ಬೆಂಗಳೂರು
ದೇಶದಲ್ಲೇ ಅತೀ ಹೆಚ್ಚು ಸೇಡಿನ ಕೊಲೆಗಳು ನಡೆದಿರುವ ನಗರಗಳ ಪೈಕಿ ಕರ್ನಾಟಕ ರಾಜಧಾನಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ರಾಷ್ಟ್ರ ರಾಜಧಾವಿ ದೆಹಲಿ ಎರಡನೇ ಸ್ಥಾನದಲ್ಲಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದ್ದು, ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (NCRB) ಬಿಡುಗಡೆ ಮಾಡಿರುವ 2019ರ ಅಪರಾಧ ಪ್ರಕರಣಗಳ ದತ್ತಾಂಶಗಳ ಅನ್ವಯ ದೇಶದಲ್ಲಿ ನಡೆದ ಒಟ್ಟಾರೆ ಕೊಲೆ ಪ್ರಕರಣಗಳ ಪಟ್ಟಿಯಲ್ಲಿ ದೆಹಲಿ ಅಗ್ರಾ ಸ್ಥಾನದಲ್ಲಿದೆ. ದೆಹಲಿಯಲ್ಲಿ ಒಟ್ಟು 505 ಕೊಲೆ ಪ್ರಕರಣಗಳು ನಡೆದಿದ್ದು, 2019ರಲ್ಲಿ ಬೆಂಗಳೂರಿನಲ್ಲಿ ಒಟ್ಟು 210 ಕೊಲೆ ನಡೆದಿದ್ದು ಸಿಲಿಕಾನ್ ಸಿಟಿ 2ನೇ ಸ್ಥಾನದಲ್ಲಿದೆ.
58 ದ್ವೇಷದ ಕೊಲೆ ಪ್ರಕರಣಗಳು ದಾಖಲಾಗಿರುವ ನಾಗಪುರ ಮೂರನೇ ಸ್ಥಾನದಲ್ಲಿದ್ದು, ಚೆನ್ನೈ (45 ಪ್ರಕರಣ), ಸೂರತ್ (43 ಪ್ರಕರಣ), ಕೋಲ್ಕತಾ (27 ಪ್ರಕರಣ) ಅಹ್ಮದಾಬಾದ್ (23 ಪ್ರಕರಣ) ಮತ್ತು ಇಂದೋರ್ (16 ಪ್ರಕರಣ) ನಂತರದ ಸ್ಥಾನದಲ್ಲಿದೆ.
