ಶಿಗ್ಗಾವಿ :
ವಿಶ್ವಕರ್ಮ ಸಮಾಜ ವಿಜ್ಞಾನ ಹಾಗೂ ತಂತ್ರಜ್ಞಾನದ ಕೊಂಡಿಯಾಗಿದ್ದು ಸಮಾಜದ ಜನರು ಆಧುನಿಕ ಕಾಲಕ್ಕೆ ತಕ್ಕಂತೆ ವೃತ್ತಿ ಶಿಕ್ಷಣ ಪಡೆದು ಬದಲಾವಣೆಯ ನೈಪುಣ್ಯತೆ ಹೊಂದಬೇಕಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ತಾಲೂಕು ವಿಶ್ವಕರ್ಮ ಸಮಾಜ, ತಾಲೂಕು ಆಡಳಿತ ಹಾಗೂ ಪುರಸಭೆಯ ಸಂಯುಕ್ತಾಶ್ರಯದಲ್ಲಿ ವಿರಾಟ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ನಿರ್ಜಿವ ವಸ್ತುಗಳಾದ ಕಲ್ಲುಕಟ್ಟಿಗೆ ದಾತುಗಳಲ್ಲಿ ಜೀವಕಳೆ ತುಂಬುವ ವಿಶ್ವಕರ್ಮ ಸಮಾಜದ ಕುಶಲ ಕರ್ಮಿಣ್ಯಿ ಕಲಾವಿದರಿಂದಲೇ ಸೃಷ್ಟಿ ಪಂಚಭೂತಗಳು ನಿರ್ಮಾಣವಾಗಿದೆ, ಪೌರಾಣಿಕ ಜಗತ್ತಿನ ಅನೇಕ ಭಾಗದಲ್ಲಿ ಕಂಡು ಬರುವ ದೇವಾಲಯ ವಾಸ್ತು ಶಿಲ್ಪ. ದೇವಾಲಯದ ಮಿನಾರಗಳು. ಭೃಹತ್ತ ಕಲ್ಲಿನ ಕಟ್ಟಡಗಳು. ದೇವರ ಮೂರ್ತಿ, ಸ್ಥಾವರಗಳ ರಚನೆಯ ಶಿಲ್ಪಕಲೆಯ ವೈಭವ ಕಾಣುವಂತಾಗಿದ್ದು ವಿಶ್ವಕರ್ಮ ಸಮಾಜದ ಕಲಾವಿಧ ಮಹನೀಯರಿಂದ ಸಾಧ್ಯವಾಗಿದೆ ಎಂದ ಅವರು ಅಂತಹ ಕಠಿಣವಸ್ತುಗಳಲ್ಲಿ ಕಲೆಗಳ ವಿನ್ಯಾಸ, ಅದರ ಕುಸುರಿ ಕೆಲಸ ಇಂದಿನ ತಂತ್ರಜ್ಞಾನ ವಿಜ್ಞಾನಕ್ಕೆ ಇಂದಿಗೂ ಸವಾಲಾಗಿವೆ.
ಕಾರಣ ನಿಮ್ಮ ಸಮಾಜದ ಶಿಲ್ಪಿಗಳ ಮಹನೀಯರ ವಿದ್ಯಗೆ ಜೀವಕೊಡುವ ಯೋಜನೆಗಳು ಸರ್ಕಾರಗಳಲ್ಲಿ ರೂಪಿತವಾಗಬೇಕು. ಎಂದರು.
ಈ ಕುರಿತು ಕೇಂದ್ರ ಸರ್ಕಾರ ಸಮಾಜದ ಜನರ ಬವಿಷ್ಯದ ದೃಷ್ಠಿಯಿಂದ ವೃತ್ತಿ ಆಧಾರಿತ ಕರಕುಶಲ ಕರ್ಮಿಗಳಿಗೆ ತರಬೇತಿ ಶಿಕ್ಷಣದ ಪ್ರಮಾಣ ಪತ್ರ ಮಾನ್ಯತೆ ನೀಡಿದ್ದು ಇನ್ನು ಕುಶಲ ವೃತ್ತಿ ಬದುಕಿಗೆ ಮೌಲ್ಯದ ಕಳೆ ಬರಲಿದೆ. ವಿಶ್ವಕರ್ಮ ಸಮಾಜದ ಅಭಿವೃದ್ಧಿ ದೃಷ್ಠಿಯಿಂದ ಸಭಾಭವನ ನಿರ್ಮಾಣ ಮತ್ತು ಸಂಘಗಳ ಕಾರ್ಯ ಚಟುವಟ್ಟಿಕೆಗೆ ಅನುಕೂಲತೆ ಕಲ್ಪಿಸುವ ಉದ್ದೇಶದಿಂದ ಜಾಗೆ ಗುರುತಿಸಿ ನೀಡಲಾಗುವುದು ಎಂದು ಬರವಸೆ ವ್ಯಕ್ತಪಡಿಸಿದರು.
ಮಾಜಿ ಸಂಸದ ಮಂಜುನಾಥ ಕುನ್ನೂರು ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ವಿಶ್ವಕರ್ಮ ಸಮಾಜದ ಕಲೆಗಳ ಪರಂಪರಾಗತವಾಗಿ ಉಳಿಸಿಕೊಂಡು ಬಂದವರು ಅವರ ಭವಿಷ್ಯ ಉತ್ತಮಗೊಳಿಸಲು ವೃತ್ತಿಗೆ ಜೀವ ತುಂಬುವ ಕೆಲಸವನ್ನು ಸರ್ಕಾರ ಗಮನಿಸಬೇಕೆಂದರು,
ಮಾಜಿ ವಿ.ಪ. ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ ಕಲೆಯನ್ನು ರಕ್ತಗತಗೊಳಿಸಿಕೊಂಡಿರುವ ವಿಶ್ವಕರ್ಮ ಸಮಾಜದ ಬಗ್ಗೆ ಸರಕಾರಗಳು ಗಮನಹರಿಸಬೇಕಿದ್ದು, ವಿಶ್ವಕರ್ಮ ಸಮಾಜ ಶ್ರೀಮಂತ ಸಂಸ್ಕøತಿ ಹೊಂದಿದೆ ಆದ್ದರಿಂದ ವಿಶ್ವಕರ್ಮ ಸಮುದಾಯ ಮೂಲ ಸಂಸ್ಕøತಿಯನ್ನು ಎಲ್ಲರೂ ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಕಾಳಪ್ಪ ಬಡಿಗೇರ ವಹಿಸಿದ್ದರು, ನ್ಯಾಯವಾದಿ ಪ್ರಕಾಶ ಬಡಿಗೇರ ಉಪನ್ಯಾಸ ನೀಡಿದರು. ಹುಲಗೂರು ಜೀವನಮುಕ್ತಾಲಯ ಮೌನೇಶ್ವರಮಠದ ಮೌನೇಶ್ವರ ಸ್ವಾಮೀಜಿಗಳ ಸಾನಿಧ್ಯವಹಿಸಿದ್ದರು,
ತಾಪಂ ಅಧ್ಯಕ್ಷೆ ಪಾರವ್ವ ಆರೇರ. ಪುರಸಭೆಯ ಅಧ್ಯಕ್ಷ ಶಿವಪ್ರಸಾದ ಸುರಗೀಮಠ. ಎ.ಪಿ.ಎಂ.ಸಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ. ಆದಿ ಜಾಂಬವ ಸಮಾಜದ ಡಿ.ಎಸ್ ಮಾಳಗಿ. ಚನ್ನಪ್ಪ ಬಿಂದಲಿ. ಸಮಾಜದ ಗಣ್ಯರಾದ ರುದ್ರಪ್ಪ ಕಮ್ಮಾರ. ಸದಾನಂದ ಬಡಿಗೇರ. ಚಿದಾನಂದ ಬಡಿಗೇರ.
ಮನೋಹರ ಸಂಶಿ. ಶಿವಾನಂದ ಬಾಗೂರ, ಮಲ್ಲೇಶಪ್ಪ ಹರಿಜನ, ಬಸವರಾಜ ಬಡಿಗೇರ, ಶಿವಾನಂದ ಮ್ಯಾಗೇರಿ, ದೇವಣ್ಣ ಚಾಕಲಬ್ಬಿ, ಬೂತಪ್ಪಜ್ಜ ಕಮ್ಮಾರ, ಶಂಕರಗೌಡ್ರ ಗೌಡಪ್ಪಗೌಡ್ರ ಸೇರಿದಂತೆ ವಿವಿಧ ಸಮಾಜದ ಮುಖಂಡರು ಹಾಗೂ ವಿಶ್ವಕರ್ಮ ಸಮಾಜದ ಮುಖಂಡರು ಹಾಜರಿದ್ದರು. ಪ್ರೋ. ಶಿವಪ್ರಕಾಶ ಬಳಿಗಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
