ಮಕ್ಕಳ ಕವಿಗೋಷ್ಠಿಯಲ್ಲಿ ಕಾವ್ಯ ವಾಚನ ಸ್ಪರ್ಧೆ

ಹಾವೇರಿ :

       ತಾಲೂಕಿನ ಕೋಳೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದ ಕಾವ್ಯ ವಾಚನ ಸ್ಪರ್ಧೆ ಜರುಗಿತು. ಕಾವ್ಯ ವಾಚನವನ್ನು ಸಿ. ಆರ್. ಪಿ ಅಧಿಕಾರಿಗಳಾದ ಕುಮಾರ ಮರಳಿಹಳ್ಳಿ ಉದ್ಘಾಟಿಸಿ ಮಕ್ಕಳಲ್ಲಿ ಕಲ್ಪನಾ ಶಕ್ತಿಯನ್ನು, ಓದಿನ ಅಭಿರುಚಿಯನ್ನು ಹಾಗೂ ಕಾವ್ಯ ಪ್ರೀತಿಯನ್ನು ಹುಟ್ಟು ಹಾಕಲು ನಾಡಿನ ಕವಿಗಳ ಕಾವ್ಯ ವಾಚನ ಮಾಡಿಸುವ ಕೋಳೂರು ಕನ್ನಡ ಶಾಲೆಯ ಬೇಸಿಗೆ ಶಿಬಿರದ ಪ್ರಯತ್ನ ಶ್ಲಾಘನೀಯವೆಂದರು.

      ಅಧ್ಯಕ್ಷತೆಯನ್ನು ವಹಿಸಿದ್ದ ಐಶ್ವರ್ಯ ಹೊಟ್ಟಿರಪ್ಪನವರ ಮಾತನಾಡಿ ಇದೊಂದು ವಿನೂತನವಾದ ಕವಿತಾ ವಾಚನವಾಗಿದ್ದು ಹೊಸ ಅನುಭವ ನೀಡಿದೆ. ಓದಿನ ಸಂಗಡ ಕವಿಗಳ ಕವಿತೆಗಳ ಓದುವ ಅಪರೂಪದ ಸಂಗತಿಯಾಗಿದೆ ಎಂದರು.

      ಶಿಕ್ಷಕ ಜಿ. ಎಂ. ಓಂಕಾರಣ್ಣನವರ ಮಾರ್ಗದರ್ಶನದಲ್ಲಿ ಬಾಲ ಕವಿಗಳಾದ ನೇಹಾ, ಹರೀಶ, ಯಶೋಧಾ ಕಲಕೋಟಿ,, ಚೇತನ್ ಅಂಗಡಿ, ಭಾರತಿ ಹೊಟ್ಟೀರಪ್ಪನವರ ಮುಂತಾದ 22 ಕವಿಗಳು ಜಿಲ್ಲೆಯ ಹಿರಿಯ ಕವಿ ಸತೀಶ ಕುಲಕರ್ಣಿ ಅವರನ್ನೊಳಗೊಂಡಂತೆ ಬೇರೆ ಬೇರೆ ಕವಿಗಳ ಕಾವ್ಯ ವಾಚನ ಮಾಡಿದರು. ಮುಖ್ಯೋಪಾಧ್ಯಾಯುರಾದ ಎಂ. ಎಸ್. ಎತ್ತಿನಹಳ್ಳಿ ಸ್ವಾಗತಿಸಿದರು. ಜಗದೀಶ ಹರಿಜನ ನಿರೂಪಣೆ ಮಾಡಿದರು. ಸುದೀಪ ಹರಿಜನ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link