ಹರಪನಹಳ್ಳಿ
ಜ.9 ರ ರಾತ್ರಿ 12 ಗಂಟೆಯಿಂದ ಅಧಿಕೃತವಾಗಿ ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಳಿಸಲಾಗಿದೆ ಹಾಗೂ , ಜ.10 ಗುರುವಾರ ದಿಂದ ಈ ತಾಲೂಕಿಗೆ ಸಂಬಂಧಿಸಿದ ಎಲ್ಲಾ ರೀತಿಯ ಕೆಲಸ ಕಾರ್ಯಗಳು ಬಳ್ಳಾರಿ ಜಿಲ್ಲಾ ವ್ಯಾಪ್ತಿಗೆ ಒಳಪಡಲಿವೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಯವರು ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಇಲ್ಲಿಯ ಕಾರ್ಯಕರ್ತರು ರಾತ್ರಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾತ್ರಿ 9.40ಕ್ಕೆ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ರವರ ಪರವಾಗಿ ಘೋಷಣೆ ಕೂಗಿದರು.
ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಎಂ.ವಿ.ಅಂಜಿನಪ್ಪ, ಮುಖಂಡರಾದ ಟಿ.ಎಚ್ .ಎಂ. ವಿರುಪಾಕ್ಷಯ್ಯ, ವಕೀಲ ವೆಂಕಟೇಶ, ಕೆ.ಎಂ.ಬಸವರಾಜಯ್ಯ, ಡಿ.ಅಬ್ದುಲ್ ರಹಿಮಾನ, ವಸಂತಪ್ಪ, ಮಂಜನಾಯ್ಕ, ಅರುಣಪೂಜಾರ, ಕುಲುಮಿ ಅಬ್ದುಲ್ಲಾ, ತೆಲಿಗಿ ಉಮಾಕಾಂತ, ಇರ್ಪಾನ್ ಮುದುಗಲ, ರಾಯದುರ್ಗದ ವಾಗೀಶ, ನಾಗರಾಜ ಹೊಸಮನಿ, ಎಸ್ .ಕೆ.ಶಮಿವುಲ್ಲಾ, ಜಾಕೀರ್ ಹುಸೇನ, ಇರ್ಪಾದ, ಭಾಷಾ, ಮಹಾಂತೇಶ, ಜಿಸಾನ, ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ