ಬಳ್ಳಾರಿ:
ನಗರದ ಮಿಲ್ಲರಪೇಟೆಯಲ್ಲಿರುವ ಜಿನ್ಸ್ ಗಾರ್ಮೆಂಟ್ ಕ್ಲಸ್ಟರ್ಗೆ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾಗಿರುವ ಗೌರವಗುಪ್ತಾ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚೀನಾದೊಂದಿಗೆ ಸ್ಪರ್ಧೆ(ಕಾಂಪೀಟ್ ವಿತ್ ಚೀನಾ) ಎಂಬ ಸರಕಾರ ಘೋಷಣಾ ಕಾರ್ಯಕ್ರಮದಡಿ ಬಳ್ಳಾರಿ ಜಿನ್ಸ್ ಕೂಡ ಇರುವುದರಿಂದ ಭೇಟಿ ನೀಡಿದ ಉಸ್ತುವಾರಿ ಕಾರ್ಯದರ್ಶಿ ಗೌರವ ಗುಪ್ತಾ ಅವರು ಜಿನ್ಸ್ ಹೋಲಿಗೆದಾರರೊಂದಿಗೆ ಸಂವಾದ ನಡೆಸಿದರು ಮತ್ತು ಕೌಶಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.
ಮುಂಡರಗಿ ಇಂಡಸ್ಟ್ರೀ ಟೌನ್ಶಿಫ್ನಲ್ಲಿ ಜೀವನೋಪಾಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು ಅಲ್ಲಿ ತಮಗೆ ಸೌಲಭ್ಯ ಒದಗಿಸಿಕೊಡಲಾಗುವುದು ಎಂದು ಕಾರ್ಯದರ್ಶಿ ಗೌರವಗುಪ್ತಾ ಅವರು ಹೇಳಿದರು.
ಈ ಸಂದರ್ಭದಲ್ಲಿ ಡಿಸಿ ರಾಮ್ ಪ್ರಸಾತ್ ಮನೋಹರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಂಜುನಾಥ ಗೌಡ, ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀಧರನಾಯಕ್, ಉಪನಿರ್ದೇಶಕ ವಿಠ್ಠಲರಾಜು ಇನ್ನೀತರರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ