ ಮಂಡಲಗಿ ಶಾಲೆ ಇಗಾಗಲೆ ಶೀಥಿಲಾವಸ್ಥೆ ತಲುಪಿ ಬಿದ್ದಿದ್ದುಅದನ್ನು ನೆಲಸಮಗೊಳಿಸುವಂತೆ ತಿಳಿಸಿದರೂ ಕೂಡಾ ಇಲ್ಲಿಯವರೆಗೂ ಯಾವುದೇ ಕಾರ್ಯವಾಗಿಲ್ಲ ಇದು ಉದ್ಧಟನನದ ಪರಮಾವಧಿ ಎಂದು ಗದರಿದರಲ್ಲದೇ ಒಂದು ವೇಳೆ ಕಟ್ಟಡ ಬಿದ್ದು ಸಾವು ನೋವು ಸಂಭವಿಸಿಲ್ಲಿ ಬಿಒಓ ಹೊಣೆಗಾರರು ಎಂದು ಎಚ್ಚರಿಸಿದರು.
ನೀರಿನ ಘಟಕದಲ್ಲಿ ಅಶುದ್ಧ ನೀರು:
ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಬವಣೆ ಪ್ರಾರಂಭವಾಗಿದೆ ಇದನ್ನು ತಪ್ಪಿಸಲು ಗ್ರಾಮೀಣ ಬಾಗದಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದರೂ ಸೂಕ್ತ ನಿರ್ವಹಣೆ ಮಾಡದೆ ಅವುಗಳಲ್ಲಿ ಕ್ಲೋರಿನಯುಕ್ತ ಅಶುದ್ದ ನೀರು ಬರುತ್ತಿದೆ.ನಿರ್ವಹಣೆ ಮಾಡಲು ಗುತ್ತಿಗೆದಾರನಿಗೆ ಅವಕಾಶವಿದ್ದರೂ ಮಾಡದೇ ಗ್ರಾಮಸ್ಥರ ಆರೋಗ್ಯದ ಜೊತೆಯಲ್ಲಿ ಆಟವಾಡುತ್ತಿರುವುದು ಖಡನಾರ್ಹ ಕೂಡಲೇ ಘಟಗಳನ್ನು ದುರಸ್ಥಿ ಮಾಡಿಸಿ ಶುದ್ಧ ನೀರನ್ನು ನೀಡಿ ಎಂದು ಯಲ್ಲನಗೌಡಕರೇ ಗೌಡ್ರ ಕೆಐಯುಡಿಎಫಸಿ ಅಧಿಕಾರಿಯನ್ನು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಅಧಿಕಾರಿಅಂತಹ ಘಟಕಗಳನ್ನು ಶೀಗ್ರದಲ್ಲೆ ದುರಸ್ಥಿ ಮಾಡಿಸ ಲಾಗುವುದುಎಂದರು. ಅಂಬ್ಯೂಲೆನ್ಸ್ ಇಲ್ಲವಾ ಆರೋಗ್ಯಾಧಿಕಾರಿಗಳೇ.?ಮೂರು ದಿನಗಳ ಹಿಂದೆ ಪಟ್ಟಣದಲ್ಲಿ ಸಿಲೆಂಡರ್ ಸ್ಪೋಟಗೊಂಡು 8ಜನ ಗಾಯ ಗೊಂಡಘಟನೆ ನಡೆದ ಸಂದರ್ಭದಲ್ಲಿ ಹೆಚ್ಚಿಚಿಕಿತ್ಸೆ ಗಾಯಾಳುಗಳನ್ನು ರವಾನಿಸಲು ಅಂಬ್ಯೂಲೆನ್ಸ್ ಸಿಬ್ಬಂದಿ ಮತ್ತು ವಾಹನ ಇಲ್ಲದಿರುವ ಬಗ್ಗೆ ಪತ್ರಿಗೆಗಳಲ್ಲಿ ಓದಿದೆ, ಸಾರ್ವಜನಿಕರಿಗೆಜೀವನ್ಮರಣದ ಸಂದರ್ಬದಲ್ಲಿ ಸಿಗದ ಸೌಲಭ್ಯಗಳು ಇದ್ದರೆಷ್ಟು ಬಿಟ್ಟರೆಷ್ಟುಕೂಡಲೇತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಉಪಾಧ್ಯಕ್ಷೆ ಶಾಂತಮ್ಮದೇಸಾಯಿಆರೋಗ್ಯಾಧಿಕಾರಿಗೆತಾಕೀತು ಮಾಡಿದರು. ಇದಕ್ಕೆ ಉತ್ತರಿಸಿದ ಆರೋಗ್ಯಾಧಿಕಾರಿ ಸಿಬ್ಬಂದಿ ವಿರುದ್ಧ ಇಗಾಗಲೆ ನೋಟಿಸ್‍ಜಾರಿ ಮಾಡಲಾಗಿದೆಎಂದರು.