ಹಾನಗಲ್ಲ :

ನೀರಾವರಿ ಪಂಪಸೆಟ್‍ಗಳ ಆಕ್ರಮ ಸಕ್ರಮದಡಿ ಹಾವೇರಿ ಜಿಲ್ಲೆಯ 5522ರೈತರ ಅದರಲ್ಲಿ ಹಾನಗಲ್ಲ ತಾಲೂಕಿನ 1326 ರೈತರ ಪಂಪಸೆಟ್‍ಗಳ ಸಕ್ರಮಗೊಳಿಸಿ ವ್ಯವಸ್ಥಿತ ವಿದ್ಯುತ್ ಸರಬರಾಜು ಕಾಮಗಾರಿ ಆರಂಭವಾಗಿದೆ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು.
ಮಂಗಳವಾರ ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದ ಅವರು, ಹಾನಗಲ್ಲ ತಾಲೂಕಿನ ಕೃಷಿ ಪಂಪಸೆಟ್‍ಗಳ 1326 ರೈತ ಗ್ರಾಹಕರು ಆಕ್ರಮ ಸಕ್ರಮದಡಿ ತಲಾ 16800 ರೂ ಹಣವನ್ನು ಹೆಸ್ಕಾಂಗೆ ಪಾವತಿಸುವ ಮೂಲಕ ತಮ್ಮ ಪಂಪಸೆಟ್‍ಗಳನ್ನು ಸಕ್ರಮಗೊಳಿಸಿಕೊಳ್ಳುತ್ತಾರೆ. ಈ ಪಂಪಸೆಟ್‍ಗಳಿಗೆ ವಿದ್ಯುತ್ ಸರಬರಾಜಿಗೆ ಅನುಕೂಲವಾಗುವಂತೆ ಕಂಬ, ತಂತಿ ಹಾಗೂ ಟಿಸಿಗಳನ್ನು ಅಳವಡಿಸುವ ಕಾಮಗಾರಿಗೆ ಸರಕಾರ 13 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದೆ.
ಸ್ಕಿಲ್‍ಟೆಕ್ ಕಂಪನಿ ಗುತ್ತಿಗೆದಾರರು ಈ ಕಾಮಗಾರಿಯನ್ನು 9 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವರು ಎಂದ ಅವರು, ಹಾವೇರಿ ಜಿಲ್ಲೆಯ ಒಟ್ಟು 5522 ರೈತರ ಪಂಪಸೆಟ್‍ಗಳ ಆಕ್ರಮ ಸಕ್ರಮಕ್ಕೆ 55.55 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.2019 -2 ನೇ ಸಾಲಿನ ಲೋಕೋಪಯೋಗಿ ಇಲಾಖೆ 5054 ಜಿಲ್ಲಾ ಮುಖ್ಯ ರಸ್ತೆ ಯೋಜನೇತರ ಅಡಿಯಲ್ಲಿ ಹಾಗೂ 3054 ರಾಜ್ಯ ಹೆದ್ದಾರಿ ದುರಸ್ಥಿ ಹಾಗೂ ನಿರ್ವಹಣೆ ಅಡಿಯಲ್ಲಿ ಹಾನಗಲ್ಲ ತಾಲೂಕಿಗೆ ಒಟ್ಟು 16 ಹೈಮಾಸ್ ಲೈಟುಗಳನ್ನು ಅಳವಡಿಸಲು 80 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ.
ತಾಲೂಕಿನ ಹಾನಗಲ್ಲ ನಗರ ಸೇರಿದಂತೆ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಚಿಕ್ಕಾಂಶಿ ಹೊಸೂರ, ಹೇರೂರ, ಕೂಸನೂರ, ಸಮ್ಮಸಗಿ, ಕಲಕೇರಿ, ನರೇಗಲ್, ಬಾಳಂಬೀಡ, ಕೊಪ್ಪರಸಿಕೊಪ್ಪ, ಬೆಳಗಾಲಪೇಟ, ಬಮ್ಮನಹಳ್ಳಿ, ಆಲದಕಟ್ಟಿ, ಅಕ್ಕಿಆಲೂರು, ಸೋಮಸಾಗರ, ಹೊಂಕಣ,ಹಾನಗಲ್ಲ ವಿರಕ್ತಮಠದ ಆವರಣಗಳಲ್ಲಿ ಈ ದೀಪಗಳನ್ನು ಅಳವಡಿಸಲಾಗುತ್ತದೆ.ಗುತ್ತಿಗೆದಾರ ಗಂಗಾಧರ ಹಾವೇರಿ ಈ ಕಾಮಗಾರಿಯನ್ನು ನಿರ್ವಹಿಸುವರು ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
