ಸಿರುಗುಪ್ಪ:
ತಾಲೂಕಿನ ಹಳೇಕೋಟೆ ಗ್ರಾಮದ ಬಳಗನೂರು ಮರಿಶಿವಯೋಗಿಗಳ ಶ್ರೀ ಮಠದಲ್ಲಿ ಶ್ರೀ ಸಿದ್ದಬಸವ ಸ್ವಾಮಿಗಳು ಮಾತನಾಡಿ ಶ್ರೀಮಠದಲ್ಲಿ ಪವಾಡ ಪುರುಷ ಮಹಾಶಿವಯೋಗಿಗಳಾದ ಶ್ರೀ ಬಳಗನೂರು ಮರಿಶಿವಯೋಗಿಗಳ 110ನೇ ಜಾತ್ರಮಹೋತ್ಸವ ಅಂಗವಾಗಿ ಶ್ರೀ ಮಠದ ವತಿಯಿಂದ ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ಮಲ್ಲಿಕಾರ್ಜುನಸ್ವಾಮಿಗಳ ಮಾರ್ಗದರ್ಶನದಲ್ಲಿ ಅನೇಕ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಪ್ರತಿವರ್ಷವೂ ಹಮ್ಮಿಕೊಂಡು ಬರಲಾಗುತ್ತಿದ್ದು, ಅದರಂತೆ ಈ ವರ್ಷವೂ ಜಾತ್ರೆಯ ಅಂಗವಾಗಿ ತಾಲೂಕಿನ ಬಡಜನತೆಗೆ ಅನುಕೂಲವಾಗುವ ದೃಷ್ಟಿಯಿಂದ ಉಚಿತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿದೆ.
ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಹಲವು ದಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಮೇ.2ರಂದು ದೇವತಾ ಕಾರ್ಯ, ಮೇ.03ರಂದು ಸಾಮೂಹಿಕ ವಿವಾಹಗಳು, ಮೇ.4ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದ್ದು, ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ವಿವಾಹವಾಗಲು ಇಚ್ಚಿಸುವವರು ಏಪ್ರಿಲ್ 25ರೊಳಗಾಗಿ ತಮ್ಮ ಹೆಸರುಗಳನ್ನು ಶ್ರೀ ಮಠದಲ್ಲಿ ನೊಂದಾಯಿಸಿಕೊಳ್ಳಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9902608079, 9880065875, 7676707609ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.