ಉಚಿತ ಹೃದಯ ರೋಗ ಹಾಗೂ ಚಿಕ್ಕಮಕ್ಕಳ ತಪಾಸಣಾ ಶಿಬಿರ

ಶಿಗ್ಗಾವಿ :

      ತಾಲೂಕಿನ ಸಮಸ್ತ ಸಾರ್ವಜನಿಕರು ಸರಕಾರ ಹಾಗೂ ಸಂಘ ಸಂಸ್ಥೆಗಳ ಮುಖಾಂತರ ನಡೆಯುವ ಉಚಿತ ಆರೋಗ್ಯ ಶಿಬಿರಗಳ ಪ್ರಯೋಜನವನ್ನು ಪಡೆದು ನೆಮ್ಮದಿಯ ಜೀವನ ಕಳೆಯಬೇಕೆಂದು ಡಾ. ಮೃತ್ಯುಂಜಯ ತಿರ್ಲಾಪೂರ ಹೇಳಿದರು.

     ಪಟ್ಟಣದ ಮೃತ್ಯುಂಜಯ ನರ್ಸಿಂಗ್ ಹೊಂ ಶಿಗ್ಗಾವಿ ಹಾಗೂ ಸುಚಿರಾಯ ಆಸ್ಪತ್ರೆ ಹುಬ್ಬಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಹೃದಯ ರೋಗ ಹಾಗೂ ಚಿಕ್ಕಮಕ್ಕಳ ತಪಾಸಣಾ ಶಿಬಿರವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಇಂದಿನ ನಮ್ಮ ದೈನಂದಿನ ದಿನಚರಿ ಹಾಗೂ ನಾವು ಉಪಯೋಗಿಸುವ ಆಹಾರದ ಕಡೆಗೆ ಹೆಚ್ಚು ಗಮನಹರಿಸಿ ಜೀವನ ನಿರ್ವಹಣೆ ಮಾಡಬೇಕಾದ ಪ್ರಸಂಗ ಬಂದೊಂದಗಿದೆ ಮತ್ತು ಪ್ರತಿದಿನವು ವಿವಿಧ ತರಹದ ಒತ್ತಡಗಳಿಗೆ ಒಳಗಾಗಿ ನಾವು ಮಾನಸಿಕವಾಗಿ ಅಸಮತೋಲನವನ್ನು ಅನುಭವಿಸುತ್ತಿದ್ದೇವೆ ಆದ ಕಾರಣ ಕಡಿಮೆ ವೆಚ್ಚದಲ್ಲಿ ಹಾಗೂ ಉಚಿತವಾಗಿರುವ ಶಿಬಿರಗಳ ಮುಖಾಂತರ ನಮ್ಮ ಆರೋಗ್ಯವನ್ನು ನಾವು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕೆಂದರು.

     ಡಾ|| ರಾಣಿ ತಿರ್ಲಾಪೂರ ಮಾತನಾಡಿ ತಾಲೂಕಿನ ಜನತೆಯ ಸಹಕಾರದೊಂದಿಗೆ ವಿವಿಧ ಸಂಸ್ಥೆಗಳ ಮುಖಾಂತರ ಉಚಿತ ಆರೋಗ್ಯ ಶಿಬಿರಗಳನ್ನು ಮಾಡಿದ್ದೇವೆ ಆದರೆ ಹುಬ್ಬಳ್ಳಿಯ ಪ್ರತಿಷ್ಟಿತ ಶುಚಿರಾಯ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಶಿಬಿರವನ್ನು ಹಮ್ಮಿಕೊಂಡಿದ್ದು ವಿಶೇಷ ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಂಡು ಶಿಬಿರವನ್ನು ಯಶಸ್ವಿಗೋಳಿಸಬೇಕು ಎಂದು ವಿನಂತಿಸಿದ ಅವರು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 250 ಜನ ರೋಗಿಗಳು ನೊಂದಣಿಯಾಗಿ ಉಚಿತವಾಗಿ ಮದುಮೇಹ, ರಕ್ತದೊತ್ತಡ ಮಾಡಿ ಅದರಲ್ಲಿ 10 ಜನ ರೋಗಿಗಳನ್ನು ಹೃದಯ ಕಾಯಿಲೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ ಅವರಿಗೆ ಆಪ್ತಸಮಾಲೋಚನೆ ಮಾಡಿ  ಚಿಕಿತ್ಸೆ ಮಾಡಿಸಲಾಗುವುದು ಎಂದರು.

       ಶಿಬಿರದಲ್ಲಿ ಹುಬ್ಬಳ್ಳಿಯ ಶುಚಿರಾಯ ಆಸ್ಪತ್ರೆಯ ಖ್ಯಾತ ತಜ್ಞ ವೈದ್ಯರಾದ ಡಾ|| ಎನ್.ಎಸ್.ಹಿರೇಗೌಡರ, ಡಾ. ಹಳ್ಳದ, ಡಾ. ರಾಜಕುಮಾರ ಹಿರೇಮಠ, ಡಾ. ಸೊಹೆಲ್ ಅಂಬಿ, ಡಾ. ಉಸ್ಮಾನ ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಮೃತ್ಯುಂಜಯ ನರ್ಸಿಂಗ್ ಹೊಂನ ಸಿಬ್ಬಂದಿ ವರ್ಗದವರು ಹಾಗೂ ತಾಲೂಕಿನ ರೈತ ಬಾಂದವರು, ಮಹಿಳೆಯರು, ಚಿಕ್ಕಮಕ್ಕಳು, ಸಾರ್ವಜನಿಕರು ಉಪಸ್ಥಿರಿದ್ದು ಶಿಬಿರವನ್ನ ಯಶಸ್ವಿಗೋಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link