ದೇಶದ ಮೊದಲ ಪ್ರಾಣಿಗಳ ಲೇಸರ್ ಥೆರಪಿ ಕೇಂದ್ರ ಸ್ಥಾಪನೆ..!!!

ಬೆಂಗಳೂರು

      ನಗರದ ಹೆಬ್ಬಾಳದ ಪಶುವೈದ್ಯಕೀಯ ಕೇಂದ್ರದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನದ ಪ್ರಾಣಿಗಳ ಲೇಸರ್ ಥೆರಪಿ ಕೇಂದ್ರ ಸ್ಥಾಪಿಸಲಾಗಿದೆ.

     ಪಶು ವೈದಕೀಯ ದಿನದ ಸ್ಮರಣೆಗಾಗಿ ಸುಮಾರು 25 ಲಕ್ಷ ರೂ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಲೇಸರ್ ಥೆರಪಿ ಕೇಂದ್ರದಲ್ಲಿ ಹಸು,ಎಮ್ಮೆ, ಕುರಿ, ಮೇಕೆ ಸೇರಿದಂತೆ ಎಲ್ಲ ಜಾತಿಯ ಪ್ರಾಣಿಗಳಿಗೆ ಅಗತ್ಯವಿರುವ ಲೇಸರ್ ಚಿಕಿತ್ಸೆಯನ್ನು ನೀಡಲಾಗುತ್ತದೆ.ಕೇಂದ್ರದಲ್ಲಿ ಪಶು ಸಾಕಾಣೆ ಮಾಡುವ ರೈತರು ತಮ್ಮ ಸಾಕು ಪ್ರಾಣಿಗಳಿಗೆ ಲೇಸರ್ ಥೆರಪಿ ಅಗತ್ಯವಿದ್ದಲ್ಲಿ ಚಿಕಿತ್ಸೆ ಕೊಡಿಸಬಹುದಾಗಿದೆ.

      ಪಶುವೈದ್ಯಕೀಯ ವಿಶ್ವವಿದ್ಯಾಲಯ ಹಾಗೂ ಲ್ಯಾಬ್ ಇಂಡಿಯಾ ಹೆಲ್ತ್ ಕೇ ಸಂಸ್ಥೆ ಸಹಯೋಗದೊಂದಿಗೆ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ನಿರ್ಮಾಣಗೊಂಡಿರುವ ಲೇಸರ್ ಥೆರಪಿ ಕೇಂದ್ರವನ್ನು ಪಶು ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ಎಚ್.ಡಿ.ನಾರಾಯಣ ಸ್ವಾಮಿ ಇಂದು ಉದ್ಘಾಟಿಸಿದರು ಕಾರ್ಯಕ್ರಮಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ನಾರಾಯಣಸ್ವಾಮಿ ಅವರು, ರೈತರಿಗೆ ಪಶುವೈದ್ಯಕೀಯದ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಪಶು ವೈದ್ಯಕೀಯ ದಿನಾಚರಣೆ ಆಚರಿಸಲಾಗುತ್ತದೆ.

       ಈ ಬಾರಿ “ಲಸಿಕೆಯ ಮಹತ್ವ” ಎಂಬ ವಾಕ್ಯದೊಂದಿಗೆ ಪಶುವೈದ್ಯಕೀಯ ದಿನವನ್ನು ಆಚರಿಸಲಾಗುತ್ತಿದೆ. ರೈತರಿಗೆ ಪ್ರಾಣಿಗಳಿಗೆ ತಗುಲುವ ರೋಗಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಅವುಗಳಿಗೆ ಲಸಿಕೆ, ಸೇರಿದಂತೆ ಅಗತ್ಯ ಚಿಕಿತ್ಸೆ ಒದಗಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ಉಚಿತ ಥೆರಪಿ:

      ಪ್ರಾಣಿಗಳಿಗೆ ದೀರ್ಘ ಕಾಲ ಬಾಧಿಸುವ ರೋಗಗಳಿಂದ ಬಳಲುತ್ತಿರುತ್ತವೆ ಇವುಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಭಾರತದಲ್ಲೆ ಮೊದಲ ಬಾರಿಗೆ ನಮ್ಮ ಪಶುವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಲೇಸರ್ ತೆರಪಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ರೈತರು ತಮ್ಮ ಸಾಕು ಪ್ರಾಣಿಗಳಿಗೆ ರೋಗ ತಗುಲಿದಾಗ ಇಲ್ಲಿ ಉಚಿತವಾಗಿ ಚಿಕಿತ್ಸೆ ಕೊಡಿಸಬಹುದಾಗಿದೆ. ಇದನ್ನು ಹೊರತುಪಡಿಸಿದರೆ ನಾಯಿಗಳಿಗೆ ಕನಿಷ್ಟ ಚಿಕಿತ್ಸಾ ವೆಚ್ಚ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

      ಇದೇ ವೇಳೆ ಲ್ಯಾಬ್ ಇಂಡಿಯಾ ಹೆಲ್ತ್ ಕೇರ್ ಗುರುಪುರ ಜೊತೆ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಬೀದರ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಕಾರ್ಯಕ್ರಮದಲ್ಲಿ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಪ್ರಧಾನ ನಿರ್ದೇಶಕ ವೀರೇಂದ್ರ ಉಪಧ್ಯಾಯ, ಲ್ಯಾಬ್ ಇಂಡಿಯಾ ಮತ್ತು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಚ್.ಆರ್.ವಿ.ರೆಡ್ಡಿ, ಡೀನ್  ಪ್ರೊ.ಆರ್.ವಿ. ಪ್ರಸಾದ್ ಇನ್ನಿತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap