ಹಾವೇರಿ :
ನಗರದ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ವಿಜಯದಶಮಿ ಪ್ರಯುಕ್ತ ಬನ್ನಿ ಮುಡಿಯುವ ಕಾರ್ಯಕ್ರಮ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಶ್ರೀ ದೇವಿಗೆ ವಿಶೇಷ ಪೂಜೆಸಲ್ಲಿಸಿ, ಪಲ್ಲಕ್ಕಿಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಬನ್ನಿಮುಡಿಯಲಾಯಿತು.ಶ್ರೀ ದೇವಿ ಸೇವಾ ಸಮಿತಿ ಅದ್ಯಕ್ಷರಾದ ಬಸವರಾಜ್ಹ ಹೂಗಾರ, ಕಾರ್ಯದ್ರಶಿ ಅಶೋಕ ಮುದಗಲ್ಲ, ಗಂಗಾಧರ ಹೂಗಾರ, ಕೊಟ್ಟ್ರಯ್ಯಾ ಕಬ್ಬಿಣಕಂತಿಮಠ, ಬೇಟ್ಟಪ್ಪಾ ಕುಳೇನೂರ, ಬೇಟಗೇರಿ ಪ್ರುಥ್ವಿರಾಜ್, ಮತ್ತಿಹಳ್ಳಿ ವಿರೇಶ, ದೊಡ್ಡ ದ್ಯಾಮಣ್ಣಾ ಬಡಗೇರ್, ಬಸಣ್ಣ ಮುಗದೂರ ಹಾಗೂ ರಾಜಶೇಖರ ಉಪ್ಪಿನ ದೇವಿಯ ಸಕಲ ಭಕ್ತಾಧಿಗಳು ಶ್ರೀ ದೇವಿ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ