ತೆರೆದ ಮನೆ ಕಾರ್ಯಕ್ರಮ

ಹಾನಗಲ್ಲ :

     ಹಾನಗಲ್ಲ ತಾಲೂಕಿನ ಸುರಳೇಶ್ವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಶನಿ ಸಮಾಜ ಸೇವಾ ಸಂಸ್ಥೆ ಹಾಗೂ ಗ್ರಾಮ ಪಂಚಾಯತ್ ಆಶ್ರಯದಲ್ಲಿ ತೆರೆದ ಮನೆ ಕಾರ್ಯಕ್ರಮವನ್ನು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಆನಂದ ಸಂಬಣ್ಣನವರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಒಂದು ಸಮಾಜ ಅಥವಾ ದೇಶ ಅಭಿವೃಧ್ದಿ ಹೊಂದಬೇಕಾದರೆ ಮೊದಲು ಮಕ್ಕಳು ಅಭಿವೃಧ್ಧಿ ಹೊಂದಬೇಕು. ಮಕ್ಕಳು ತಮ್ಮ ಹಕ್ಕುಗಳನ್ನು ಅರಿತು ಅವುಗಳನ್ನು ಚಲಾಯಿಸುವಂತಾಗಬೇಕು ಎಂದರು.

    ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಯುತ ರವೀಂದ್ರ ಎಂ, ಹೋತನಹಳ್ಳಿ ಮುಖ್ಯ ಅತಿಥಿಯಾಗಿ ಮಾತನಾಡಿ, ಬಾಲ್ಯದಲ್ಲಿಯೇ ಮಕ್ಕಳನ್ನು ಓದು ಬರಹದ ಹೆಸರಿನಲ್ಲಿ, ಕೂಲಿ ನಾಲಿಯ ಹೆಸರಿನಲ್ಲಿ ಒತ್ತಡಕ್ಕೆ ಸಿಲುಕಿಸಿ ಮುಕ್ತವಾಗಿ ಬೆಳೆಯಲು ಅವಕಾಶ ನೀಡುತ್ತಿಲ್ಲ. ಮಕ್ಕಳ ಸಮಸ್ಯೆಯನ್ನೂ ಕೂಡ ಅರ್ಥ ಮಾಡಿಕೊಳ್ಳುತ್ತಿಲ್ಲ. ಸಮಸ್ಯೆಗೆ ಪರಿಹಾರ ಒದಗಿಸುವುದಂತೂ ದೂರದ ಮಾತಾಗಿದೆ. ಮಕ್ಕಳನ್ನು ನಾಳಿನ ಭವಿಷ್ಯಕ್ಕಾಗಿ ಪಾಲನೆ ಪೋಷಣೆ ಮಾಡುವ ಹೊಣೆ ಎಲ್ಲರದಾಗಬೇಕು ಎಂದರು.

    ರೋಶನಿ ಸಮಾಜ ಸೇವಾ ಸಂಸ್ಥೆಯ ಸಂಯೋಜಕಿ ಪ್ರೇಮಾ ಆಟವಾಳಗಿ ಮಾತನಾಡಿ ತೆರೆದ ಮನೆ ಕಾರ್ಯಕ್ರಮ ಎಂಬುದು ಮಕ್ಕಳ ಸಹಾಯವಾಣಿ ಕಾರ್ಯಕ್ರಮವಾಗಿದ್ದು, ಇದರಲ್ಲಿ ಮಕ್ಕಳ ಸಮಸ್ಯೆಗಳನ್ನು ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳೊಂದಿಗೆ ಮುಕ್ತವಾಗಿ ಚರ್ಚಿಸುವುದಾಗಿದೆ. ಮತ್ತು ಪರಿಹಾರವನ್ನು ಕಂಡುಕೊಳ್ಳುವುದಾಗಿದೆ. ಮಕ್ಕಳಿಗೆ ತಮ್ಮ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲು ಅನುವು ಮಾಡಿಕೊಡಬೇಕು ಎಂದರು.

    ಸುರಳೇಶ್ವರ, ಕುಂಟನಹೊಸಳ್ಳಿಯ ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು ಹಾಗೂ ಶಾಲೆಯ ಮಕ್ಕಳು ಭಾಗವಹಿಸಿದ್ದರು. ಹಾವೇರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರೇಣುಕಾ ಬಿದರಗಟ್ಟಿ ಮಾತನಾಡಿ, ಲೈಂಗಿಕ ದೌರ್ಜನ್ಯ ಕಾಯ್ದೆ 2012ರ ಕುರಿತು ಮಾಹಿತಿಯನ್ನು ನೀಡಿದರು.

     ನಂತರ ನಡೆದ ಸಂವಾದದಲ್ಲಿ ಮಕ್ಕಳು ಹಲವಾರು ಪ್ರಶ್ನೆಗಳನ್ನು ಕೇಳಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುರಳೇಶ್ವರದಲ್ಲಿ ಆಟವಾಡಲು ಸರಿಯಾದ ಮೈಧಾನದ ಸ್ವಚ್ಚತೆಗೊಳಿಸಬೇಕು. ಮತ್ತು ಅಡುಗೆ ಮನೆ ಕಟ್ಟಿಸಿ ಕೊಡಿ. ಸಿಂಕ್‍ಗೆ ನಳದ ನೀರಿನ ವ್ಯವಸ್ಥೆ ಬೇಕು. ಕ್ರೀಡಾ ಸಾಮಗ್ರಿ, ಕಂಪ್ಯೂಟರ್, ಪ್ರೊಜೆಕ್ಟರ್, ದೈಹಿಕ ಶಿಕ್ಷಕರ ವ್ಯವಸ್ಥೆ ಬೇಕು. ಸುರಳೇಶ್ವರದ ಅಂಗನವಾಡಿ 2 ಮತ್ತು 1 ಕ್ಕೆ ಕಂಪೌಂಡ ಮತ್ತು ವಿದ್ಯುತ್, ಬಳಕೆಗೆ ನೀರಿನ ವ್ಯವಸ್ಥೆ ಬೇಕು. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಂಟನಹೊಸಳ್ಳಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ನೀರು ಹೋಗಲು ಕಾಲುವೆ ಸಮಸ್ಯೆ ಇರುತ್ತದೆ. ಕುಂಟನಹೊಸಳ್ಳಿಯ ಅಂಗನವಾಡಿಯಲ್ಲಿ ಚರಂಡಿ ನೀರು ಹೋಗಲು ಕಾಲುವೆ ಸಮಸ್ಯೆ ಇರುತ್ತದೆ ಎಂದು ಗಮನ ಸೆಳೆದರು.

     ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಅಭಿವೃದ್ದಿ ಅಧಿಕಾರಿ ರಮೇಶ ಗೌಡಗೇರ್, ಗ್ರಾಮ ಪಂಚಾಯತಿ ಸದಸ್ಯರಾದ ಸೋಮಪ್ಪ ತಳವಾರ. ರೇವಣ ಶಿದ್ದಪ್ಪರವರು ಸೈಬರ್. ಲಕ್ಷ್ಮವ್ವ ಮ ಹರಿಜನ್. ಗುಡ್ಡಪ್ಪ ಹೊತನಹಳ್ಳಿ. ಶಿಕ್ಷಕರಾದ ಶ್ರೀಯುತ ಎಮ್ ಎಸ್ ಬಡಿಗೇರ್. ಎಸ್ ಆರ್ ಹುಲಮನಿ. ಹಾಗೂ ಸಹಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು. ಮತ್ತು ರೋಶನಿ ಸಮಾಜ ಸೇವಾ ಸಂಸ್ಥೆಯ ಸಿಬ್ಬಂದಿ               

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link