100ಕೋಟಿ ಹಿಂದುಗಳಿದ್ದರೂ ಗೋಹತ್ಯೆ ಹಾಗೂ ಲವ್‍ಜಿಹಾದ್ ನಡೆಯುತ್ತಿರುವುದು ವಿಷಾದನೀಯ

ಚಿಕ್ಕನಾಯಕನಹಳ್ಳಿ

      ರಾಷ್ಟ್ರದಲ್ಲಿ 100ಕೋಟಿ ಹಿಂದುಗಳಿದ್ದರೂ ಗೋಹತ್ಯೆ ಹಾಗೂ ಲವ್‍ಜಿಹಾದ್ ನಡೆಯುತ್ತಿರುವುದು ವಿಷಾದನೀಯ ಎಂದು ಭಜರಂಗದಳದ ಜಿಲ್ಲಾ ಸಂಚಾಲಕ ಚಂದ್ರಶೇಖರ್ ವಿಷಾಧಿಸಿದರು.

      ಪಟ್ಟಣದ ಪ್ರಸನ್ನರಾಮೇಶ್ವರ ದೇವಾಲಯದ ಮುಂಭಾಗ ಬಜರಂಗ ದಳದ ನೂತನ ಶಾಖಾ ಮೆರವಣಿಗೆಯ ಸಭೆಯಲ್ಲಿ ಮಾತನಾಡಿದ ಅವರು, ಅಮೇರಿಕಾ ದೇಶ ಕೇವಲ 500ವರ್ಷಗಳ ಹಿಂದೆ ಪ್ರಪಂಚಕ್ಕೆ ಪರಿಚಯವಾಗಿತ್ತು ಇಂದು ಆ ದೇಶ ಜಗತ್ತನ್ನು ಆಳುವ ರಾಷ್ಟ್ರವಾಗಿದೆ, ಅಮೇರಿಕಾದ ರಾಷ್ಟ್ರಗೀತೆಯನ್ನು ಎಲ್ಲರೂ ಹಾಡಬೇಕು ಇದು ಅವರ ರಾಷ್ಟ್ರದ ಕಾನೂನು, ನಮ್ಮ ದೇಶದಲ್ಲಿ ರಾಷ್ಟ್ರಗೀತೆ ಹಾಡಲು ಹಿಂದು ಮುಂದೆ ನೋಡುತ್ತೇವೆ ಎಂದರು.

        ಅಖಂಡ ಹಿಂದು ರಾಷ್ಟ್ರವಾದ ಭಾರತ ದೇಶದಲ್ಲಿ ಜಾತ್ಯಾತೀತ ಹೆಸರಿನಲ್ಲಿ ಧರ್ಮವನ್ನು ಒಡೆದು ಆಳುತ್ತಿದ್ದಾರೆ ರಾಜಕೀಯ ಮಾಡಲು ಜಾತಿ ಜಾತಿಗಳಲ್ಲಿ ವಿಷ ಬೀಜ ಬಿತ್ತಿ ಅಧಿಕಾರಕ್ಕೆ ಹೋರಾಟ ಮಾಡುತ್ತಿದ್ದಾರೆ, ಎಂದು ವಿಷಾಧಿಸಿದ ಅವರು ಇಡೀ ಜಗತ್ತು ಹಿಂದು ರಾಷ್ಟ್ರವಾಗಿತ್ತು, ಪ್ರಪಂಚದ 48 ರಾಷ್ಟ್ರಗಳನ್ನು ಹಿಂದುಗಳು ಆಳುತ್ತಿದ್ದರು, ಅತಿ ಹೆಚ್ಚು ಪ್ರಕೃತಿ ಸಂಪತ್ತಿರುವ ರಾಷ್ಟ್ರ ಇಂದು 3ನೇ ದರ್ಜೆ ರಾಷ್ಟ್ರವಾಗಿ ಬಡತನದಿಂದ ಜೀವನ ನಡೆಸುವಂತಾಗಿದೆ, ಇಂದು ದೇಶದಲ್ಲಿ ವ್ಯಕ್ತಿಗಳ ಆರಾಧನೆ ಮಾಡುತ್ತಿರುವುದು ನಿಲ್ಲಬೇಕು ಎಂದರು.

      1948ರಲ್ಲಿ ಜಪಾನಿನ ದೊಡ್ಡ ನಗರಗಳು ಅಣು ಬಾಂಬಿನಿಂದ ಸುಟ್ಟು ಸುಣ್ಣವಾಗಿತ್ತು, ಇಂದು ಜಗತ್ತನ್ನು ಬೆರಗುಗೊಳಿಸಿ ಪುನಃ ತಲೆ ಎತ್ತಿ ನಿಂತಿದೆ, ಹುಟ್ಟಿನಿಂದ ಯಾರೂ ಇಂತಹ ಜಾತಿಯಲ್ಲಿ ಹುಟ್ಟಬೇಕು ಎಂದು ಹೇಳಿಲ್ಲ ಅವರವರ ವ್ಯಕ್ತಿತ್ವದಿಂದ ಜಾತಿಯನ್ನು ಗುರುತಿಸಿಕೊಂಡಿದ್ದಾರೆ ಎಂದ ಅವರು, 24 ಸಾವಿರ ಶ್ಲೋಕ ಬರೆದ ವಾಲ್ಮೀಕಿ, ಬೇಡರು, ವ್ಯಾಸ ಮಹಾಮುನಿಗಳು ಬೆಸ್ತರು ಇವರೆಲ್ಲ ಧರ್ಮ ಜಾಗೃತಿ ಮಾಡಿಸಿದ್ದಾರೆ, ನೂತನವಾಗಿ ಪಟ್ಟಣದಲ್ಲಿ ಪ್ರಾರಂಭವಾಗಿರುವ ಭಜರಂಗದಳಕ್ಕೂ ಬಿ.ಜೆ.ಪಿಗೆ ಯಾವುದೇ ಸಂಬಂಧವಿಲ್ಲ, ಹಿಂದು ಸಮಾಜವನ್ನು ಒಗ್ಗೂಡಿಸುವುದು ಬಜರಂಗದಳದ ಗುರಿ, ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಬಜರಂಗದಳ ಶಾಖೆಗಳನ್ನು ಆರಂಭ ಮಾಡಲು ಭಜರಂಗದಳ ಸಮಾಜದ ಪರಿವರ್ತನೆಗೆ ಶ್ರಮಿಸುತ್ತಿದೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ, ಒಂದು ಬಾರಿ ಭಜರಂಗದಳದ ಸದಸ್ಯರಾದರೆ ರಾಷ್ಟ್ರ ರಾಜ್ಯ ಜಿಲ್ಲಾ ಹಾಗೂ ತಾಲ್ಲೂಕಗಳಲ್ಲಿ ಭಜರಂಗದಳದಿಂದ ಎಲ್ಲಿ ಹೋದರೂ ನಿಮಗೆ ಗೌರವ ಸಿಗುತ್ತದೆ ಎಂದರು.

       ತಮ್ಮಡಿಹಳ್ಳಿ ಮಠದ ಡಾ.ಅಭಿನವಮಲ್ಲಿಕಾರ್ಜುನದೇಶೀಕೇಂದ್ರಸ್ವಾಮೀಜಿ ಮಾತನಾಡಿ, ಭರತ ಭೂಮಿ ಭರತ ಖಂಡ ಹಿಂಸೆ ಸಹಿಸುವುದಿಲ್ಲ, ಮಹಾತ್ಮಗಾಂಧಿಜಿಯು ಸಹ ಅಹಿಂಸೆ ತತ್ವ ಅನುಸರಿಸಿದವರು, ಸಂಘಟನೆಯು ಹಿಂಸೆ ರೂಪ ತಾಳಬಾರದು, ಅಹಿಂಸೆಯ ಮೂಲಕವೇ ಬಲಿಷ್ಠವಾಗಬೇಕು, ಅಧರ್ಮ ಧರ್ಮದಿಂದಲೇ ಹೋಗಬೇಕು ಎಂದ ಅವರುಸಂಘಟನೆಗಳು ಜಾಗೃತವಾಗಬೇಕು ಎಂದರು.
ತಾ.ಬಿ.ಜೆ.ಪಿ ಮಾಜಿ ಅಧ್ಯಕ್ಷ ಶ್ರೀನಿವಾಸಮೂರ್ತಿ ಮಾತನಾಡಿ, ಶಿವಾಜಿಯಂತಹ ಮಹಾನ್ ಚೇತನ ದೇಶದಲ್ಲಿ ಹುಟ್ಟಿ ಹಿಂದು ಸಂಘಟನೆ ರಕ್ಷಣೆ ಮಾಡುತ್ತಾರೆ, ಭಜರಂಗದಳ ಇಡೀ ದೇಶದಲ್ಲಿ ಹಿಂದು ಧರ್ಮವನ್ನು ರಕ್ಷಣೆ ಮಾಡಬೇಕೆಂದು ಹೊರಟಿದ್ದು ಇಡೀ ದೇಶದಲ್ಲಿ ಹಿಂದು ಜಾಗೃತಿಯಾಗುತ್ತಿದೆ ಹಾಗಾಗಿ ಯುವಕರು ಕೈಜೋಡಿಸಬೇಕು ಎಂದರು.

     ಪಟ್ಟಣದ ಪ್ರಸನ್ನರಾಮೇಶ್ವರ ದೇವಾಲಯದಿಂದ ಹೊರಟ ಶೋಭಾಯಾತ್ರೆ ನೆಹರು ವೃತ್ತ, ಹೊಸ ಬಸ್‍ನಿಲ್ದಾಣ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಪ್ರಸನ್ನರಾಮೇಶ್ವರ ದೇವಾಲಯದಲ್ಲಿ ಶೋಭಾಯಾತ್ರೆ ನಡೆಯಿತು.ಕಾರ್ಯಕ್ರಮದಲ್ಲಿ ಮಾಜಿ ಪುರಸಭಾ ಅಧ್ಯಕ್ಷ ಹೆಚ್.ಬಿ.ಪ್ರಕಾಶ್, , ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link