ಚಿತ್ರದುರ್ಗ :
ಡಾ. ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ರೈತ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳ ತಂಡ ಭದ್ರಾ ಮೇಲ್ದಂಡೆ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ತ್ವರಿತಗತಿಯಲ್ಲಿ ಯೋಜನೆ ಪೂರ್ಣಗೊಳಿಸುವಂತೆ ಆಗ್ರಹಿಸಿದರು.
ಜಾನಕಲ್ ಟನೆಲ್ (ಸುರಂಗ), ಹಾಲುರಾಮೇಶ್ವರ, ಮಧುರೆ, ಸಾಣೇಹಳ್ಳಿ, ಅಜ್ಜಂಪುರ, ಪಂಪ್‍ಹೌಸ್, ತರೀಕೆರೆ, ಭದ್ರಾ ಜಲಾಶಯ ಮತ್ತು ಮುತ್ತಿನಕೊಪ್ಪ ಹತ್ತಿರ ಭದ್ರಾ ಮೇಲ್ದಂಡೆಗೆ ನೀರು ವರ್ಗಾವಣೆಗೊಳ್ಳುವ ಸ್ಥಳಗಳ ಕಾಮಗಾರಿಗಳ ಪ್ರಗತಿಯನ್ನು ವೀಕ್ಷಿಸಿತು.
ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮಿಗಳು, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ಮಾಜಿಶಾಸಕ ಬಿ.ಜಿ.ಗೋವಿಂದಪ್ಪ, ತರೀಕೆರೆ ಶಾಸಕ ಡಿ.ಎಸ್. ಸುರೇಶ್, ರೈತ ಮುಖಂಡರುಗಳಾದ ಹೊರಕೇರಪ್ಪ, ಸಿದ್ರಾಮಣ್ಣ, ಸಿದ್ದವೀರಪ್ಪ, ನುಲೇನೂರು ಶಂಕ್ರಪ್ಪ, ಸುರೇಶ್‍ಬಾಬು, ವೀರೇಂದ್ರಕುಮಾರ್, ಜಿ.ಪಂ. ಸದಸ್ಯರಾದ ಶಶಿಕಲಾ ನಟರಾಜ್, ಕೆ.ಸಿ.ಲಿಂಗರಾಜ್, ಎಸ್‍ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ ಸೇರಿದಂತೆ ನೂರಾರು ರೈತರು 7 ಬಸ್ ಹಾಗು 20ಕ್ಕು ಹೆಚ್ಚು ಕಾರುಗಳಲ್ಲಿ ತೆರಳಿ ಕಾಮಗಾರಿಗಳನ್ನು ವೀಕ್ಷಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
