ವೀರಶೈವ ಲಿಂಗಾಯಿತ ಧರ್ಮ ಒಂದೆ

ಚಿಕ್ಕನಾಯಕನಹಳ್ಳಿ

       ವೀರಶೈವ ಲಿಂಗಾಯಿತ ಧರ್ಮ ಒಂದೆ. ವೀರಶೈವ ಲಿಂಗಾಯಿತ ಪ್ರತ್ಯೇಕ ಧರ್ಮ ಮಾಡಬಾರದೆಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಲಿಖಿತ ರೂಪದಲ್ಲಿ ಮನವಿಯನ್ನು ನೀಡಲಾಗಿದೆ ಎಂದು ಪಂಚಪೀಠದ ಹಿಮವತ್ ಕೇದಾರ ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.

      ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಸಚಿವ ಡಿ.ಕೆ.ಶಿವಕುಮಾರ್‍ರವರು ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಪಕ್ಷವು ವೀರಶೈವ ಲಿಂಗಾಯಿತ ಧರ್ಮದ ವಿಚಾರಕ್ಕೆ ಹೋಗಬಾರದಿತ್ತು ಎಂದ ಅವರು, ಭಾರತ ದೇಶ ಧರ್ಮ ಪ್ರಧಾನವಾಗಿರುವ ದೇಶವಾಗಿದ್ದು ಅನೇಕ ಮತ ಪಂಥಗಳು ಸಾಕಷ್ಟು ಇವೆ. ಅವುಗಳಲ್ಲಿ ವೀರಶೈವ ಲಿಂಗಾಯಿತ ಧರ್ಮವು ಒಂದಾಗಿದೆ. ರಾಜ್ಯದಲ್ಲಿ ಉಂಟಾದ ಸಂಘರ್ಷದ ಸಂದರ್ಭದಲ್ಲಿ ಒಂದು ವರ್ಷದ ಕೆಳಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಯಾವುದೇ ಕಾರಣಕ್ಕೂ ವೀರಶೈವ ಲಿಂಗಾಯಿತ ಧರ್ಮವನ್ನು ವಿಭಜನೆ ಮಾಡಬಾರದೆಂದು ಲಿಖಿತ ರೂಪದಲ್ಲಿ ಮನವಿಯನ್ನು ನೀಡಲಾಗಿದೆ. ಈ ವಿಚಾರವು ಟಿವಿ ಮಾಧ್ಯಮಗಳಲ್ಲಿ ಮೂಡಿಬಂದಿದೆ. ರಾಜಕಾರಣಿಯೊಬ್ಬರು ಪಶ್ಚಾತ್ತಾಪದ ಮಾತುಗಳನ್ನು ಹೇಳಿದ ಮೇಲೆ ಅವರ ಮೇಲೆ ಅಪಹಾಸ್ಯ ಮಾಡಲು ಹೋಗುವುದಿಲ್ಲ ಎಂದರು.

       ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕಾರ್ಜುವಳ್ಳಿ ಹಿರೇಮಠಾಧ್ಯಕ್ಷರಾದ ಶಂಭುಲಿಂಗ ಶಿವಾಚಾರ್ಯಸ್ವಾಮೀಜಿ, ಮಾನವ ವಿಕಾಸ ಫೌಂಡೇಶನ್ ಸಂಸ್ಥಾಪಕಾಧ್ಯಕ್ಷ ಸಾಹಿತಿ ಶಿವಯೋಗಿ ಕಂಬಾಳಮಠ, ತಾಲ್ಲೂಕು ಶರಣಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಸಿ.ಮಲ್ಲಿಕಾರ್ಜುನಸ್ವಾಮಿ, ಉಚ್ಛಸಂಗಪ್ಪ ಸೇವಾಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಗುರುಮೂರ್ತಿ, ಸದಸ್ಯರಾದ ಸಿ.ವೈ.ಕುಮಾರಸ್ವಾಮಿ, ಕೊಬ್ಬರಿ ಶಂಕರಪ್ಪ, ಕೊಬ್ಬರಿ ಲಿಂಗರಾಜಪ್ಪ, ಸೋಮಶೇಖರ್, ಚನ್ನಬಸವಯ್ಯ, ತೀರ್ಥರಾಮಲಿಂಗೇಶ್ವರ ದೇವಾಲಯದ ಅರ್ಚಕ ಉಮಾಶಂಕರ್, ನಂಜುಂಡಪ್ಪ ಸಾಸಲು ಮಂಜುನಾಥ್ ಮತ್ತು ಸಮಾಜದ ಮಹಿಳೆಯರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap