ತಾಲ್ಲೂಕು ವ್ಯವಹಾಸ ಉತ್ಪನ್ನಗಳ ಮಾರಾಟ ಸಹಕಾರ ಸಂಘ ರೈತ ಅಭ್ಯುದಯಕ್ಕೆ ಆದ್ಯತೆ

ಚಳ್ಳಕೆರೆ

     ತಾಲ್ಲೂಕು ವ್ಯವಸಾಯ ಉತ್ಪನ್ನಗಳ ಮಾರಾಟದ ಸಹಕಾರ ಸಂಘ ನಿಯಮಿತ 69 ವರ್ಷಗಳಿಂದ ತಾಲ್ಲೂಕಿನ ಕೃಷಿಯೂ ಸೇರಿದಂತೆ ಹಲವಾರು ವ್ಯಾಪಾರ ವಹಿವಾಟುಗಳಿಗೆ ಸಾಲ ಸೌಲಭ್ಯ ನೀಡಿ ಉತ್ತಮ ಲಾಭಗಳಿಸುವತ್ತ ಮುನ್ನಡೆದಿದೆ. ತಾಲ್ಲೂಕಿನ ಅತಿಹೆಚ್ಚು ಸಂಖ್ಯೆಯ ರೈತರು ಈ ಸಹಕಾರ ಸಂಘದ ಆರ್ಥಿಕ ನೆರವಿನಿಂದ ಮುನ್ನಡೆ ಸಾಧಿಸಿದ್ಧಾರೆ. ಸಂಘದ ನಿರಂತರ ಅಭಿವೃದ್ಧಿಗೆ ಪ್ರೇರಕ ಶಕ್ತರಾಗಿರುವ ಸಂಘದ ಉಪಾಧ್ಯಕ್ಷರು, ನಿರ್ದೇಶಕರು, ಶೇರುದಾರರು ಹಾಗೂ ಸಿಬ್ಬಂದಿ ವರ್ಗವನ್ನು ಅಭಿನಂದಿಸುವುದಾಗಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಸಿ.ವೀರಭದ್ರಬಾಬು ತಿಳಿಸಿದರು.

     ಅವರು, ಸೋಮವಾರ ಇಲ್ಲಿನ ವಾಸವಿ ಮಹಲ್‍ನಲ್ಲಿ ನಡೆದ ಸಂಘದ 2017-18ನೇ ಸಾಲಿನ ಸರ್ವ ಸದಸ್ಯರ ಸಭೆಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲ್ಲೂಕಿನಲ್ಲೇ ಅತಿ ಹೆಚ್ಚು ಶೇರು ಬಂಡವಾಳವನ್ನು ಹೊಂದಿರುವ ಸಹಕಾರಿ ಸಂಸ್ಥೆ ನಮ್ಮದಾಗಿದ್ದು, ಕಳೆದ ಹಲವಾರು ವರ್ಷಗಳಿಂದ ರೈತ ಸಮುದಾಯಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ಕೃಷಿಕರ ಏಳಿಗೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ.

     ಪ್ರಸ್ತುತ 2016-17 ಮತ್ತು 2017-18ನೇ ಸಾಲಿನಲ್ಲಿ ಒಟ್ಟು 388 831 ಲಕ್ಷಗಳ ನಿವಾಳ ಲಾಭವನ್ನು ಪಡೆದಿದ್ದು ಅದನ್ನು ಎಲ್ಲಾ ಶೇರುದಾರರಿಗೂ ಸಮಾನವಾಗಿ ಹಂಚಿಕೆ ಮಾಡಲಾಗುವುದು ಎಂದರು.

     ಸಂಘದ ಪ್ರಭಾರ ಕಾರ್ಯದರ್ಶಿ ಬಿ.ಆರ್.ಜಯಪ್ಪ, ಪ್ರಾರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿ ತಾಲ್ಲೂಕಿನ ಹಿರಿಯದಾದ ಮತ್ತು ರೈತ ಸಮುದಾಯದ ಅಭ್ಯುದಯವನ್ನು ಬಯಸುವ ವ್ಯವಸಾಯ ಉತ್ಪನ್ನನಗಳ ಸಂಘ ಹಲವಾರು ಸಮಸ್ಯೆಗಳ ಮಧ್ಯೆಯೂ ಸಹ ಉತ್ತಮ ಲಾಭ ಪಡೆಯುವಂತೆ ದಾಪುಗಾಲಿಟ್ಟಿದೆ. ಸಂಘದಲ್ಲಿ ಎಬಿಸಿ ತರಗತಿಯ ವಿಭಾಗಗಳನ್ನಾಗಿ ಮಾಡಿದ್ದು, ಈ ವರ್ಗಗಳಿಂದಲೇ 20 ಕೋಟಿಗೂ ಹೆಚ್ಚು ಶೇರು ಬಂಡವಾಳ ನಮ್ಮಲ್ಲಿದೆ ಎಂದರು.

      ವಾರ್ಷಿಕ ಮಹಾಸಭೆಯಲ್ಲಿ ಉಪಾಧ್ಯಕ್ಷ ಸೋಮಶೇಖರರೆಡ್ಡಿ, ನಿರ್ದೇಶಕರಾದ ಕೆ.ಚಂದ್ರಪ್ಪ, ಎನ್.ಬಿ.ತಿಪ್ಪೇಸ್ವಾಮಿ , ಬಿ.ಎನ್.ನಾಗರಾಜು , ಮಹಮ್ಮದ್ ರಫೀ, ಬಿ.ತಿಪ್ಪೇಸ್ವಾಮಿ, ಆರ್.ಮಲ್ಲೇಶಪ್ಪ, ರತ್ನಮ್ಮ, ಎಲೆ ವೀರಭದ್ರಪ್ಪ, ಕಲ್ಲೇಶಪ್ಪ , ಕೆ.ಟಿ.ನಿಜಲಿಂಗಪ್ಪ, ಕೆ.ರುದ್ರಮುನಿ, ಸಹಕಾರ ಸಂಘಗಗಳ ಸಹಾಯಕ ನಿಬಂಧಕ ಸಿದ್ದಿಕ್ ಮುಂತಾದವರು ಹಾಜರಿದ್ದರು.

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap