ಬ್ಯಾಡಗಿ:
ಮೆಲಸೇತುವೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ತಾಲೂಕಿನ ಛತ್ರ ಗ್ರಾಮದ ಗ್ರಾಮಸ್ಥರು ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ ನಾಲ್ಕನ್ನು (ಎನ್‍ಎಚ್4) ತಡೆದು ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ನಡೆದಿದೆ.
ರಾಣೆಬೆನ್ನೂರು ತಾಲೂಕಿನ ಕಜ್ಜರಿ ಗ್ರಾಮದ ಮಾಲತೇಶ ಮೋಟೆಬೆನ್ನೂರು (42) ಛತ್ರದಿಂದ ಕಜ್ಜರಿ ಗ್ರಾಮಕ್ಕೆ ವಾಪಸ್ಸು ರಸ್ತೆ ಕ್ರಾಸ್ ದಾಟುತ್ತಿದ್ದ ಸಂದರ್ಭದಲ್ಲಿ ದಾವಣಗೆರೆ ಕಡೆಯಿಂದ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ಸೊಂದು ದ್ವೀಚಕ್ರದ ಮೇಲೆ ಹಾಯ್ದಿದ್ದು, ತೀವ್ರ ಪೆಟ್ಟು ಬಿದ್ದಿದೆ. ಹೆಚ್ಚಿನ ಚಿಕೀತ್ಸೆಗಾಗಿ ದಾವಣಗೆರೆ ಎಸ್‍ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನು ಕಂಡ ಗ್ರಾಮಸ್ಥರು ದಿಡೀರನೆ ಟೈರ್‍ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಮೇಲ್ಸೆತುವೆ ಇಲ್ಲದೇ ಸಾಕಷ್ಟು ಅನಾಹುತಗಳು ನಡೆಯುತ್ತಿದ್ದು, ರಾಷ್ಟ್ರೀಯ ಪ್ರತಿಯೊಂದಕ್ಕು ಅನೂಕಲವಾಗಿದೆ ಆದರೆ ಇಲ್ಲಿನ ಅಪಘಾತಗಳನ್ನು ನೋಡಿ ಕಣ್ಣು ಕುರುಡಾಗಿವೆ ಎನ್ನುತ್ತಾರೆ ಇಲ್ಲಿನ ಸಾರ್ವಜನಿಕರು.
ಛತ್ರ ಗ್ರಾಮದಿಂದ ದಿನನಿತ್ಯದ ಚಟುವಟಿಕೆಗಳಿಗೆ ರಾಣಿಬೆನ್ನೂರ, ಹಾವೇರಿಗೆ ಸಾರ್ವಜನಿಕರು ಹೋಗುತ್ತಾರೆ. ಸುತ್ತಮುತ್ತಲಿನ ಗ್ರಾಮದ ಜನರು ಕೂಡ ಈ ಮಾರ್ಗವಾಗಿ ಸಂಚರಿಸುತ್ತಾರೆ. ಆದರೆ ರಾಷ್ಟ್ರೀಯ ಹೆದ್ದಾರಿಯನ್ನು ದಾಟುವುದೇ ಒಂದು ದುಸ್ಥರವಾಗಿದೆ.
ಪ್ರಯಾಣಿಕರಲ್ಲಿ ಭಯ: ವಿದ್ಯಾಭ್ಯಾಸಕ್ಕಾಗಿ ನಗರ ಪ್ರದೇಶಗಳಿಗೆ ತೆರಳುವ ವಿದ್ಯಾರ್ಥಿಗಳು ಹಳ್ಳಿಗಳಿಂದ ಮೂರ್ನಾಲ್ಕು ಕೀಲೋ ಮೀಟರ ನಡೆದುಕೊಂಡು ಇಲ್ಲಿಂದ ಬಸ್ಸಗೆ ತೆರಳುತ್ತಾರೆ. ಸಣ್ಣ ಮಕ್ಕಳು ರಸ್ತೆ ದಾಟಲು ಭಯ ಭೀತಿಗೊಳ್ಳುತ್ತಾರೆ. ವೇಗವಾಗಿ ಬರುವ ವಾಹನಗಳು ರಸ್ತೆ ಪಕ್ಕದಲ್ಲಿದ್ದ ಪ್ರಯಾಣಿಕರ ಮೇಲೆ ಬಂದು ಭಯದ ವಾತಾವರಣ ನಿರ್ಮಿಸುತ್ತಿವೆ.ಪೋಲಿಸ್ ಅಧಿಕಾರಿಗಳು ಈ ಕುರಿತು ಸಂಬಂದಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುವ ಮೂಲಕ ಸಮಸ್ಯೆಯನ್ನು ಇಥ್ಯರ್ತಪಡಿಸಲಾಗುವುದು ಎಂದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








