ಹಾವೇರಿ :
ಜಿಲ್ಲೆಯ ತೋಟಗಾರಿಕೆ ಬೆಳೆಯಾದ ತೆಂಗಿನಮರಗಳು ಅನಾವೃಷ್ಠಿಯಿಂದ ನಾಶವಾಗಿರುವ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಉತ್ತರ ಕರ್ನಾಟಕ ರೈತ ಸಂಘದ ತಾಲೂಕ ಸಮಿತಿಯ ವತಿಯಿಂದ ರಾಜ್ಯ ತೋಟಗಾರಿಕೆ ಸಚಿವರಾದ ಎಂಸಿ ಮನಗೂಳಿಯವರಿಗೆ ನಗರದ ಪ್ರವಾಸಿ ಮಂದಿರದಲ್ಲಿ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ 2016-17 ಸಾಲಿನಿಂದ 1.11.811 ತೆಂಗಿನ ಮರಗಳು ನಾಶವಾಗಿರುವ ವರದಿ ಕಂಡು ಬರುತ್ತಿದ್ದು, ಸರ್ಕಾರ ಜಿಲ್ಲೆಯ ರೈತರಿಗೆ ಶೀಘ್ರವೇ ಪರಿಹಾರ ನೀಡಬೇಕು. ರೈತರು ಸಂಕಷ್ಟದಿಂದ ಬರಗಾಲಕ್ಕೆ ಒಳಗಾಗಿದ್ದು, ಜಿಲ್ಲೆಯನ್ನೆ ಬರಗಾಲ ಎಂದು ಘೋಷಣೆ ಮಾಡಿ ರೈತರ ನೆರವಿಗೆ ಧಾವಿಸಿ ಅವರ ಸಮಸ್ಯೆಗಳಿಗೆ ಪರಿಹಾರಕ್ಕೆ ಮುಂದಾಗಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಫಕ್ಕೀರೇಶ ಡಿ ಕಾಳಿ. ತಾಲೂಕಾಧ್ಯಕ್ಷ.ಫಕ್ಕೀರಗೌಡ ಗಾಜಿಗೌಡ್ರ. ಮಂಜುನಾಥ ನಡುವಿನಮನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ