ಲಾಕ್ ಡೌನ್ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ : ಗೃಹ ಸಚಿವ

ಬೆಂಗಳೂರು

     ಸಾರ್ವಜನಿಕರು ಲಾಕ್ ಡೌನ್ ನಿಯಮ ಪಾಲಿಸಲೇಬೇಕು. ಯಾರೂ ಸಹ ಪೊಲೀಸ್ ಪಡೆ ಬಳಸುವಂತಹ ಅನಿವಾರ್ಯ ಪರಿಸ್ಥಿತಿ ಸೃಷ್ಟಿಸಬಾರದೆಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

     ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಜಿಲ್ಲೆಗಳಲ್ಲಿ ದಿನಸಿ ಸಾಮಾನು ಖರೀದಿಗೆ ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶ ಮಾಡಿಕೊಡಲಾಗಿದೆ.12,ಗಂಟೆ ಒಳಗೆ ನಿಮ್ಮ ನಿಮ್ಮ ವ್ಯವಹಾರಗಳನ್ನು ಮುಗಿಸಿಕೊಳ್ಳಬೇಕು. ಪೊಲೀಸ್ ಬಲ ಬಳಸುವ ಅನಿವಾರ್ಯತೆ ತಂದುಕೊಡಬೇಡಿ. ಅಂತಹ ಪರಿಸ್ಥಿತಿ ಉದ್ಭವವಾದರೆ ಪೊಲೀಸ್ ಪಡೆ ಬಳಸುವ ಅನಿವಾರ್ಯತೆ ತಂದರೆ ಬಳಸಲೇಬೇಕಾತ್ತದೆ ಎಂದು ಬೊಮ್ಮಾಯಿ ಎಚ್ಚರಿಸಿದರು.

    ಪೊಲೀಸ್ ಇಲಾಖೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಪಾಲನೆ ಮಾಡಲು ಕಟ್ಟುನಿಟ್ಟಾದ ಕ್ರಮ ತೆಗೆದುಕೊಂಡಿದ್ದಾರೆ. ಹಲವಾರು ಬ್ಯಾರಿಕೇಡ್ ಹಾಕಿ, ಫ್ಲೈ ಓವರ್ ಬಂದ್ ಮಾಡಿದ್ದೇವೆ. ವಾಹನ ದಟ್ಟಣೆ ಕಡಿಮೆ ಇದೆ.ಲಾಕ್ ಡೌನ್ ವಾತಾವರಣ ನಿರ್ಮಾಣವಾಗಿದೆ.ಅಗತ್ಯ ಸೇವೆಗಳಿಗೆ ಅವಕಾಶ ಕೊಡುವಂತೆ ಪೊಲೀಸರಿಗೆ ಸೂಚಿಸಿದ್ದೇವೆ.

    ಪೊಲೀಸರು ಸಹಕಾರ ಕೊಟ್ಟು ಕೆಲಸ ಮಾಡುತ್ತಾರೆ, ಜನರೂ ಕೂಡಾ ಸಹಕಾರ ನೀಡಬೇಕು.ಲಾಕ್ ಡೌನ್ ಯಶಸ್ವಿ ಆಗಬೇಕಾದರೆ ಜನರ ಸ್ವಯಂಪ್ರೇರಿತ ಲಾಕ್ ಡೌನ್ ಆಗಬೇಕು ಎಂದು ಮನವಿ ಮಾಡಿದರು.ಈ ಬಾರಿ ಹೆಚ್ಚು ಸೋಂಕು ಇರುವ ಕಾರಣ ಚೈನ್ ಬ್ರೇಕ್ ಮಾಡಲು ಲಾಕ್ ಡೌನ್ ಮಾಡಿದ್ದೇವೆ. ಅನಾವಶ್ಯಕ ಓಡಾಟ ತಡೆಗಟ್ಟಿ ಎಂದು ಪೊಲೀಸರಿಗೆ ಸೂಚಿಸಿದ್ದೇವೆ. ಫೋರ್ಸ್ ಬಳಸುವ ಅನಿವಾರ್ಯತೆ ಬರದಂತೆ ಜನರು ಸಹಕಾರ ಮಾಡಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link