ಸಂವಾದ ಕಾರ್ಯಕ್ರಮ

ಬ್ಯಾಡಗಿ:

        ಶಿಕ್ಷಣವೆಂಬುದು ಸಾಧನೆಯಿಂದ ಪಡೆದುಕೊಳ್ಳಬೇಕಾದ ವಸ್ತು, ಆದರೆ ಇತ್ತೀಚಿನ ದಿನಗಳಲ್ಲಿ ದುರದೃಷ್ಟವಶಾತ್ ಹಣಕೊಟ್ಟು ಕೊಂಡುಕೊಳ್ಳುವ ವಸ್ತುವಾಗುತ್ತಿರುವುದು ದುರಂತದ ಸಂಗತಿ ಅದಾಗ್ಯೂ ಬಡ ಕುಟುಂಬದ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳು ಶ್ರಮವಹಿಸಿದಲ್ಲಿ ಶಿಕ್ಷಣವು ಕೂಡ ಸುಲಭವಾಗಿ ಆತನಿಗೆ ಬದುಕನ್ನು ಕಟ್ಟಿಕೊಡಬಲ್ಲುದು ಎಂದು ಮನೋವಿಕಾಸ ತರಬೇತುದಾರ ಎಸ್.ಶಿವಕುಮಾರ ಅಭಿಪ್ರಾಯವ್ಯಕ್ತಪಡಿಸಿದರು.

        ಸೃಷ್ಠಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಬ್ಯಾಡಗಿ, ಚಾಣಕ್ಯ ಎಜುಕೇಷನ್ ಟ್ರಷ್ಟನ ಗ್ಲೋಬಲ್ ವಿನ್ನರ್ ಅಕಾಡಮಿ ಬೆಂಗಳೂರ, ಶಿಕ್ಷಣ ಇಲಾಖೆ, ಜಯ ಕರ್ನಾಟಕ ತಾಲೂಕಾ ಘಟಕಗಳ ವತಿಯಿಂದ ಪಟ್ಟಣದ ವಾಲ್ಮೀಕಿ ಭವನದಲ್ಲಿ ವಿದ್ಯಾರ್ಥಿಗಳ ಜ್ಞಾಪಕ ಶಕ್ತಿ ವೃದ್ಧಿ ಮತ್ತು ಹೆಚ್ಚು ಅಂಕಗಳನ್ನು ಗಳಿಸುವ ಕುರಿತು ವಿದ್ಯಾರ್ಥಿಗಳು ಮತ್ತವರ ಪೋಷಕರೊಂದಿಗೆ ನಡೆದ ಉಚಿತ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

        ಶಿಕ್ಷಣವೊಂದು ಮನುಷ್ಯನ ಶಕ್ತಿಯ ಸಂಕೇತ, ಕಲಿತವರು ಹೆಮ್ಮೆಯಿಂದ ಹೇಳಿಕೊಳ್ಳಬೇಕಾದ ಸಂಗತಿ, ಇದರಿಂದ ಸಿಗುವಂತಹ ಗೌರವ ಇನ್ನಾವುದರಲ್ಲೂ ಸಿಗಲು ಸಾಧ್ಯವಿಲ್ಲ ಶೈಕ್ಷಣಿಕ ಅರ್ಹತೆಯಿಂದ ಮನುಷ್ಯನ ವ್ಯಕ್ತಿತ್ವವನ್ನು ನಿರ್ಧರಿಸುವಂತಹ ಕಾಲ ಬರಬೇಕಾಗಿದೆ, ಶಿಕ್ಷಣವಂತರನ್ನು ಸಮಾಜ ಗೌರವಿಸಬೇಕಾಗಿದೆ ಎಂದರು.

          ಮಕ್ಕಳಲ್ಲಿನ ನೆನಪಿನ ಶಕ್ತಿ ಪರೀಕ್ಷೆಗಾಗಿ ಪರೀಕ್ಷೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಹೊರತು ಮಕ್ಕಳಲ್ಲಿನ ಕೌಶಲ್ಯ ಹಾಗೂ ಬುದ್ದಿಮತ್ತೆಯನ್ನು ಹೆಚ್ಚಿಸುವ ಅಥವಾ ಸುಲಭ ವಿಧಾನಗಳ ಮೂಲಕ ಉತ್ತೇಜಿಸುವ ಕಾರ್ಯಗಳು ಜರುಗುತ್ತಿಲ್ಲ ಈ ಹಿನ್ನಲೆಯಲ್ಲಿ ಇಂದಿಗೂ ಕಂಠಪಾಠ ಮಾಡುವ ಪದ್ಧತಿಯಿಂದ ಮಕ್ಕಳು ಹೊರಬರಲು ಸಾಧ್ಯವಾಗುತ್ತಿಲ್ಲ ಎಂದರು.

         ಶೈಕ್ಷಣಿಕ ಪದ್ಧತಿಯಲ್ಲಿ ಮಕ್ಕಳಿಗೆ ಬಾಯಿ ಪಾಠ ಮಾಡುವುದನ್ನೆ ಹೇಳಿಕೊಡುತ್ತ ಬರುತ್ತಿರುವ ಕಾರಣ ಮಕ್ಕಳ ಬೌದ್ಧಿಕ ಮಟ್ಟ ಮತ್ತು ಜ್ಞಾಪಕ ಶಕ್ತಿಗಳು ಕುಂಠಿತವಾಗುತ್ತ ಸಾಗಿದೆ. ಬೊಧನೆಯಲ್ಲಿ ಹೊಸತನ ತರದಿರುವುದೇ ಇದಕ್ಕೆಲ್ಲ ಪ್ರಮುಖ ಕಾರಣವಾಗಿದ್ದು ಮಕ್ಕಳನ್ನು ವಿಷಯಗಳತ್ತ ಸೆಳೆಯುವ ಸುಲಭ ತಂತ್ರಗಳನ್ನು ಅಳವಡಿಸಿ ಬೋಧನೆ ಮಾಡಿದಲ್ಲಿ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಶೇ.ನೂರರಷ್ಟು ಅಂಕ ಗಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

         ಗ್ಲೋಬಲ್ ಅಕಾಡೆಮಿಯ ಮೀನಾಕ್ಷಿ ಮಾತನಾಡಿ, ಶಿಕ್ಷಣ ನೀಡುವುದು ಕೇವಲ ಶಿಕ್ಷಕರ ಕೆಲಸವಲ್ಲ ಶಾಲೆಯಲ್ಲಿ ಮಕ್ಕಳು ಇರುವುದು ಕೇವಲ 7 ಗಂಟೆ ಮಾತ್ರ ಉಳಿದಂತೆ 17 ಗಂಟೆಗೂ ಹೆಚ್ಚಿನ ಅವಧಿಯನ್ನು ಮಕ್ಕಳು ಮನೆಯಲ್ಲಿಯೇ ಕಳೆಯುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಪೋಷಕರು ಟಿವಿಯಲ್ಲಿ ಬರುವ ಧಾರಾವಾಹಿಗಳಿಗೆ ಕೊಟ್ಟಷ್ಟು ಸಮಯವನ್ನು ಮಕ್ಕ: ಶೈಕ್ಷಣಿಕ ಪ್ರಗತಿಗೆ ನೀಡುತ್ತಿಲ್ಲ, ಹೀಗಾಗಿ ಮಕ್ಕಳು ಕಲಿಕೆಯಲ್ಲಿ ಹಿಂದುಳಿಕೆ ಹಾಗೂ ಎದುರಿಸುತ್ತಿರುವ ಖಿನ್ನತೆ ಮಾನಸಿಕ ಒತ್ತಡ ಹಾಗೂ ಇನ್ನಿತರೆ ವಿಷಯಗಳತ್ತ ಗಮನ ಹರಿಸುತ್ತಿಲ್ಲ ಎಂದು ವಿಷಾದಿಸಿದರು.

        ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ ಸದಸ್ಯರಾಧ ಶಾಂತಮ್ಮ ಬೇವಿನಮಟ್ಟಿ, ದುರ್ಗೇಶ ಗೋಣೆಮ್ಮನವರ, ವೀರಭದ್ರಗೌಡ ಹೊಮ್ಮರಡಿ, ಸುರೇಶ ಛಲವಾದಿ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಫ್.ಬಾರ್ಕಿ, ವೀರಭದ್ರಪ್ಪ ನೆಗಳೂರ ಸೇರಿದಂತೆ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link