ಹುಳಿಯಾರು
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಲಭಿಸಿದೆ. ಹುಳಿಯಾರಿನಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ತಾಲ್ಲೂಕಿನ ಒಟ್ಟು ಹದಿನಾರು ಕಾಲೇಜುಗಳು ಭಾಗವಹಿಸಿದ್ದು ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಥ್ಲೆಟಿಕ್ಸ್ ಹಾಗೂ ಗುಂಪು ಆಟದಲ್ಲಿ ಅತಿ ಹೆಚ್ಚು ಬಹುಮಾನಗಳನ್ನು ಪಡೆಯುವ ಮೂಲಕ ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ.
ಬಾಲಕರ ವಿಭಾಗದಲ್ಲಿ ಷಟಲ್ ಬ್ಯಾಡ್ಮಿಂಟನ್, ಚೆಸ್, ಕಬಡ್ಡಿ, ಖೋಖೋ, ಥ್ರೋಬಾಲ್, ರಿಲೇ, ಟೆನಿಕಾಯ್ಟ್ ಪ್ರಥಮ ಸ್ಥಾನವನ್ನೂ, ವಾಲಿಬಾಲ್‍ನಲ್ಲಿ ದ್ವಿತೀಯ ಸ್ಥಾನವನ್ನೂ ಪಡೆದುಕೊಂಡಿದೆ. ಬಾಲಕಿಯರ ವಿಭಾಗದಲ್ಲಿ ವಾಲಿಬಾಲ್, ಕಬಡ್ಡಿ, ಖೋಖೋ, ಥ್ರೋಬಾಲ್, ಟೆನ್ನಿಕಾಯ್ಟ್‍ಗಳಲ್ಲಿ ಪ್ರಥಮ ಸ್ಥಾನ, ಬಾಲ್ ಬ್ಯಾಡ್ಮಿಂಟನ್, ರಿಲೇ ಹಾಗೂ ಚೆಸ್‍ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಬಾಲಕರ ವಿಭಾಗದ 800 ಮೀ.ಓಟದಲ್ಲಿ ಕೆ.ವಿ.ಸುಹಾಸ್ (ಪ್ರ), 1500 ಮೀ. ಓಟದಲ್ಲಿ ಎಲ್.ಶರತ್ (ಪ್ರ), 5000 ಮೀ. ನಡಿಗೆಯಲ್ಲಿ ಡಿ.ಡಿ.ಹರೀಶ್ (ಪ್ರ), 100 ಮೀ. ಓಟದಲ್ಲಿ ಕೆ.ಬಿ.ಮನೋಜ್ (ದ್ವಿ), 200 ಮೀ. ಓಟದಲ್ಲಿ ಎನ್.ಎಸ್.ಕಿರಣ್ (ದ್ವಿ), 5000 ಮೀ. ನಡಿಗೆಯಲ್ಲಿ ಕೆ.ಮನೋಜ್ (ದ್ವಿ), ಎತ್ತರ ಜಿಗಿತ ಮತ್ತು ಜಾವಲಿನ್ ಎಸೆತದಲ್ಲಿ ಎನ್.ಪಿ.ತಿಪ್ಪೇಶ್ (ದ್ವಿ) ಬಹುಮಾನ ಪಡೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ 100 ಮೀ.ಓಟದಲ್ಲಿ ಆರ್.ರಷ್ಮೀ (ಪ್ರ), 800 ಮೀ. ಓಟದಲ್ಲಿ ಎಂ.ತನ್ಮಜಾಬಾಯಿ (ಪ್ರ), ಉದ್ದ ಜಿಗಿತದಲ್ಲಿ ಎಚ್.ಎಸ್.ಭೂಮಿಕ (ಪ್ರ), ಎತ್ತರಜಿಗಿತದಲ್ಲಿ ಎಚ್.ಎಸ್.ಭವ್ಯ (ಪ್ರ), ಜಾವಲಿನ್ ಥ್ರೋನಲ್ಲಿ ಯು.ಆರ್.ನಂದಿನಿ (ಪ್ರ), ಹ್ಯಾಮರ್ ಎಸೆತದಲ್ಲಿ ಪಿ.ಹಿಮಾಮಣಿ (ಪ್ರ), 3000 ಮೀ. ಓಟದಲ್ಲಿ ಎಲ್.ಆರ್.ಅಕ್ಷಿತಾ (ದ್ವಿ), ಎತ್ತರ ಜಿಗಿತದಲ್ಲಿ ಎಚ್.ಎಸ್.ಭೂಮಿಕಾ (ದ್ವಿ), ಹ್ಯಾಮರ್ ಥ್ರೋನಲ್ಲಿ ಭುವನೇಶ್ವರಿ (ದ್ವಿ), ತ್ರಿವಿಧ ಜಿಗಿತ ಹಾಗೂ ಡಿಸ್ಕಸ್ ಥ್ರೋನಲ್ಲಿ ಪಿ.ಹಿಮಾಮಣಿ ಅವರು ಬಹುಮಾನ ಪಡೆದಿದ್ದಾರೆ. ವಿಜೇತರಾದ ಕ್ರೀಡಾಳುಗಳನ್ನು ಪ್ರಾಚಾರ್ಯರಾದ ಪ್ರಸನ್ನ ಕುಮಾರ್, ಕ್ರೀಡಾ ಕಾರ್ಯದರ್ಶಿ ಯೋಗೀಶ್ ಹಾಗೂ ಎಲ್ಲಾ ಉಪನ್ಯಾಸಕರು ಹಾಗೂ ಬೋಧಕ ವರ್ಗದವರು ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ