ಬೆಂಗಳೂರು:
ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆದ ಮೂರು ಸ್ಥಾನಗಳ ಚುನಾವಣೆಗೆ ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕಾಂಗ್ರೆಸ್‍ನ ನಜೀರ್ ಅಹ್ಮದ್, ಎಂ.ಸಿ. ವೇಣುಗೋಪಾಲ್ ಮತ್ತು ಜೆಡಿಎಸ್‍ನ ರಮೇಶ್ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದು, ಚುನಾವಣಾಧಿಕಾರಿ ಕುಮಾರ ಸ್ವಾಮಿ ಅಧಿಕೃತ ಘೋಷಣೆ ಮಾಡಿದ್ದಾರೆ.
ಚುನಾವಣೆಯಲ್ಲಿ ಗೆದ್ದವರು ಪ್ರತ್ಯೇಕವಾಗಿ ಚುನಾವಣಾಧಿಕಾರಿ ಅವರಿಂದ ಪ್ರಮಾಣ ಪತ್ರ ಸ್ವೀಕರಿಸಿದರು. ನಾಮಪತ್ರ ಹಿಂಪಡೆಯಲು ಇಂದು ಮಧ್ಯಾಹ್ನದವರೆಗೆ ಕಾಲಾವಕಾಶವಿತ್ತು.ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಅ. 3 ರಂದು ಉಪಚುನಾವಣೆ ನಿಗದಿಯಾಗಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಕಾರಣ ಕಾಂಗ್ರೆಸ್‍ನ ನಜೀರ್ ಅಹ್ಮದ್, ಎಂ.ಸಿ.ವೇಣುಗೋಪಾಲ್ ಮತ್ತು ಜೆಡಿಎಸ್‍ನ ರಮೇಶ್ ಗೌಡ ಅವರುಗಳು ಮಾತ್ರ ನಾಮಪತ್ರ ಸಲ್ಲಿಸಿದ್ದರು.
ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಡಾ. ಜಿ. ಪರಮೇಶ್ವರ್, ಪ್ರತಿಪಕ್ಷ ನಾಯಕರಾಗಿದ್ದ ಕೆ.ಎಸ್. ಈಶ್ವರಪ್ಪ, ವಿ ಸೋಮಣ್ಣ ಇವರುಗಳು ವಿಧಾನಸಭೆಗೆ ಆಯ್ಕೆಯಾದ್ದರಿಂದ ಈ ಮೂರು ಸ್ಥಾನಗಳು ತೆರವಾಗಿದ್ದವು.ನಜೀರ್ ಅಹ್ಮದ್, ಎಂ.ಸಿ. ವೇಣುಗೋಪಾಲ್ ಇವರ ಅವಧಿ 2020ರ ಜೂನ್‍ವರೆಗೂ ಇದ್ದು, ಜೆಡಿಎಸ್‍ನ ರಮೇಶ್ ಗೌಡ ಅವರ ಅವಧಿ 2022ರವರೆಗೂ ಜೂನ್‍ವರೆಗೂ ಇರಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
