ದಾವಣಗೆರೆ :
ಇಲ್ಲಿನ ಎಸ್ಓಜಿ ಕಾಲೋನಿಯ ಶ್ರೀಆಂಜನೇಯ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಮಂಗಳವಾರ ಕಿವುಡ ಮತ್ತು ಮೂಕ ಮಕ್ಕಳಿಗೆ ಉಚಿತ ಕ್ಷೌರವನ್ನು ಮಾಡಲಾಯಿತು.
ಈ ಸಮಿತಿ ವತಿಯಿಂದ ಪ್ರತಿ ತಿಂಗಳು ಡಿಸಿಎಂ ಟೌನ್ಶಿಫ್ನಲ್ಲಿನ ಶ್ರೀ ಮೌನೇಶ್ವರಿ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯ 370 ಜನ ಮಕ್ಕಳಿಗೆ ಕ್ಷೌರವನ್ನು ಕಳೆದ ಒಂದುವರೆ ವರ್ಷದಿಂದ ಮಾಡಲಾಗುತ್ತಿದೆ.ಇಂದಿನ ಈ ಕಾರ್ಯಕ್ರಮದಲ್ಲಿ ಪಿ.ಜಿ.ಸಂದೀಪ್, ಧನ್ರಾಜ್, ಶ್ರೀಧರ್, ಹರೀಶ್, ಅನಿಲ್, ತಿರುಮಲೇಶ್, ಸಾಗರ್, ಅಭಿ, ಮಂಜು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ನಾಳೆ ಶ್ರವಣ ದೋಷವುಳ್ಳ ಮಕ್ಕಳ ದಿನಾಚರಣೆ ಅಂಗವಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಶ್ರವಣದೋಷವುಳ್ಳ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಎಲ್ಲಾ ಶ್ರವಣದೋಷವುಳ್ಳ ಮಕ್ಕಳಿಗೆ ಶುಭಾಶಯಗಳನ್ನು ಶ್ರೀ ಆಂಜನೇಯ ದೇವಸ್ಥಾನ ಸೇವಾ ಸಮಿತಿಯ ಮುಖಂಡರು ಕೋರಿದ್ದಾರೆ.
