ನೂತನ ಕಟ್ಟಡ ಉದ್ಘಾಟನೆ

ಹಾನಗಲ್ಲ :

     ಶಿಕ್ಷಣದ ಗುಣಮಟ್ಟ ಸುಧಾರಿಸದ ಹೊರತು ದೇಶದ ಯಾವುದೇ ಅಭಿವೃದ್ಧಿಗೆ ವೇಗದ ಚಾಲನೆ ದೊರೆಯಲು ಸಾಧ್ಯವಿಲ್ಲ ಎಂದು ಸಂಸದ ಶಿವಕುಮಾರ ಉದಾಸಿ ಎಚ್ಚರಿಸಿದರು.

      ರವಿವಾರ ಪಟ್ಟಣದ ನ್ಯೂ ಕಾಂಪೋಜಿಟ್ ಜ್ಯೂನಿಯರ್ ಕಾಲೇಜಿನ ಹೈಸ್ಕೂಲ ವಿಭಾಗದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಬದಲಾಗಬೇಕಾಗಿದೆ. ಇದಕ್ಕೇ ಮೂಲ ಶಿಕ್ಷಣವೇ ಹೊರತು ಉಳಿದವುಗಳು ನಂತರದ ಆದ್ಯತೆ. ಎರಡು ಕೋಟಿಗೂ ಅಧಿಕ ವಿದ್ಯಾರ್ಥಿಗಳು ದೇಶದ 800 ವಿಶ್ವವಿದ್ಯಾಲಯ ಹಾಗೂ 38 ಸಾವಿರ ಪದವಿ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಆದರೆ ಅವರು ಪಡೆಯುತ್ತಿರುವ ಶಿಕ್ಷಣದ ಗುಣಮಟ್ಟ ಹಾಗೂ ಸರಕಾರಗಳು ನೀಡುತ್ತಿರುವ ಸೌಲಭ್ಯಗಳು ಸಮಾಧಾನಕರವಾಗಿಲ್ಲ.

     ಒಂದು ಕಾಲದಲ್ಲಿ ದಾನಿಗಳಿಂದಲೇ ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೋಲಿಸಿದರೆ ಈಗ ಸರಕಾರ ನೀಡುತ್ತಿರುವ ಶಿಕ್ಷಣ ತೃಪ್ತಿಕರವಾಗಿಲ್ಲ. ಮಾಹಿತಿ ಜ್ಞಾನ ಅಗತ್ಯವಿದೆ ಎಂದು ಮಾತನಾಡುತ್ತೇವೆ. ಆದರೆ ಇದಕ್ಕೆ ಬೇಕಾದ ಸೌಲಬ್ಯ ಒದಗಿಸುತ್ತಿಲ್ಲ. ಪ್ರಾಥಮಿಕ ಶಿಕ್ಷಣದ ಹಣತದಿಂದಲೇ ಭವಿಷ್ಯದ ಗುರಿ ಇಲ್ಲದ ಆಲೋಚನೆ ಆಸ್ತೆ ಇಲ್ಲದ ಶಿಕ್ಷಣದ ಕಾರಣವಾಗಿ ನಮ್ಮ ದೇಶದಲ್ಲಿ ಶೈಕ್ಷಣಿಕ ಉನ್ನತಿ ಕಾಣದೇ ಇರುವುದು ವಿಷಾದದ ಸಂಗತಿ ಎಂದರು.

      ಕಟ್ಟಡ ಉದ್ಘಾಟಿಸಿ ಮಾತನಾಡಿದ ಶಾಸಕ ಸಿ.ಎಂ.ಉದಾಸಿ, 16 ವಿದ್ಯಾರ್ಥಿಗಳಿಂದ ಆರಂಭವಾದ ಜನತಾ ಶಿಕ್ಷಣ ಸಹಕಾರಿ ಸೌಹಾರ್ಧ ಸಂಸ್ಥೆಯ ಮೂಲ ಸಂಸ್ಥೆಯಾದ ನ್ಯೂ ಇಂಗ್ಲೀಷ ಸ್ಕೂಲ ಈಗ ಬೃಜತ್ ಆಗಿ ಬೆಳೆದು ಪ್ರತಿ ವರ್ಷ 2300 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ನೀಡುತ್ತಿದೆ.

      ಒಂದು ಕಾಲದಲ್ಲಿ ಈ ಸಂಸ್ಥೆಯೊಂದೆ ಪ್ರೌಢ ಶಿಕ್ಷಣ ನೀಡುತ್ತಿತ್ತು. ಆದರೆ ಈಗ ತಾಲೂಕಿನಲ್ಲಿ 11 ಖಾಸಗಿ ಪ್ರೌಢಶಾಲೆಗಳು ಸೇರಿ 56 ಪ್ರೌಢಶಾಲೆಗಳು ನಡೆಯುತ್ತಿವೆ. ಶೈಕ್ಷಣಿಕ ಬದಲಾವಣೆಗೆ ಇಚ್ಛಾಶಕ್ತಿ ಬೇಕು. ಜಾಗತಿಕ ಮಟ್ಟದಲ್ಲಿ ಸ್ಪರ್ಧೆಗೆ ಸಿದ್ಧರಾಗಬೇಕು. ವಿದ್ಯೇಯೆ ವಿಕಾಸದ ಹಾದಿ. ಪ್ರೌಢಶಾಲೆಗೆ ಗುಣಮಟ್ಟದ ಉತ್ತಮ ಕಟ್ಟಡ ನೀಡುತ್ತಿರುವುದರ ಜೊತೆಗೆ ಉತ್ತಮ ಶಿಕ್ಷಣ ನೀಡುವ ಸಾರ್ಥಕ ಸೇವೆ ಸಲ್ಲಿಸಲಿ ಎಂದರು.

      ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಮಾತನಾಡಿ, ಜ್ಞಾನ ದಾನ ಪವಿತ್ರವಾದುದು. ಅದು ಗುರುಸ್ಥಾನವನ್ನು ಶ್ರೇಷ್ಠತ್ವಕ್ಕೆ ಕೊಂಡ್ಯೋಯ್ಯುತ್ತದೆ. ಇದರಿಂದಲೇ ಶಿಕ್ಷಕನಿಗೆ ಗೌರವ ಬರುತ್ತದೆ. ಶಿಕ್ಷಣ ಎಂದರೆ ಗುಣಮಟ್ಟ ಎಂಬುದೆ ಅದರ ನೇರ ಅರ್ಥ ಎಂದ ಅವರು, ಕಲಿತ ಶಾಲೆ ಕಲಿಸಿದಿ ಗುರು ಅನ್ನ ನೀಡಿದ ಮನೆ ಮಾತೃ ಹೃದಯವನ್ನು ಎಂದೆಂದು ಮರೆಯದಿರಿ ಎಂಬ ಸಂದೇಶ ನೀಡಿದರು.

       ಸಂಸ್ಥೆಯ ಅಧ್ಯಕ್ಷ ಎ.ಎಸ್.ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು, ವಿಧಾನ ಪರಿಷತ್ ಸದಸ್ಯ ಪ್ರೋ.ಎಸ್.ವಿ.ಸಂಕನೂರ, ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಸ್.ಅಕ್ಕಿವಳ್ಳಿ, ಕಾರ್ಯಕ್ರಮದಲ್ಲಿದ್ದರು. ಉಪಾಧ್ಯಕ್ಷ ಪಿ.ವೈ.ಗುಡಗುಡಿ ಸ್ವಾಗತಿಸಿದರು. ಉಪನ್ಯಾಸಕ ರವಿ ಜಡೆಗೊಂಡರ ನಿರೂಪಿಸಿದರು.

                      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap