ಕಂಪ್ಲಿ
ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿಗಳಿಂದ ಹಮ್ಮಿಕೊಂಡಿದ್ದ ಕಂಪ್ಲಿ ಹೋಬಳಿಯ ವಿಕಲಚೇತನ ಮಕ್ಕಳ ಪಾಲಕ, ಪೋಷಕರಿಗಾಗಿ ಒಂದು ದಿನ ಸಮಾಲೋಚನ ಕಾರ್ಯಾಗಾರವನ್ನು ಇಲ್ಲಿನ ಸತ್ಯನಾರಾಯಣ ಪೇಟೆಯ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ನಡೆಸಲಾಯಿತು.
ಕಾನೂನು ಸಲಹೆಗಾರರಾಗಿ ಮಾತನಾಡಿದ
ವಕೀಲರಾದ ವೆಂಕಟೇಶ್‍ರವರು, ಅಂಗವಿಕಲ ಮಕ್ಕಳ ಶೈಕ್ಷಣಿಕ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಪಡೆಯಲು ವೈದ್ಯಕೀಯ ಪ್ರಮಾಣ ಪತ್ರ ಅಗತ್ಯವಿದ್ದು, ವೈದ್ಯಕೀಯ ಪ್ರಮಾಣ ಪತ್ರ ಪಡೆದುಕೊಳ್ಳುವಲ್ಲಿ ಪೋಷಕರು ಮುತುವರ್ಜಿವಹಿಸಬೇಕು. ಮಕ್ಕಳ ಅಂಗವೈಕಲ್ಯ ಕುರಿತು ಯೋಚಿಸದೆ, ಮಕ್ಕಳ ಸರ್ವಾಂಗೀಣ ಭವಿಷ್ಯ ರೂಪಿಸಲು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಮುಂದಾಗಬೇಕು. ಈ ದಿಸೆಯಲ್ಲಿ ಅಂಗವಿಕಲ ಮಕ್ಕಳ ವೈದ್ಯಕೀಯ ಪ್ರಮಾಣ ಪತ್ರ ಪ್ರಮುಖವಾಗಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ವೈದ್ಯಕೀಯ ಪ್ರಮಾಣ ಪತ್ರ ಪಡೆಯುವ, ಬಸ್, ರೈಲ್ವೆ ಪಾಸ್ ಸೇರಿ ನಾನಾ ಸೌಲಭ್ಯಗಳನ್ನು ಪಡೆಯಲು ಬೇಕಾದ ಪ್ರಮಾಣ ಪತ್ರಗಳು, ಈ ದಾಖಲೆಗಳನ್ನು ಪಡೆಯುವ ಮಾರ್ಗ ಕುರಿತು ಮಾಹಿತಿ ನೀಡಿದರು. ಅಲ್ಲದೆ, ಮಕ್ಕಳನ್ನು ಯಾವುದೇ ಕಾರಣಕ್ಕೂ ಶಿಕ್ಷಣ ವಂಚಿತರನ್ನಾಗಿಸದೆ, ನಿತ್ಯ ಶಾಲೆಗೆ ಕಳುಹಿಸುವಲ್ಲಿ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.
ತಾಲೂಕು ಬಿಐಆರ್‍ಟಿಯ ಬಿ.ಮೆಹಬೂಬ್‍ಬಾಷಾ ಮಾತನಾಡಿ, ಶಿಕ್ಷಣ ಇಲಾಖೆಯಿಂದ ನಡೆಯುವ ವೈದ್ಯಕೀಯ ತಪಾಸಣೆಗೆ ಎಲ್ಲಾ ವಿಕಲಚೇತನ ಮಕ್ಕಳನ್ನು ಪಾಲಕ ಪೋಷಕರು ತಮ್ಮೊಂದಿಗೆ ಕರೆ ತರುವಂತೆ ತಿಳಿಸಲಾಯಿತು. ಅಲ್ಲದೆ, 2018ರ ಸೆ.28ರಂದು ಮರಿಯಮ್ಮನಹಳ್ಳಿ, 29ರಂದು ಹೊಸಪೇಟೆಯ ವಿವೇಕಾನಂದ ಶಾಲೆಯಲ್ಲಿ ಇಂತಹ ಕಾರ್ಯಗಾರಗಳನ್ನು ಅಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಶಾಲೆ ಮುಖ್ಯಗುರು ದೊಡ್ಡಮನಿ, ಎಸ್‍ಡಿಎಂಸಿ ಅಧ್ಯಕ್ಷ ಕೆ.ಯರ್ರಿಸ್ವಾಮಿ, ಪಂಪಾನಾಯ್ಕ, ಡಿ.ಎನ್.ಕರಿಬಸಪ್ಪ, ಬಿಐಆರ್‍ಟಿ ವಿಜಯಕುಮಾರ್ ಸೇರಿ ಐದು ಕ್ಲಸ್ಟರ್ ವ್ಯಾಪ್ತಿಯ ಅಂಗವಿಕಲಚೇತನ ಮಕ್ಕಳ ಪೋಷಕರು ಪಾಲ್ಗೊಂಡಿದ್ದರು. ವಿಜಯಕುಮಾರ್ ವಂದಿಸಿದರು, ಕರಿಬಸಪ್ಪ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
