ಹೊಸದುರ್ಗ
ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯದಲ್ಲಿ ಸಚಿವ ಸಂಪುಟ ರಚನೆ ಇಂದು ನೆರವೇರಿದ ಬೆನ್ನಲ್ಲೇ ಬಿಜೆಪಿ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ.ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಪಕ್ಷದ ವಿರುದ್ಧ ಫುಲ್ ಗರಂ ಆಗಿದ್ದು, ಪಕ್ಷದಲ್ಲಿ ಒಂದು ವರ್ಷದ ಕಾಲ ಬಹಳ ಹಿಂಸೆ ಕೊಟ್ಟರು. ಹೆಜ್ಜೆ ಹೆಜ್ಜೆಗೆ ಅನುಮಾನ ಮಾಡಿದರು. ಇದರಿಂದ ನಾನು ಜರ್ಝಿತನಾಗಿದ್ದೇನೆ ಎಂದು ಕಣ್ಣೀರಿಟ್ಟ ಘಟನೆಯು ನಡೆಯಿತು.
2008ರಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದ್ದು ಹೊಸದುರ್ಗದ ಪಕ್ಷೇತರ ಶಾಸಕನಾಗಿದ್ದ ನನ್ನಿಂದ. ಆದರೆ, ಅದರ ಕೃತಜ್ಞತೆ ಬಿಜೆಪಿಗರಿಗಿಲ್ಲ.ಮಂತ್ರಿ ಪದವಿ ಕೇಳಿದ್ರೆ ಏನ್ರಿ ನೀವು ಎಸ್ಸಿ ಆಗಿದ್ರೂ ನಿಮಗೆ ಜನರಲ್ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟಿದ್ದೇ ದೊಡ್ಡದು, ಇನ್ನೂ ಮಂತ್ರಿ ಸ್ಥಾನ ಎಲ್ಲಿ ಕೊಡೊದಾ ಎನ್ನುತ್ತಾರೆ ಈ ಮಾತು ಹೇಳುವ ಮುನ್ನ ಅವರು 2008ರಲ್ಲಿ ತಮ್ಮ ಪಕ್ಷ ಇದ್ದ ಸ್ಥತಿಯನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿದರು.
ಏನ್ ಪದೇ ಪದೆ ಎಸ್ಸಿಗೆ ಜನರಲ್ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟಿದ್ದು ಅಂತಾ ಹೇಳೋದು, ಅದರಲ್ಲೂ ಹೆಜ್ಜೆ ಹೆಜ್ಜೆಗೆ ನನ್ನ ಮೇಲೆ ಅನುಮಾನ ಬೇರೆ ಪಡುತ್ತಾರೆ ಈ ವರ್ತನೆಯಿಂದ ಬಹಳ ಹಿಂಸೆ ಅನುಭವಿಸಿದ್ದೇನೆ.ರೆಸಾರ್ಟ್ ನಲ್ಲಿ ನನ್ನ ಮೊಬೈಲ್ ಫೋನ್ ಇನ್ಕಮಿಂಗ್ ಕೂಡ ಬ್ಲಾಕ್ ಮಾಡಿದ್ರು.ನಾನು ಪಕ್ಷ ಸೇರಿ ತಪ್ಪು ಮಾಡಿಬಿಟ್ಟಿ ಅನ್ನಿಸೋಕೆ ಶುರುವಾಗಿದೆ. ನನಗೆ ಪಕ್ಷ ರಾಜಕಾರಣ ಆಗಿಬರೋದಿಲ್ಲ. ಹಿಂದೆ ಆಗಿದ್ದ ತಪ್ಪು ಮತ್ತೊಮ್ಮೆ ಮರುಕಳಿಸದಂತೆ ಜಾಗ್ರತೆ ವಹಿಸಬೇಕಾಗಿತ್ತು. ಪಕ್ಷೇತರನಾಗಿಯೇ ಉಳಿಯಬೇಕಾಗಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ.
ಪಕ್ಷದ ಮುಖಂಡರಿಗೆ ಹಲವು ಸಾರಿ ಹೇಳಿದ್ದೇನೆ. ನಾನು ಯಡಿಯೂರಪ್ಪ ಅವರನ್ನು ನಂಬಿಕೊಂಡು ಬಂದಿದ್ದೇನೆ. ಅವರಿಗೆ ಮೋಸ ಮಾಡೋದಿಲ್ಲ. ಪಕ್ಷ ಬಿಡುವುದಾದರೆ ನಿಮಗೆಲ್ಲ ಧೈರ್ಯವಾಗಿ ಹೇಳಿಯೇ ಹೋಗುತ್ತೇನೆ ಎಂದು ಹೇಳಿದ್ದೇನೆ. ಆದರೂ ನನ್ನ ಮೇಲೆ ಅನುಮಾನ.ಒಬ್ಬ ಕಾನ್ಸೆಟಬಲ್ ವರ್ಗಾವಣೆ ಮಾಡಿಕೊಳ್ಳುವ ಶಕ್ತಿಯೂ ಇರಲಿಲ್ಲ. ಇನ್ನೂ ಈಗ ಪಕ್ಷದಿಂದ ಗೆದ್ದಿರುವ ಸಂದರ್ಭದಲ್ಲಿ ನನ್ನ ಮಾತಿಗೆ ಬೆಲೆಯೇ. ಅಂತಹ ನಂಬಿಕೆ, ನಿರೀಕ್ಷೆಯೂ ಇಲ್ಲ. ಇರುವಷ್ಟು ದಿನ ಪಕ್ಷದಲ್ಲಿ ಪ್ರಾಮಾಣಿಕವಾಗಿ ಇರುತ್ತೇನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








