ಧಾರಕಾರ ಮಳೆಗೆ ರೈತರ ತೋಟಗಳು ಜಲಾವೃತ್ತ

ಎಂ ಎನ್ ಕೋಟೆ :

     ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆ ಗ್ರಾಮದಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಕೆರೆ ಕಟ್ಟೆಗಳಿಗೆ ನೀರು ಬಂದಿದೆ. ರೈತರ ತೋಟಗಳು ಜಲಾವೃತ್ತವಾಗಿವೆ.ಸುಮಾರು 3ಗಂಟೆಗಳ ಕಾಲ ಧಾರಕಾರ ಮಳೆ ಸುರಿಯುತ್ತಿತ್ತು.

     ಎಂ ಎನ್ ಕೋಟೆ ಶ್ರೀ ಕೋಲ್ಲಾಪುರದಮ್ಮ ದೇವಾಲಯದ ಬಳಿ ಸೇತುವೆ ಜಾಲವೃತ್ತವಾಗಿ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತುಂಬ ಸಮಸ್ಯೆಯಾಗಿತ್ತು. ಅಲ್ಲಲ್ಲಿ ಸುರಿದ ಭಾರಿ ಮಳೆಯಿಂದಾಗಿ ರೈತರಿಗೆ ಸಂತಸ ತಂದಿದೆ.ಹಾಗಲವಾಡಿ, ಮಂಚಲದೊರೆ,ಅಳಿಲಘಟ್ಟ,ಹೊಸಕೆರೆ, ಶಿವಪುರ ಗ್ರಾಮಗಳಲ್ಲಿ ಹಳ್ಳ ಹರಿದಿದೆ. ಹಾಗಲವಾಡಿ ಕೆರೆಗೆ ನೀರು ಹರಿದಿದೆ.ಅಳಿಲಘಟ್ಟ ಅಮ್ಮನವರ ಕೆರೆಗೆ ಹಳ್ಳದ.ನೀರು ಹರಿದು ಸಾಕಷ್ವು ನೀರು ಕೆರೆಗೆ ಹರಿದಿದೆ.ಅಳಿಲಘಟ್ಟ ಗ್ರಾಮಸ್ಥರಿಗೆ ಕೆರೆಗೆ ನೀರು.ಹರಿದಿರುವುದರಿಂದ ಈ ಭಾಗದ ಜನರಿಗೆ ಸಂತಸ ತಂದಿದೆ.

      ಸಾಗಸಂದ್ರ ಗ್ರಾಮದಲ್ಲಿ ನಾರಾಯಣಪ್ಪ ನವರ ಮನೆಗೆ ಮಳೆ ನೀರು ಮನೆಯೊಳಗೆ ನುಗ್ಗಿದೆ ಇದರಿಂದ ಬಾಕ್ಸ್ ಚರಂಡಿಗಳು .ಇಲ್ಲ.ಆದ್ದರಿಂದ ನೀರು ಒಳಗಡೆ ಬರುತ್ತಿವೆ ಎಂದು ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ ಸಾಗಸಂದ್ರ ಗ್ರಾಮಸ್ಥರು.ಭಾರದ ಛಾಯಿಯಿಂದ ತತ್ತರಸುತ್ತಿದ್ದ ರೈತರಿಗೆ ಅತ್ತದ ಮಳೆ ಬಂದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

       ಇನ್ನು ಕೆಲವು ಗ್ರಾಮಗಳ್ಲಿ ರಸ್ತೆಗಳು ಕೆಸರು ಗದ್ದೆಯಾಗಿದೆ.ಬಂಡನಹಳ್ಳಿ ರಸ್ತೆಯಲ್ಲಿ.ದಿಚಕ್ರವಾಹನ ಸವಾರರು ಬಿದ್ದು ಎದ್ದು ಹೋಗಿರುವ ಘಟನೆಗಳು ಸಹ ಜರುಗಿದೆ.ಹಾಗಲವಾಡಿ ಹೋಬಳಿಗಳಲ್ಲಿ ರಾಗಿ ಬಿತ್ತನೆ ಮಾಡಿದ ರೈತರಿಗೆ ಸಂತಸ ಮೂಡಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ