ಸಾಂಸ್ಕೃತಿಕ ಸ್ಪರ್ಧೇಗಳನ್ನು ಉದ್ಘಾಟನೆ

ಹಾನಗಲ್ಲ :

     ಶಿಕ್ಷಣಕ್ಕೆ ಜಾಗತಿಕ ಮಟ್ಟದ ಸ್ಪರ್ಧೆ ಇರುವಾಗ ಕೀಳರಿಮೆ ತೊರೆದು ಛಲದಿಂದ ಅಧ್ಯಯನಕ್ಕೆ ಮುಂದಾಗುವುದರೊಂದಿಗೆ ಎಲ್ಲ ಹಂತದಲ್ಲಿ ಪ್ರತಿಭೆಯ ಮೆರೆಯುವ ಅಗತ್ಯವಿದೆ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು.

     ಶನಿವಾರ ಹಾನಗಲ್ಲಿನ ಕೆಎಲ್‍ಇ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಸಾಂಸ್ಕತಿಕ ಸ್ಪಧೇಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾರೂ ಧಡ್ಡರಲ್ಲ. ನಿರಂತರ ಪ್ರಯತ್ನ, ಧ್ಯಾನಸ್ಥ ಓದಿನ ಮೂಲಕ ಯಶಸ್ಸು ಸಾಧ್ಯ. ಆದರೆ ಸ್ಪರ್ಧಾ ಮನೋಭಾವವಿಲ್ಲದೆ ನಮ್ಮ ಗುರಿ ತಲುಪುವುದು ಕಷ್ಟ ಸಾಧ್ಯ. ನಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿ ಅವಕಾಶ ಪಡೆಯುವ ಕಾಲ ಇದಾಗಿದೆ ಎಂದರು.

      ಕೇವಲ ಪುಸ್ತಕ ಜ್ಞಾನಕ್ಕೆ ಮಾತ್ರ ಸೀಮಿತವಾಗದೇ ಕ್ರೀಡೆ, ಸಾಂಸ್ಕತಿಕ ಚಟುವಟಿಕೆಗಳಲ್ಲಿಯೂ ಮನಸ್ಸನ್ನು ತೊಡಿಗಿಸಿಕೊಳ್ಳಬೇಕು. ಹಾಡು, ನೃತ್ಯ, ರಸಪ್ರಶ್ನೆ, ಆಶುಭಾಷಣದಂತಹ ವಿಷಯಗಳ ಕಲೆ ನಮ್ಮನ್ನು ಬುದ್ಧಿವಂತರನ್ನಾಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾಭ್ಯಾಸವೆಂದರೆ ಅದು ಸರಕಾರಿ ನೌಕರಿಗೆ ಎಂಬ ಕಾಲ ಹೋಗಿದೆ ನಮ್ಮ ಪ್ರತಿಭೆಯಿಂದ ಮಾತ್ರ ಉತ್ತಮ ಉದ್ಯೋಗ ಕೈಗೊಳ್ಳಲು ಸಾಧ್ಯ. ಶಿಕ್ಷಣ ಸ್ಪರ್ಧೆಗೆ ಮಾತ್ರವಲ್ಲ. ಬದುಕಿನ ಯಶಸ್ಸಿಗೂ ವಿದ್ಯೆ ಬೇಕು ಎಂದ ಅವರು, ಸಮಯ ಯಾರ ಸ್ವತ್ತೂ ಅಲ್ಲ. ಸಮಯ ಹಾಳು ಮಾಡಿಕೊಂಡರೆ ಅದರಂತ ನಷ್ಟ ಇನ್ನೊಂದಿಲ್ಲ. ಇದನ್ನು ತುಂಬಿಕೊಳ್ಳಲೂ ಸಾದ್ಯವಿಲ್ಲ ಎಂದು ಉದಾಸಿ ಎಚ್ಚರಿಸಿದರು.

      ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯ ಶ್ರೀಧರ ಉರಣಕರ, ಸ್ಪರ್ಧೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಸೋಲು ಗೆಲುವಿಗಿಂತ ನಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುವುದೇ ಸ್ಪರ್ಧೆಯಾಗಿದೆ. ನಮ್ಮಲ್ಲಿರುವ ಕಲೆಯನ್ನು ಸಮಾಜಕ್ಕೆ ನೀಡಿ ಆನಂದಿಸುವುದು ಮನುಷ್ಯನ ಸಹಜದ ಧರ್ಮ. ನಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸದಿದ್ದರೆ ಅದು ಸಾಯುತ್ತದೆ ಎಂದ ಅವರು, ಶಾಲಾ ಕಾಲೇಜು ದಿನಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಬೆಳಗಿಸುವುದಕ್ಕಾಗಿಯೇ ಇಂಥ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ ಎಂದರು.

      ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ, ಉಪನ್ಯಾಸಕರಾದ ಗುಡದಯ್ಯ ಕುರಬರ್, ಶಿವಕುಮಾರ ಯತ್ತಿನಹಳ್ಳಿ, ಎ.ಎಸ್.ಅಜಿತಕುಮಾರ , ಹೊನ್ನಪ್ಪ ಬೋವಿ, ಮಹಮ್ಮದರಫಿಕ್, ಚೇತನ್ ನಾಗಜ್ಜನವರ, ಪರಸಪ್ಪ, ವಿಶ್ವನಾಥ ಹೊಂಬಳಿ, ಮಂಜುನಾಥ ಹಡಪದ ಅತಿಥಿಗಳಾಗಿದ್ದರು.
                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link