ಹೊರ ಗುತ್ತಿಗೆ ಹಾಸ್ಟೆಲ್ ನೌಕರ ಸಂಘದಿಂದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ

ಹಾವೇರಿ :

        ಕಳೆದ ಹತ್ತಾರು ವರ್ಷಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಇರುವ ಹಾಸ್ಟೆಲಗಳಲ್ಲಿ ಅಡುಗೆ, ಕಾವಲು ಮೊದಲಾದ ಡಿ ಗ್ರುಪ ವರ್ಗದ ಹುದ್ದೆಗಳಲ್ಲಿ ಅತ್ಯಂತ ಕಡಿಮೆ ವೇತನ ಪಡೆಯುತ್ತಾ ಗುತ್ತಿಗೆದಾರರ ಶೋಷಣೆಯನ್ನು ಅನುಭವಿಸುತ್ತಾ ಬಂದಿದ್ದು, ನಮಗೆ ಸರ್ಕಾರ ಸೂಕ್ತ ಉದ್ಯೋಗ ಒದಗಿಸುವ ಕ್ರಮ ಕೈಗೊಳ್ಳಬೇಕೆಂದು ಎಂದು ಹಾಸ್ಟೆಲ್ ನೌಕರ ಸಂಘದ ಜಿಲ್ಲಾಧ್ಯಕ್ಷರಾದ ಶಾಂತಕ್ಕ ಗಡಿ ಆಗ್ರಹಿಸಿದರು.

        ಹೊರ ಗುತ್ತಿಗೆ ಹಾಸ್ಟೆಲ್ ನೌಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಎಚ್.ಡಿ.ಕುಮಾರಸ್ವಾಮಿ ಮನವಿ ಸಲ್ಲಿಸಿ ಅವರು ಮಾತನಾಡಿದರು.

         ನೇರ ನೇಮಕಾತಿ ಕ್ರಮದಿಂದಾಗಿ ಕೆಲಸ ಕಳೆದುಕೊಂಡು ಬಿದಿ ಪಾಲು ಆಗುವ ಆತಂಕಕ್ಕೆ ಒಳಗಾದಾಗ ನಾವೆಲ್ಲರೂ ಬೆಂಗಳೂರಿಗೆ ಧಾವಿಸಿ ಬಂದು ಸ್ವತಂತ್ರ ಉದ್ಯಾನದಲ್ಲಿ 2018 ಜೂನ್ 27 ರಿಂದ 8 ದಿನಗಳ ಹಗಲು ರಾತ್ರಿ ಸತ್ಯಾಗ್ರಹ ನಡೆಸಿದಾಗ ತಾವು ನಮ್ಮ ಬಗ್ಗೆ ಅನುಕಂಪ ತೋರಿ ನಮ್ಮೆಲ್ಲರನ್ನು 2018 ಜೂಲೈ 5 ರಿಂದ ಮರಳ ಕೆಲಸಕ್ಕೆ ಸೇರಿಸಿಕೊಂಡು ಯಥಾಸ್ಥಿತಿ ಕಾಪಾಡಲು ಆದೇಶ ನೀಡುವ ಮೂಲಕ ಮಾನವಿಯತೆಯನ್ನು ಮರೆದಿದ್ದೀರಿ.

          ತಾವು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಆಗಿರುವ ಹೊರ ಸಂಪನ್ಮೂಲ ಸಿಬ್ಬಂದಿಗಳಿಗೆ ತೋರಿದ ಔದಾರ್ಯಕ್ಕೆ ನಾವು ಸದಾ ಋಣಿಯಾಗಿರುತ್ತೇವೆ, ನಮ್ಮನ್ನು ಖಾಯಂ ಮಾಡಬೇಕೆಂದು ಆಗ್ರಹಿಸಿದರು.

           ಹಾಸ್ಟೆಲ್ ನೌಕರರ ಸಂಘದ ಜಿಲ್ಲಾಕಾರ್ಯದರ್ಶಿ ಮಾತನಾಡಿ ಶೋಬಾ ಡೊಳ್ಳೆಶ್ವರ ಕೆಲಸ ಕಳೆದುಕೊಂಡ ನಮಗೆ ಕೆಲಸ ಕೊಟ್ಟು ನಮಗೆ ಪುನರ್ ಜನ್ಮ ನೀಡಿದ ಸರ್ಕಾರಕ್ಕೆ ನಮಗೆ ಅನ್ಯಾಯವಾದರೆ ಕೆಟ್ಟ ಹೆಸರು ಬರುವಂತಾಗಲಿದೆ. ಸಭೆ ಕರೆದು ನಮಗೆ ನಿವೃತ್ತಿಯವರೆಗೆ ಕೆಲಸದಲ್ಲಿ ಮುಂದುವರೆಸಲು ಅವಕಾಶ ಮಾಡಿಕೊಡಬೇಕೆಂದು ಹೇಳಿದರು.

          ಪ್ರತಿಭಟನೆಯಲ್ಲಿ ಯಲ್ಲಮ್ಮ ಗೊರವರ, ಶಶಿಕಲಾ ಜೋಗಣ್ಣನವರ, ಶಾಂತವ್ವ ತೊಪ್ಪದ, ಶಾಂತಾ ಕಲಾಲ, ರೇಣುಕಾ ದ್ಯಾಮನಗೌಡ್ರ, ನಿಂಬವ್ವ ಸಂಗೂರ, ಯಲ್ಲಪ್ಪ ಪರಸಪ್ಪನವರ, ಎಸ್.ಎಫ್.ಐ ಜಿಲ್ಲಾ ಸಹಾಯ ಕಾರ್ಯದರ್ಶಿ ಬಸವರಾಜ ಭೋವಿ ಎಸ್.ಎಫ್.ಐ ಉಪಾಧ್ಯಕ್ಷರು ಜ್ಯೋತಿ ದೊಡ್ಡಮನಿ, ಮೋಹನ ಆರ್.ಬಿ ಅನೇಕರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link