ಹಾವೇರಿ :
ನಕಲಿ ವೈದ್ಯನ ನಿರ್ಲಕ್ಷದಿಂದ ಬಾಲಕ ಸಾವಿಗೆ ಕಾರಣವಾಗಿದ್ದ ವೈದ್ಯನನ್ನು ಶುಕ್ರವಾರ ಹಾವೇರಿ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಹಾವೇರಿ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಸೆ. 10 ರಂದು ಸೋಮವಾರ ತಡ, ನಕಲಿ ವೈದ್ಯನ ನಿರ್ಲಕ್ಷದಿಂದ 13 ವರ್ಷದ ಹರೀಶ ಬಸವಣ್ಣೆಪ್ಪ ದುರಗಣ್ಣನವರ ಮೃತ ಪಟ್ಟಿದ್ದ, ಮಗನ ಸಾವಿಗೆ ಕಾರಣವಾದ ವೈದ್ಯನ ವಿರುದ್ಧ ಮೃತ ಬಾಲಕ ಪಾಲಕರಾದ ಬಸವಣ್ಣೆಪ್ಪ ದುರಗಪ್ಪನವರ ಹಾಗೂ ತಾಯಿ ಜಯಮ್ಮ ದುರಗಣ್ಣನವರ ಅವರು ಹಾವೇರಿ ಗ್ರಾಮೀಣ ಠಾಣೆಯಲ್ಲಿ ಸೆ.11 ರಂದು ಮಂಗಳವಾರ ಬೆಳಗಿನ 3 ಗಂಟೆಯ ನಕಲಿ ವೈದ್ಯನ ಮೇಲೆ ದೂರು ದಾಖಲು ಮಾಡಿದ್ದರು.
ಜೊತೆಗೆ ಮೃತ ಬಾಲಕನ ಸಂಬಂಧಿಕರು ಜಿಲ್ಲಾ ಆಸ್ಪತ್ರೆಯಲ್ಲಿ ಶವ ವಿಟ್ಟು, ಆರೋಪಿ ನಕಲಿ ವೈದ್ಯನ ಬಂಧಿಸುವ ತನಕ ಶವ ತೆಗೆದುಕೊಂಡು ಹೋಗುವುದಿಲ್ಲ ಎಂದು ಪಟ್ಟು ಹಿಡಿದರು. ಘಟನೆ ಸ್ವರೂಪ ಮನಗಂಡ ಪೊಲೀಸ್ ಇಲಾಖೆ ಮಧ್ಯ ಪ್ರವೇಶ ಮಾಡಿ, ಮೃತ ಬಾಲಕ ಸಂಬಂಧಿಕರನ್ನು ಸಮಾಧಾನ ಪಡಿಸಿ, ಆರೋಪಿಯನ್ನು ತಕ್ಷಣ ಬಂಧಿಸಲಾಗುವುದು ಎಂಬ ಭರವಸೆ ನೀಡಿದ್ದರು. ಇದಾದ ಬಳಿಕ, ಮೃತ ಬಾಲಕ ಪಾಲಕರು ಜಿಲ್ಲಾ ಪೊಲೀಸ್ ವರಿಷ್ಠಾಧೀಕಾರಿಗಳ ಮನವಿ ಸಲ್ಲಿಸಿ ನಕಲಿ ವೈದ್ಯನನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಇದರಿಂದ ಎಚ್ಚತ್ತುಕೊಂಡ ಪೊಲೀಸ್ ಇಲಾಖೆಯ ಅಧಿಕಾರಿಗಳು ವಿಶೇಷ ತಂಡ ರಚಿಸಿ, ಸೆ. 21 ರಂದು ಆರೋಪಿಯನ್ನು ಬಂಧಿಸಿ, ನ್ಯಾಯಾಲಕ್ಕೆ ಹಾಜರು ಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
