ಮೆಟ್ರೊ ರೈಲು ಹಳಿ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿ ಯುವಕ

ಬೆಂಗಳೂರು

       ಬಿಗಿ ಭದ್ರತೆಯನ್ನು ಲೆಕ್ಕಿಸದೇ ಮೆಟ್ರೊ ರೈಲು ಹಳಿ ಮೇಲೆ ಹಾರಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿ ಆತಂಕ ಸೃಷ್ಠಿಸಿರುವ ಘಟನೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೆಟ್ರೊ ನಿಲ್ದಾಣದ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

        ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದ ಡಿಕೆ ಟೈಲ¾õï್ಸನಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ವೇಲು (28) ಎಂದು ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಗುರುತಿಸಲಾಗಿದೆ ಆತ್ಮಹತ್ಯೆಗೆ ಯತ್ನಿಸಿ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ವೇಲು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

         ಯಲಚೇನಹಳ್ಳಿ ಕಡೆಯಿಂದ ನಾಗಸಂದ್ರ ಮಾರ್ಗದ ಹಸಿರು ಮೆಟ್ರೊ ರೈಲು, ನ್ಯಾಷನಲ್ ಕಾಲೇಜು ಮೆಟ್ರೊ ನಿಲ್ದಾಣಕ್ಕೆ ಬೆಳಿಗ್ಗೆ 11.10ರ ವೇಳೆ ಬರುತ್ತಿದ್ದಾಗ ಏಕಾಏಕಿ ಸೆಕ್ಯುರಿಟಿ ಗಾರ್ಡ್‍ಗಳ ಕಣ್ತಪ್ಪಿಸಿ, ಹಳಿ ಮೇಲೆ ಹಾರಿದ್ದಾನೆ. ಯುವಕ ಹಾರಿದ್ದನ್ನು ನೋಡಿ ತಕ್ಷಣವೇ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ

       ನಾಲ್ಕು ರೈಲ್ವೆ ಹಳಿಗಳ ಮಧ್ಯೆ ಬಿದ್ದ ಯುವಕನಿಗೆ ತಲೆಗೆ ಪೆಟ್ಟಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆತನ ಸ್ಥಿತಿ ಗಂಭೀರವಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

         ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ನೆಟ್ಟಕಲ್ಲಪ್ಪ ವೃತ್ತದ ಡಿಕೆ ಟೈಲಸನಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ವೇಲು (28) ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆಗೆ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ. ಪ್ರಯಾಣಿಕರು ಇನ್ನೇನು ರೈಲಿಗೆ ಹತ್ತಲು ಸಿದ್ಧವಾಗುತ್ತಿರುವಾಗಲೇ ಸೆಕ್ಯುರಿಟಿ ಗಾರ್ಡ್‍ಗಳ ಕಣ್ತಪ್ಪಿಸಿ ಏಕಾಏಕಿ ಯುವಕ ಹಳಿಗಳ ಮೇಲೆ ಹಾರಿದ್ದಾನೆ.

         ಅದೃಷ್ಟವಶಾತ್ ಹಳಿಗಳ ಮೇಲೆ ಯುವಕ ಬೀಳದ್ದಿದ್ದರಿಂದ ವಿದ್ಯುತ್ ಹರಿದಿಲ್ಲ. ಇಲ್ಲದಿದ್ದರೆ ಆತ ಸ್ಥಳದಲ್ಲೇ ಸುಟ್ಟು ಕರಕಲಾಗುತ್ತಿದ್ದ. ಯುವಕ ಹಳಿಗಳ ಮೇಲೆ ಹಾರಿದ ತಕ್ಷಣ ಮೆಟ್ರೊ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಯಿತು.
ಹಳಿಗಳ ಮೇಲೆ ಹರಿಯುತ್ತಿದ್ದ ವಿದ್ಯುತ್‍ನ್ನು ಸ್ಥಗಿತಗೊಳಿಸಿ ಮೆಟ್ರೊ ಸಿಬ್ಬಂದಿ ಗಾಯಗೊಂಡಿದ್ದ ಯುವಕನನ್ನು ರಕ್ಷಿಸಿ ಮೇಲೆತ್ತಿದರು.

        ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನನ್ನು ಮೊದಲು ವಿಕ್ಟೋರಿಯಾ ಆಸ್ಪತ್ರೆಗೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರ್ಘಟನೆಯಿಂದ ಯಲಚೇನಹಳ್ಳಿ ನಾಗಸಂದ್ರ ಮಾರ್ಗದ ಹಸಿರು ಮೆಟ್ರೊ ಸಂಚಾರ 1 ಗಂಟೆ ವ್ಯತ್ಯಯವಾಗಿತ್ತು. ಇದೇ ಮೊದಲ ಬಾರಿಗೆ ಆತ್ಮಹತ್ಯೆ ಯತ್ನ ನಡೆದಿದ್ದು, ನಾಗರಿಕರಲ್ಲಿ ಆತಂಕ ಸೃಷ್ಠಿಸಿದೆ.

        ಆತ್ಮಹತ್ಯೆ ಯತ್ನದಿಂದ 1 ಗಂಟೆಗಳ ಕಾಲ ರೈಲು ಪ್ರಯಾಣ ಮುಂದುವರೆಸದಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಯಲಚೇನಹಳ್ಳಿ ಕಡೆಯಿಂದ ಬಂದ ರೈಲು ಏಕಾಏಕಿ ಸ್ಥಗಿತಗೊಂಡಿತು. ಯಾವ ಕಾರಣಕ್ಕೆ ಎಂದು ವಿಚಾರಿಸಿದ ಪ್ರಯಾಣಿಕರು ಯುವಕನ ಆತ್ಮಹತ್ಯೆ ಯತ್ನ ವಿಷಯ ಗೊತ್ತಾಗಿ ಹೌಹಾರಿದರು.ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಸಿಬ್ಬಂದಿಗಳು ಪ್ರಯಾಣಿಕರಿಗೆ ಮುಟ್ಟಿಸಿದರು.ಪ್ರಯಾಣಿಕರು ರೈಲು ನಿಲ್ದಾಣದಿಂದ ಹೊರ ಬಂದು ಬಸ್ ಆಟೋ ಮೂಲಕ ತೆರಳಿದ್ದಾರೆ.

ಭದ್ರತಾ ವೈಫಲ್ಯ

         ಮೆಟ್ರೋ ರೈಲಿನ ಸಿಬ್ಬಂದಿಗಳ ಕಣ್ಣುತಪ್ಪಿಸಿ ಯುವಕ ರೈಲು ಹಳಿಗಳ ಮೇಲೆ ಬಿದ್ದಿದ್ದಾದರೂ ಹೇಗೆ ಎಂಬ ಪ್ರಶ್ನೆ ಎದುರಾಗಿದೆ.ಭದ್ರತಾ ಸಿಬ್ಬಂದಿಯ ವೈಫಲ್ಯದ ಬಗ್ಗೆ ಬಿ.ಎಂ.ಆರ್.ಸಿ.ಎಲ್. ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಡಿಸಿಪಿ ಅಣ್ಣಾಮಲೈ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಂಕರಪುರ ಪೆÇಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link