ಹರಪನಹಳ್ಳಿ:
ಪಟ್ಟಣದ ತೆಗ್ಗಿನಮಠದ ಬಳಿಯ ರಸ್ತೆ ಬದಿ ನಿಲ್ಲಿಸಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಟ್ರ್ಯಾಕ್ಟರ್ ಗುದ್ದಿದ ಪರಿಣಾಮ ಬೈಕ್ ಗಳು ಚರಂಡಿಗೆ ಬಿದ್ದು ಜಖಂಗೊಂಡಿವೆ.ಅಲಗಿಲವಾಡದ ರೈತರೊಬ್ಬರಿಗೆ ಸೇರಿದ ಟ್ರ್ಯಾಕ್ಟರ್ ಇದಾಗಿದ್ದು, ಗುರುವಾರ ಮಧ್ಯಾಹ್ನ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಟ್ರ್ಯಾಕ್ಟರ್ ಗುದ್ದಿದ ರಭಸಕ್ಕೆ ಎರಡೂ ಬೈಕ್ ಚರಂಡಿಯಲ್ಲಿ ಬಿದ್ದಿವೆ. ಅಲ್ಲದೇ ಟ್ರ್ಯಾಕ್ಟರನ ಅರ್ಧಭಾಗವೂ ಸಹ ಚರಂಡಿಗೆ ಇಳಿದಿತ್ತು. ಬೈಕ್ ಬಳಿ ಯಾರು ಇಲ್ಲದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.