ಶರಣ ಸಂಗಮ ಕಾರ್ಯಕ್ರಮ

ಹಾನಗಲ್ಲ :
         ವಚನ ಸಂಸ್ಕಾರದ ಮಹಾಮಂತ್ರವನ್ನು ನೀಡಿದ ಹನ್ನೆರಡನೆ ಶತಮಾನದ ಶರಣರು ಆಡಿದಂತೆ ನಡೆ, ನಡೆಗೆ ತಕ್ಕ ನುಡಿಗಳನ್ನು ಅನುಭಾವದ ಮೇರು ಮಹತಿನ್ನು ನೀಡಿದ ಮಹಾತ್ಮರು ಎಂದು ಹಾನಗಲ್ಲಿನ ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಸಿ.ಮಂಜುನಾಥ ನುಡಿದರು.
     
        ಹಾನಗಲ್ಲಿನ ಶ್ರೀಕುಮಾರೇಶ್ವರ ವಿರಕ್ತಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಆಯೋಜಿಸಿದ ಶರಣ ಸಂಗಮ ಕಾರ್ಯಕ್ರಮದಲ್ಲಿ ಶರಣರ ನುಡಿ ನಡೆ ಕುರಿತು ಮಾತನಾಡಿದ ಅವರು, ವಚನಗಳು ಮಾನವ ಸಾರಸ್ವತ ಲೋಕದ ದಿವ್ಯ ಗಂಗೆ. ನಮ್ಮೊಳಗು ಹೊರಗುಗಳನ್ನು  ಶುದ್ಧಗೊಳಿಸಿ ಅಂತರಂಗ ಅರಳಿಸಿ, ಮಹಾ ಮಾನವತಾ ವಾದನ್ನು ಹಗುರವಾಗಿ ತಿಳಿಸಿದ ಮೇರು ಸಾಹಿತ್ಯವನ್ನು ನೀಡಿದರು. ವಚನಗಳು ಸರಳ ಸುಂದರ. ಆದರೆ ಅವುಗಳನ್ನು ಜನಮಾನಸಕ್ಕೆ ತಲುಪಿಸುವಲ್ಲಿ ತೃಪ್ತಿಕರವಾದ ಪ್ರಯತ್ನ ನಡೆಯುತ್ತಿಲ್ಲ. ಇಂದಿನ ತಂತ್ರಜ್ಞಾನ ಯುಗದಲ್ಲಿಯೂ ಮನಸ್ಸನ್ನು ಹಗುರವಾಗಿಸಿಕೊಂಡು  ವೈಜ್ಞಾನಿಕವಾದ ಚಿಂತನೆಗಳನ್ನೂ ಒಳಗೊಂಡ ವಚನ ಸಾಹಿತ್ಯ ಹಾಗೂ ಶರಣ ತತ್ವ ಸಂದೇಶಗಳನ್ನು ಪ್ರಸಾರ ಮಾಡುವುದು ಪುಣ್ಯ ಕಾರ್ಯ ಎಂದರು.
          ಭಾರತೀಯ ಸೃಜನಶೀಲನ ಕನ್ನಡ ಸಾಹಿತ್ಯ ಬಳಗದ ಜಿಲ್ಲಾಧ್ಯಕ್ಷ ಸಂತೋಷ ಬಿದರಗಡ್ಡೆ ಮಾತನಾಡಿ, ವಚನ ಸಂಸ್ಕಾರವೆಂಬುದು ಗುರು ಲಿಂಗ ಜಂಗಮದಲ್ಲಿ ಶ್ರದ್ಧೆಯನ್ನು ಹೊಂದಿ ಬದುಕನ್ನು ಸಮಾಜಮುಖಿಯಾಗಿ ಅರಳಿಸಿಕೊಳ್ಳುವ ಒಂದು ದಿವ್ಯ ಸಾಹಿತ್ಯ. ಆಚಾರ ಸಂಹಿತೆಯನ್ನು ಅತ್ಯಂತ ಸರಳವಾಗಿ ಅನುಭಾವದ ಮೂಲಕ ನೀಡಿದ  ವಚನಕಾರರ ಅಂತಃಶಕ್ತಿಯ ಅಭಿವ್ಯಕ್ತಿ ಮಾನವ ಕುಲವನ್ನು ಉದ್ಧರಿಸುವ ನುಡಿ ಸಂಪತ್ತು. ಇಂಥ ಸಾಹಿತ್ಯದ ಸಂಸ್ಕಾರ ಮನೆ ಮನೆಗೆ ತಲುಪಿ ನೆಮ್ಮದಿಯ ಜೀವನಕ್ಕೆ ನಾಂದಿಯಾಗುವಂತಾಗಬೇಕು ಎಂದರು
          ಕದಳಿ ಮಹಿಳಾ ವೇದಿಕೆಯ ತಾಲೂಕು ಘಟಕದ ಗೌರವಾಧ್ಯಕ್ಷೆ ಶಿವಗಂಗಕ್ಕ ಪಟ್ಟಣದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರೊ.ಮಾರುತಿ ಶಿಡ್ಲಾಪೂರ, ತಾಲೂಕಾ ಕಾರ್ಯದರ್ಶಿ ಸುಭಾಸ ಹೊಸಮನಿ, ಭಾರತೀಯ ಸೃಜನಶೀಲನ ಕನ್ನಡ ಸಾಹಿತ್ಯ ಬಳಗದ ಜಿಲ್ಲಾ ಕಾರ್ಯದರ್ಶಿ ದಾವಲ್‍ಮಲ್ಲಿಕ ಇಂಗಳಗಿ, ಅಕ್ಕಮಹಾದೇವಿ ಸುಗಾವಿ, ಸುಭಾಸ ಚೊಗಚಿಕೊಪ್ಪ,  ಭುವನೇಶ್ವರಿ ಚೊಗಚಿಕೊಪ್ಪ, ಎಸ್.ವಿ.ಮಠದ, ಸೌಬಾಗ್ಯ ಉಪ್ಪಿನ, ಜಯಮ್ಮ ಉಪ್ಪಿನ, ಪ್ರೇಮಾ ಮುದಿಗೌಡರ ವಚನ ವಾಚನ ಮಾಡಿದರು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link