ಭಾನುವಾರದ ಕೋವಿಡ್ ಕರ್ಫ್ಯೂಗೆ ಹೊಸದುರ್ಗ ಉತ್ತಮ ಸ್ಪಂದನೆ

ಹೊಸದುರ್ಗ:

    ಕೊರೊನಾ ವೈರಾಣು ಹಬ್ಬುತ್ತಿರುವುದನ್ನು ತಡೆಯಲು ರಾಜ್ಯ ಸರ್ಕಾರ ಘೋಷಿಸಿರುವ ಮೊದಲ ಭಾನುವಾರದ ಕರ್ಫ್ಯೂ ಕರೆಗೆ ಉತ್ತಮ ಸ್ಪಂದನೆ ದೊರೆತಿದ್ದು, ಭಾನುವಾರ ಮುಂಜಾನೆಯಿಂದ ಹೊಸದುರ್ಗ ತಾಲ್ಲೂಕು ಸಂಪೂರ್ಣ ಸ್ತಬ್ಧ ಆಗಿತ್ತು.

    ಪ್ರತಿ ನಿತ್ಯ ಬೆಳಿಗ್ಗೆ 7ರಿಂದ ಮದ್ಯಾಹ್ನ 3ರವರೆಗೆ ಇಲ್ಲಿನ ತಾಲೂಕು ಆಡಳಿತ ವ್ಯಾಪಾರ ವಹಿವಾಟಿಗೆ ಮತ್ತು ಸಂಚಾರಕ್ಕೆ ಅವಕಾಶ ಕಲ್ಪಿಸಿತ್ತು. ಈ ವೇಳೆಯೊಳಗೆ ಸದಾ ಗಿಜಿಗುಡುತ್ತಿದ್ದ ಜನಜಂಗುಳಿ ಮತ್ತು ಇತರೆ ವಾಹನಗಳ ಸಂಚಾರ ಸಂಪೂರ್ಣ ಸ್ತಬ್ದಗೊಂಡಿತ್ತು. ಅಂಗಡಿ ಮುಂಗಟ್ಟು ಮುಚ್ಚಿದ್ದವು. ಹೋಟೆಲ್ ಗಳೂ ಬಂದ್ ಆಗಿದ್ದವು. ಎಪಿಎಂಸಿ ಮಾರುಕಟ್ಟೆ ಸಹ ಬಂದ್ ಆಗಿತ್ತು. ಹಾಲು, ಔಷಧ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೆಲವೆಡೆ ಮಾಂಸ ಮಾರಾಟ ನಡೆದಿದೆ ಎನ್ನಲಾಗಿದೆ.

    ನಿಷೇದಾಜ್ಞೆ ಇರಲಿದೆ. ಯಾರೂ ಮನೆಯಿಂದ ಹೊರ ಬರಬೇಡಿ ಎಂದು ತಾಲ್ಲೂಕು ಆಡಳಿತ ಗ್ರಾಮೀಣ ಪ್ರದೇಶಗಳಲ್ಲಿ ಡಂಗುರ ಸಾರಿಸಿತ್ತು. ಪೊಲೀಸ್ ಇಲಾಖೆ ನಗರಗಳಲ್ಲಿ ಧ್ವನಿವರ್ಧಕ ಹೊತ್ತ ಆಟೊಗಳಲ್ಲಿ ಪ್ರಚಾರ ನಡೆಸಿತ್ತು. ನಗರದಲ್ಲಿ ಪೊಲೀಸರು ಅಲ್ಲಲ್ಲಿ ಚೆಕ್ ಪೋಸ್ಟ್ ಹಾಕಿದ್ದು, ಅನಗತ್ಯವಾಗಿ ವಾಹನಗಳಲ್ಲಿ ಓಡಾಡುವವರನ್ನು ಎಚ್ಚರಿಸುತ್ತಿದ್ದರು. ಇದರಿಂದ ವಾಹನಗಳ ಓಡಾಟ ಕಡಿಮೆ ಆಗಿತ್ತು.

     ಮೊದಲ ಭಾನುವಾರದ ಬಂದ್ ಕಾರಣ ಅಗತ್ಯ ವಸ್ತುಗಳನ್ನು ಶನಿವಾರವೇ ಜನರು ಮುಗಿಬಿದ್ದು ಖರೀದಿಸಿದ್ದರು. ಹೀಗಾಗಿ ಮರುದಿನ ರಸ್ತೆಗೆ ಬರುವ ಪ್ರಮೇಯ ಬಂದಿಲ್ಲ. ಹಾಲು, ಮೆಡಿಕಲ್ ಶಾಪ್, ಆಸ್ಪತ್ರೆ ಹಾಗೂ ಮಾಂಸದಂಗಡಿ ತೆರೆಯಲು ಮಾತ್ರ ಅವಕಾಶ ನೀಡಲಾಗಿತ್ತು. ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಿತ್ತು. ಬೆರಳೆಣಿಕೆಯಷ್ಟು ಸಮೂಹ ಸಾರಿಗೆ ಬಿಡುಗಡೆ ಓಡಾಡಲು ಅವಕಾಶ ಕೊಟ್ಟಿದ್ದರಿಂದ ಅವು ಕೂಡ ರಸ್ತೆಗೆ ಇಳಿಯಲು ಅವಕಾಶ ನೀಡಿಲ್ಲ. ಹೀಗಾಗಿ ಹೊಸದುರ್ಗ ತಾಲ್ಲೂಕು ಸೇರಿದಂತೆ ನಗರದ ಪ್ರಮುಖ ರಸ್ತೆಗಳು ನಿರ್ಜನಗೊಂಡಿತ್ತು. ಇಡೀ ನಗರ ಬಿಕೊ ಎನ್ನುತ್ತಿರುವ ದೃಶ್ಯ ಕಂಡು ಬಂತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link