ರಾಣಿಬೆನ್ನೂರ:
ತಾಲೂಕಿನ ಕರೂರ ಗ್ರಾಮದ ಶ್ರೀಸಿದ್ದಾರೋಢ ಮಠದಲ್ಲಿ ಶ್ರೀಸತ್ಯ ಶಿವಾನಂದ ಅವದೂತ್ ಶಿವಯೋಗಿಯವರ 32ನೇ ವರ್ಷದ ಪುಣ್ಯಾರಾಧನೆಯ ಅಂಗವಾಗಿ ಜಾನಪದ ಕಲಾವಿದ ಸುಲ್ತಾನಸಾಬ್ ಪಿಂಜಾರ್ ಹಾಗೂ ಕಲಾ ತಂಡದವರಿಂದ ಜಾನಪದ, ತತ್ವಪದ, ಭಜನೆ ಮತ್ತು ಸಂಗೀತ ಸಂಜೆ ಜರುಗಿತು.
ಜಾನಪದ ಕಲಾವಿದ ವಿಷ್ಣು ಬಂಗಾರಿ ಮಾತನಾಡಿ. ಸಂಗೀತಕ್ಕೆ ತಲೆದೂಗದವರಿಲ್ಲ, ಸಂಗೀತವು ಸರ್ವ ರೋಗಳ ನಿವಾರಣೆಯ ಧಿವ್ಯ ಔಷಧಿಯಾಗಿದೆ, ಸಂತಸದಿಂದ ಇದ್ದರೆ ಮಾತ್ರ ಆರೋಗ್ಯವಾಗಿರಲು ಸಾಧ್ಯ, ಗ್ರಾಮದ ಸರ್ವರೂ ಇಂತಹ ಸಂಗೀತದಲ್ಲಿ ಪಾಲ್ಗೊಂಡು ಸ್ವಲ್ಪ ಸಮಯವನ್ನಾದರೂ ಒತ್ತಡ ಜೀನದದಿಂದ ಮುಕ್ತವಾಗಿರು ಪ್ರಯತ್ತಸಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷ ಹೊನ್ನಪ್ಪ ಮುಡದ್ಯಾವಣ್ಣನವರ, ಸದಸ್ಯ ಜನಾರ್ಧನ ಕಡೂರ, ಜಮಲಾಸಾಬ್ ತಾವರಗೊಂದಿ, ಗಣೇಶ ಬ್ಯಾಡಗಿ, ಕೆಂಚಪ್ಪ ಸೂರ್ವೆ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ