ಹಾನಗಲ್ಲ :
ನೀರಡಿಸಿ ಕಾಡಿನಿಂದ ನಾಡಿಗೆ ಬಂದ ಐದು ಅಡಿ ಉದ್ದದ ದೊಡ್ಡ ಗಂಡು ಸಾರಂವೊಂದು ನಾಯಿಗಳ ದಾಳಿಗೆ ತುತ್ತಾಗಿ ಸಾವನ್ನಪ್ಪಿದ ಘಟನೆ ಹಾನಗಲ್ಲ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಚಿಕ್ಕೇರಿಹೊಸಳ್ಳಿ ಗ್ರಾಮದ ಹೊಲವೊಂದರಲ್ಲಿರುವ ನೀರಿಗಾಗಿ ಕಾಡಿನಿಂದ ಬಂದ ಜಿಂಕೆ ಅಲ್ಲಿರುವ ನಾಯಿಗಳ ಕಣ್ಣಿಗೆ ಬಿದ್ದುದರಿಂದ ಹೆದರಿ ಓಡಲಾರಿಂಬಿಸಿದೆ. ನಾಯಿಗಳು ಬೆನ್ನಟ್ಟಿ ಕಡಿಯಲಾರಂಬಿಸಿದಾಗ ಜೀವ ಉಳಿಸಿಕೊಳ್ಳಲು ಗ್ರಾಮದ ಮನೆಯೊಂದರ ಒಳಗೆ ಓಡಿ ಹೋಗಿದೆ. ತಕ್ಷಣ ಗ್ರಾಮದ ಯುವಕರು ಜಿಂಕೆಯನ್ನು ನಾಯಿಗಳಿಂದ ರಕ್ಷಿಸಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ನಂತರ ಅರಣ್ಯಾಧಿಕಾರಿಗಳು ಜಿಂಕೆಯನ್ನು ಹಾನಗಲ್ಲಿನ ಸರಕಾರಿ ಪಶುವೈದ್ಯಕೀಯ ಅಸ್ಪತ್ರೆಗೆ ಕೊಂಡೊಯ್ದು ಪ್ರಥಮ ಚಿಕಿತ್ಸೆ ನೀಡಿದರಾದರೂ, ಒಂದು ಗಂಟೆಯ ನಂತರ ಚಿಕಿತ್ಸೆ ಫಲ ನೀಡಿದೇ sಸಾರಂಗ ಸಾವನ್ನಪ್ಪಿದೆ. ಚಿಕ್ಕೇರಿಹೊಸಳ್ಳಿ ಗ್ರಾಮದ ಯುವಕರಾದ ಮಂಜು ಜೀವಣ್ಣನವರ, ಮಂಜು ಚೂರಿ, ಫಕ್ಕೀರಪ್ಪ ಗೊರವರ, ಮಂಜುನಾಥ ಜನಗೇರಿ, ಮಲ್ಲಪ್ಪ ನಾಗರವಳ್ಳಿ ಅವರುಗಳು ಸಾರಂಗವನ್ನು ನಾಯಿಯಿಂದ ರಕ್ಷಿಸಿ ಅರಣ್ಯ ಇಲಾಖೆಯ ಸಿಬ್ಬಂದಿಗೆ ಒಪ್ಪಿಸಿದವರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ