ಬಿಎಂಟಿಸಿ ಬಸ್ ನಲ್ಲಿ ಬೆಂಕಿ

ಬೆಂಗಳೂರು

    ನಗರದ ಹೊರವಲಯದ ಮಾದವಾರ ಬಳಿ ಇಂಜಿನ್ ಬಳಿ ಬೆಂಕಿ ಕಾಣಿಸಿಕೊಂಡ ಕೂಡಲೇ ಚಾಲಕ ಸಮಯಪ್ರಜ್ಞೆ ತೋರಿ ಪ್ರಯಾಣಿಕರನ್ನು ಕೆಳಗಿಳಿಸಿ ಭಾರೀ ದುರಂತ ತಪ್ಪಿಸಿದ್ದಾರೆ.

    ನೆಲಮಂಗಲದಿಂದ ಶಿವಾಜಿನಗರಕ್ಕೆ ತೆರಳುತಿದ್ದ ಬಿಎಂಟಿಸಿ ಬಸ್‍ನ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಬೆಂಕಿ ಕಾಣಿಸಿಕೊಂಡ ಕೂಡಲೇ ಚಾಲಕ ಬಸ್ ನಿಲ್ಲಿಸಿದ್ದು ಹತ್ತಿರದಲ್ಲಿದ್ದ ನವಯುಗ ಟೋಲ್ ಸಿಬ್ಬಂದಿಗಳು ಬೆಂಕಿಯು ಇಡೀ ಬಸ್‍ಗೆ ಆವರಿಸದಂತೆ ನಂದಿಸಿದ್ದಾರೆ.
ಬೆಂಕಿ ಅವಘಡದ ಸಂದರ್ಭದಲ್ಲಿ ಬಸ್ಸಿನಲ್ಲಿ ಶಾಲಾ ಮಕ್ಕಳು, ವೃದ್ಧರು ಸೇರಿದಂತೆ 35 ಮಂದಿ ಪ್ರಯಾಣಿಕರಿದ್ದರು. ಈ ಅವಘಡದಿಂದಾಗಿ ಪ್ರಯಾಣಿಕರಿಗೆ ಯಾವುದೇ ಪ್ರಾಣಾಹಾನಿಯಾಗಿಲ್ಲನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಚಾಲಕನ ಅಸಭ್ಯ ವರ್ತನೆ

    ಆಶೋಕನಗರ ಪೊಲೀಸ್ ಠಾಣೆಯ ಸನಿಹದಲ್ಲಿರುವ ಗರುಡಾ ಮಾಲ್ ಬಳಿ ಆಟೋ ಚಾಲಕನೊಬ್ಬ ಮಹಿಳೆಯರ ಮುಂದೆಯೇ ಪ್ಯಾಂಟ್ ಬಿಚ್ಚುತ್ತೇನೆ ಎಂದು ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದಾನೆ..

    ಮಹಿಳೆಯೊಬ್ಬರು ಗುರುಡಾ ಮಾಲ್ ಬಳಿ ಭಾನುವಾರ ಸಂಜೆ 5ರ ವೇಳೆ ಕಾಫಿ ಕುಡಿಯುತ್ತಿದ್ದಾಗ ಅವರನ್ನು ನೋಡಿ ಕೆಣಕಿದ ಚಾಲಕ ಅಸಭ್ಯವಾಗಿ ವರ್ತಿಸಿ ಗುರಾಯಿಸಿದ್ದಾನೆ ಇದನ್ನು ಕಂಡ ಮಹಿಳೆ ಬೈದಿದ್ದಳು.

     ಯಾಕೆ ನನ್ನನ್ನೇ ನೋಡುತ್ತಿದ್ದೀರಿ ನಿಮ್ಮ ಕೆಲಸ ಮಾಡಿ ಎಂದು ಮಹಿಳೆ ಬುದ್ಧಿವಾದ ಹೇಳಿದ್ದಳು. ಆದರೆ, ಆಟೋ ಚಾಲಕ ನನ್ನಿಷ್ಟ ನಾನು ಗುರಿಯಾಸ್ತಿನಿ, ಪ್ಯಾಂಟ್‍ನಾದ್ರು ಬಿಚ್ಚುತೇನೆ ಎಂದು ಅಸಭ್ಯವಾಗಿ ಮಾತನಾಡಿದ್ದ. ಇದರಿಂದ ಸಿಟ್ಟಿಗೆದ್ದ ಮಹಿಳೆ ವಿಡಿಯೋ ಮಾಡಲು ಮುಂದಾದಾಗ ಚಾಲಕ ತನ್ನ ದುರ್ವರ್ತನೆಯನ್ನ ನಿಲ್ಲಿಸಿದ್ದ.

     ಬೆಂಗಳೂರು ಸಿಟಿ ಪೊಲೀಸ್ ಫೇಸ್ ಬುಕ್ ಪೇಜ್‍ನಲ್ಲಿ ವಿಡಿಯೋವನ್ನು ಟ್ಯಾಗ್ ಮಾಡಲಾಗಿದ್ದು, ಬೆಂಗಳೂರು ಪೊಲೀಸರೇ ಬೇಗ ಎಚ್ಚೆತ್ತುಕೊಳ್ಳಿ ಇದಕ್ಕೆ ಸರಿಯಾದ ಕ್ರಮ ತೆಗೆದುಕೊಳ್ಳಿ ಎಂದ ಮಹಿಳೆ ವಿನಂತಿಸಿಕೊಂಡಿದ್ದಾಳೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link