ಅಕ್ರಮ-ಸಕ್ರಮ ಸಮಿತಿ ರಚನೆ

ಬ್ಯಾಡಗಿ:

       ಬಗರ ಹುಕುಂ ಸಾಗುವಳಿ ಜಮೀನುಗಳಿಗೆ ಹಕ್ಕು ಪತ್ರ ನೀಡಲು ಅಕ್ರಮ-ಸಕ್ರಮ ಸಮಿತಿ ರಚನೆ, ಗೋವಿನಜೋಳ ಖರೀದಿ ಕೇಂದ್ರ ಸ್ಥಾಪನೆ, ಮಾಡುವುದೂ ಸೇರಿದಂತೆ ತಾಲೂಕನ್ನು ಬರಗಾಲ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

       ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾಧ್ಯಕ್ಷ ಹೊನ್ನಪ್ಪ ಸಣ್ಣ ಬಾರ್ಕಿ, ಸಮ್ಮಿಶ್ರ ಸರ್ಕಾರ ರಚನೆಯಾಗಿ 6 ತಿಂಗಳು ಗತಿಸಿವೆ, ಹೀಗಿದ್ದಾರು ರಾಜ್ಯದಲ್ಲಿ ಸರ್ಕಾರವೊಂದು ಅಧಿಕಾರದಲ್ಲಿದ ಎಂಬುದು ಅರ್ಥವಾಗುತ್ತಿಲ್ಲ, ಅಷ್ಟಕ್ಕೂ ಯಾವುದೇ ಜನಪರ ಯೋಜನೆಗಳು ಅನುಷ್ಠಾನಗೊಂಡಿಲ್ಲ. ಕೇವಲ ತಮ್ಮ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಸಮ್ಮಿಶ್ರ ಸರ್ಕಾರದ ನಾಯಕರು ರಾಜಕೀಯ ಲೆಕ್ಕಾಚಾರ ಹಾಗೂ ಚುನಾವಣೆಗಳಲ್ಲಿ ಮಗ್ನರಾಗಿ ರಾಜ್ಯದ 6 ಕೋಟಿ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೇ ಕುಳಿತಿದ್ದಾರೆ ಎಂದು ಆರೋಪಿಸಿದರು.

      ಖರೀದಿ ಕೇಂದ್ರ ಬೇಕು:ಈಗಾಗಲೇ ರೈತರು ತಮ್ಮ ಗೋವಿನಜೋಳವನ್ನು ಕಟಾವು ಮಾಡಿದ್ದು ಮಾರಾಟ ಮಾಡಲು ಸಿದ್ದರಾಗಿದ್ದಾರೆ, ಸರ್ಕಾರ ಮಾತ್ರ ಇನ್ನೂ ಖರೀದಿ ಕೇಂದ್ರಗಳನ್ನು ಮಾತ್ರ ತೆರೆಯಲು ಮುಂದಾಗಿಲ್ಲ ಇದರಿಂದ ಸಂಕಷ್ಟದಲ್ಲಿರುವ ರೈತರು ತಮ್ಮ ಬೆಳೆಯನ್ನು ಕಡಿಮೆ ದರಕ್ಕೆ ನೀಡುವ ಅನಿವಾರ್ಯತೆಯಲ್ಲಿದ್ದಾರೆ, ಇದರಿಂದಾಗಿ ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ರೈತರು ಇನ್ನಷ್ಟು ಹೈರಾಣಾಗಲಿದ್ದಾರೆ ಆದ್ದರಿಂದ ಕೂಡಲೇ ಬೆಂಬಲ ಸಮೇತ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿದರು.

      ಸಾಲಮನ್ನಾ ಆಗಬೇಕು..?:ಮಲ್ಲೇಶಪ್ಪ ಲಮಾಣಿ ಮಾತನಾಡಿ, ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಕುಮಾರಸ್ವಾಮಿಯವರು ಸರ್ಕಾರ ರಚನೆಯಾಗಿ ಅರ್ಧ ವರ್ಷ ಕಳೆ ಯುತ್ತಿದೆ ಇಲ್ಲಿಯವರೆಗೂ ಸಾಲ ಮನ್ನಾ ಮಾಡಿದ ಆದೇಶ ಬ್ಯಾಂಕಗಳಿಗೆ ಬಂದಿಲ್ಲ. ಅಲ್ಲದೇ ಪ್ರಸ್ತುತ ವರ್ಷವೂ ಮಳೆ ಕೈಕೊಟ್ಟಿದ್ದು ರೈತ ಕುಲ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ ಆದ್ದರಿಂದ ಕೂಡಲೇ ಸಾಲಮನ್ನಾ ಆದೇಶ ನೀಡವಂತೆ ಆಗ್ರಹಿಸಿದರಲ್ಲದೇ ಬ್ಯಾಡಗಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಭೀಮಾ ನಾಯಕ್, ಜಗದೀಶ ಕಮ್ಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link