ಮಹಾತ್ಮಗಾಂಧೀಜಿಯವರದು ಮೇರು ವ್ಯಕ್ತಿತ್ವ

ಚಿಕ್ಕನಾಯಕನಹಳ್ಳಿ

       150ಕ್ಕೂ ಹೆಚ್ಚು ರಾಷ್ಟ್ರಗಳ ಸದಸ್ಯತ್ವ ಪಡೆದ ನ್ಯೂಯರ್ಕ್‍ನಲ್ಲಿರುವ ವಿಶ್ವಸಂಸ್ಥೆಯಲ್ಲಿ ಮಹಾತ್ಮಗಾಂಧೀಜಿ ನಿಧನರಾದಾಗ ಧ್ವಜವನ್ನು ಅರ್ಧಕ್ಕೆ ಹಾರಿಸಲಾಯಿತು. ಇದು ಗಾಂಧೀಜಿಯವರ ಮೇರು ವ್ಯಕ್ತಿತ್ವಕ್ಕೆ ಸಂದ ಗೌರವ ಎಂದು ಸಾಹಿತಿ ಎಂ.ವಿ.ನಾಗರಾಜ್‍ರಾವ್ ತಿಳಿಸಿದರು.

        ಪಟ್ಟಣದ ಜ್ಞಾನಪೀಠ ಪ್ರೌಢಶಾಲೆಯಲ್ಲಿ ತಾಲ್ಲೂಕು ಕ.ಸಾ.ಪ, ಶೃಂಗಾರ ಪ್ರಕಾಶನ, ತಾಲ್ಲೂಕು ಸರ್ವೋದಯ ಮಂಡಲರವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಬಾ ಬಾಪು-150ನೇ ವರ್ಷಾಚರಣೆ, ಕುವೆಂಪು-114 ನುಡಿ ನಮನ ಮತ್ತು ಪುಸ್ತಕ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

        ಗಾಂಧೀಜಿಯವರು ದಕ್ಷಿಣಾ ಆಫ್ರಿಕಾದಲ್ಲಿ 21 ವರ್ಷವಿದ್ದು ಅಲ್ಲಿ ನಡೆಯುತ್ತಿದ್ದ ಅನ್ಯಾಯವನ್ನು ಸರಿಪಡಿಸಲು ಶ್ರಮಿಸಿದ ಅವರು, ಗಾಂಧೀಜಿಯವರ ಸತ್ಯಾಗ್ರಹ, ಅಹಿಂಸೆಯ ಕಡೆ ವಿರುದ್ದವೂ ಭಾರತದ ಕಡೆ ನೋಡುವಂತಾಯಿತು. ಭಾರತದಲ್ಲೆಲ್ಲಾ ಸಂಚರಿಸಿ ಇಲ್ಲಿನ ಕಷ್ಟಗಳನ್ನು ಅರಿತು ಸ್ವಾತಂತ್ರ್ಯ ಚಳುವಳಿಗೆ ಧುಮುಕಿ ಜನರಲ್ಲಿ ಸಾತ್ವಿಕತ್ವದ ಕಿಚ್ಚನ್ನು ಹಚ್ಚಿಸಿ ಯಶಸ್ವಿಯಾದರು ಎಂದರು.

         ಕಾರ್ಯಕ್ರಮದಲ್ಲಿ ತಾ.ಕಸಾಪ ಅಧ್ಯಕ್ಷೆ ಎನ್.ಇಂದಿರಮ್ಮ, ಜ್ಞಾನಪೀಠ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶಂಕರ್‍ರಾವ್ ಉಪಸ್ಥಿತರಿದ್ದರು. ಉಪನ್ಯಾಸಕ ಆರ್.ಧನಂಜಯ್‍ಮೂರ್ತಿ ಕುವೆಂಪುರವರ ಬಗ್ಗೆ ನುಡಿನಮನ ಸಲ್ಲಿಸಿದರು. ತಾ.ಸರ್ವೋದಯ ಮಂಡಳ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಪ್ರಾಸ್ತಾವಿಕ ನುಡಗಳನ್ನಾಡಿದರು. ಡಿಎಸ್‍ಎಸ್ ಮುಖಂಡ ಗೋ.ನಿ.ವಸಂತ್‍ಕುಮಾರ್, ತಾ.ಕಸಾಪ ಖಜಾಂಚಿ ರಾಮಕೃಷ್ಣಪ್ಪ, ನಗರ ಕಾರ್ಯದರ್ಶಿ ಸಿ.ಬಿ.ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link