ಗಂಗಾಮತ ಸಮಾಜವನ್ನು ಪ.ಪಂಗಡಕ್ಕೆ ಸೇರ್ಪಡೆಗೆ ಒತ್ತಾಯಿಸಿ ಮನವಿ

ಹೂವಿನಹಡಗಲಿ :

     ಗಂಗಾಮತ ಮತ್ತು ಇನ್ನುಳಿದ 39 ಪರ್ಯಾಯ ಪದಗಳಿಂದ ಕರೆಯಲ್ಪಡುವ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ಹೂವಿನಹಡಗಲಿ ತಾಲೂಕು ಗಂಗಾಮತ ಸಮಾಜದಿಂದ ತಹಶೀಲ್ದಾರ ರಾಘವೇಂದ್ರರಾವ್‍ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

       ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಟೋಕ್ರೆ, ಕೋಳಿ, ಸಮುದಾಯಗಳು ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರವನ್ನು ಪಡೆದುಕೊಳ್ಳುತ್ತಿದ್ದಾರೆ. ಇದೇ ಸಮುದಾಯದ ಕೋಲಿ, ಕಬ್ಬಲಿಗ, ತಳವಾರ, ಅಂಬಿಗ, ಬೆಸ್ತ, ಬಾರಿಕ ಮೀನುಗಾರ, ಮತ್ತು ಗಂಗಾಮತ ಪದಗಳನ್ನು ಹೊಂದಿರುವ 39 ಪರ್ಯಾಯ ಸಮುದಾಯಗಳನ್ನು ರಾಜ್ಯದಲ್ಲಿರುವ ಜಿಲ್ಲೆಯ ಎಲ್ಲಾ ಭಾಗದಲ್ಲಿಯೂ ಕೂಡಾ ಎಸ್.ಟಿ. ಪ್ರಮಾಣಪತ್ರ ನೀಡಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.

      ಉತ್ತರ ಕರ್ನಾಟಕದ ಆಧಿವಾಸಿ ಕಬ್ಬಲಿಗ ಸಮಾಜವನ್ನು ಪ್ರವರ್ಗ 1ಕ್ಕೆ ಸೇರಿಸಲಾಗಿದೆ. ಇದು ಕಾನೂನು ಬಾಹಿರವಾಗಿದೆ ಹೊರತು, ಸಂವಿಧಾನಿಕವಾಗಿ ಆಗಿಲ್ಲ. ಕೋಳಿ, ಟೋಕ್ರೆ, ಕೋಲಿ ಕಬ್ಬಲಿಗ ಈ ಮೂರು ಸಮುದಾಯಗಳು ಒಂದೇ ಎಂದು ತಿಳಿದುಕೊಂಡು 1984ರಲ್ಲಿಯೇ ಕರ್ನಾಟಕದ ಉಚ್ಛ ನ್ಯಾಯಾಲಯವು ತೀರ್ಮಾನವನ್ನು ಕೊಟ್ಟಿದೆ.

      ಕೋಳಿ ಎಂದರೆ ಅದು ಮರಾಠಿ ಪದಬಳಕೆ, ಕಬ್ಬಲಿಗ ಎಂದರೆ ಕನ್ನಡ ಬಾಷೆ ಪದಬಳಕೆ ಈ ಸಮುದಾಯವನ್ನು ತೆಲುಗು ಬಾಷೆಯಲ್ಲಿ ಕೋಯಾ ಎಂದು ಹೇಳುತ್ತಾರೆ ಎಂದು ಮನವಿ ಪತ್ರದಲ್ಲಿ ವಿವರಿಸಿರುವ ಸಮಾಜದ ಮುಖಂಡರು, ಕೂಡಲೇ ಪರಿಶಿಷ್ಟ ಪಂಗಡದ ಸೇರ್ಪಡೆಗೆ ಎಲ್ಲಾ ಅರ್ಹತೆಯನ್ನು ಹೊಂದಿರುವಂತಹ ಜನಾಂಗವಾದ ಗಂಗಾಮತ ಮತ್ತು ಇನ್ನುಳಿದ 39 ಪಂಗಡಗಳನ್ನು ಕೇಂದ್ರ ಸರ್ಕಾರವು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದ್ದಾರೆ.

     ಸುದೀರ್ಘ 42 ವರ್ಷಗಳಿಂದ ಹಂತ ಹಂತವಾಗಿ ಹೋರಾಟವನ್ನು ಹಮ್ಮಿಕೊಂಡಿದ್ದರು ಕೂಡಾ ನಮ್ಮ ಬೇಡಿಕೆ ಈಡೇರಿಲ್ಲ. ಉಗ್ರ ಪ್ರತಿಭಟನೆ ಕೈಗೊಳ್ಳುವ ಮುನ್ನ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಲಾಗಿದೆ.

     ಸಂದರ್ಭದಲ್ಲಿ ತಾಲೂಕು ಗಂಗಾಮತ ಸಮಾಜದ ಅಧ್ಯಕ್ಷರಾದ ಬಿ.ಎಲ್.ಶ್ರೀಧರ, ಮುಖಂಡರಾದ ಬಿ.ರಾಘವೇಂದ್ರ, ಎಂ.ಜಗದೀಶ, ಎಸ್.ತಿಮ್ಮಣ್ಣ, ಮಂತ್ರೋಡಿ ವಿಶ್ವನಾಥ, ಶಿವಾನಂದ, ಬಿ.ಕೋಟೆಪ್ಪ, ಎಸ್.ಮಲ್ಲಿಕಾರ್ಜುನ, ಎಂ.ಹನುಮಂತಪ್ಪ, ನಾಗರಾಜ, ಚಂದ್ರು, ಗೌಡ್ರ ಶಿವಕುಮಾರಗೌಡ, ಶರಣಪ್ಪ, ಗವಿಸಿದ್ದಪ್ಪ, ಪಕ್ಕೀರಪ್ಪ, ಮಾಲತೇಶ, ಬೋಜಪ್ಪ, ವಿನೋದ ಜಾಡರ್ ಸೇರಿದಂತೆ ಹಲವರು ಇದ್ದರು.

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link