ಬೆಂಗಳೂರು
ವಿಜಯಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ದೇನ ಬ್ಯಾಂಕುಗಳ ವಿಲೀನವನ್ನು ವಿರೋಧಿಸಿ ಬ್ಯಾಂಕ್ ನೌಕರರ ಒಕ್ಕೂಟ ಇದೇ ತಿಂಗಳ 26 ದೇಶವ್ಯಾಪಿ ಮುಷ್ಕರ ನಡೆಸಲಿದೆ.
ಈಗಾಗಲೇ ಸ್ಟೇಟ್ ಬ್ಯಾಂಕ್ ಇಂಡಿಯಾದೊಂದಿಗೆ ಹಲವು ಬ್ಯಾಂಕುಗಳನ್ನು ವಿಲೀನಗೊಳಿಸಿರುವ ಕೇಂದ್ರ ಸರ್ಕಾರ, ಈ ಮೂರು ಬ್ಯಾಂಕುಗಳ ವಿಲೀನಕ್ಕೆ ಕಳೆದ ಸೆಪ್ಟೆಂಬರ್‍ನಲ್ಲಿ ಅನುಮೋದನೆ ಪಡೆದುಕೊಂಡಿತ್ತು.ಆದರೆ, ಕೇಂದ್ರ ಸರ್ಕಾರದ ಈ ಕ್ರಮ ವಿರೋಧಿಸಿರುವ 9 ಸಂಘಟನೆಯೊಳಗೊಂಡ ಬ್ಯಾಂಕ್ ನೌಕರರ ಒಕ್ಕೂಟ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಉದ್ದೇಶಿತ ಪ್ರಸ್ತಾವವನ್ನು ಕೈಬಿಡಲು ಒತ್ತಾಯಿಸಿ ಡಿ. 26 ದೇಶವ್ಯಾಪಿ ಮುಷ್ಕರ ನಡೆಸಲಿವೆ.
ಮುಷ್ಕರದಲ್ಲಿ ವಿಜಯಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ದೇನ ಬ್ಯಾಂಕುಗಳ ಸಾವಿರಾರು ಮಂದಿ ಉದ್ಯೋಗಿಗಳು ಪಾಲ್ಗೊಂಡು ಕೇಂದ್ರ ಸರ್ಕಾರದ ತೀರ್ಮಾನವನ್ನು ಖಂಡಿಸಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








