ರಟ್ಟೀಹಳ್ಳಿ
ರಾಜಕಾರಣಿಗಳು ಅಧಿಕಾರ ದೊರೆತಾಗ ಸಮಾಜದ ಏಳಿಗೆಗೆ ಶ್ರಮಿಸಬೇಕು ಹಾಗೂ ಯಾವುದೇ ತಾರತಮ್ಯ ಮಾಡದೇ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸಮಾಡಬೇಕೆಂದು ಜಿ.ಪಂ.ಅದ್ಯಕ್ಷ ಎಸ್.ಕೆ.ಕರಿಯಣ್ಣನವರ ಹೇಳಿದರು.
ಅವರು ರಟ್ಟೀಹಳ್ಳಿಯಲ್ಲಿ ಪಾಡಸಾನ್ ಮುಲ್ಲಾ ಕಮಿಟಿಯವರು ಎರ್ಪಡಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸರ್ಕಾರದಿಂದ ದೊರೆಯುವ ಅಲ್ಪಸಂಖ್ಯಾತ ಇಲಾಖೆಯ ಅನುದಾನವನ್ನು ರಟ್ಟೀಹಳ್ಳಿಯ ಪಾಡಸಾನ್ ಮುಲ್ಲಾ ಕಮಿಟಿಗೆ ದೊರಕಿಸಿಕೊಡುತ್ತೇನೆ ನೆನಗುದಿಗೆ ಬಿದ್ದಿರುವ ಮಳಗಿ ಸೇತುವೆಯ ಕಾಮಗಾರಿಯನ್ನು ಶಿಘ್ರದಲ್ಲೇ ಪೂರ್ಣಗೊಳಿಸಿಲಾಗುವುದೆಂದರು.ಮತ್ತು ತಾಲೂಕಿನ ಅಲ್ಪಸಂಖ್ಯಾತ ಸಮುದಾಯವರು ಗಾರ್ಮೆಂಟ್ಸ,ಸಣ್ಣಂಗಡಿ,ಗುಡಿಕೈಗಾರಿಕೆ,ಇಟ್ಟಿಗೆ ತಯಾರಿಸಲು ಮುಂದೆ ಬಂದರೆ ಅಂಥವರಿಗೆ ಸಂಪೂರ್ಣ ಸಹಾಯ ಮಾಡುವುದಾಗಿ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಜಿ,ಪಂ.ಸದಸ್ಯ ಪಿ.ಡಿ.ಬಸನಗೌಡ್ರ ಕಳೆದ 30 ವರ್ಷಗಳ ಇತಿಹಾಸದಲ್ಲಿ ತಾಲೂಕಿಗೆ ಜಿ.ಪಂ ಅದ್ಯಕ್ಷ ಸ್ಥಾನ ಪ್ರಥಮಬಾರಿಗೆ ದೊರೆತಿದೆ ನಾವಲ್ಲೆರೂ ಒಗ್ಗಟ್ಟಾಗಿ ಕೆಲಸ ಮಾಡೋಣ ಮತ್ತು ತಾಲೂಕಿಗೆ ಹೆಚ್ಚಿನ ಅನುದಾನವನ್ನು ಅದ್ಯಕ್ಷರು ತರುವಲ್ಲಿ ಹೆಚ್ಚಿನ ಶ್ರಮಿಸಲಿ ಎಂದರು.
ಈ ಸಂದರ್ಬದಲ್ಲಿ ಜಿ.ಪಂ ಸದಸ್ಯ ಪ್ರಕಾಶ ಬನ್ನಿಕೊಡ,ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಆರ್.ಎನ್.ಗಂಗೊಳ , ಶಂಬಣ್ಣ.ಗುಳಪ್ಪನವರ , ತಾ.ಪಂ ಸದಸ್ಸಯ ಮಹಬೂಬಸಾಬ.ಮುಲ್ಲಾ , ಅಬ್ಬಾಸ.ಗೋಡಿಹಾಳ , ಸಲೀಮ್.ಮುಲ್ಲಾ ,ಇಲಿಯಾಸ.ಮೇಡ್ಲೇರಿ.ಸರ್ಪರಾಜ.ಮಾಸೂರ , ಕಲೀಲ.ಮುಲ್ಲಾ , ಬಾಬುಸಾಬ.ಜಡದಿ ,ರಾಘವೇಂದ್ರ,ಹರಿವಿಶೆಟ್ಟರ,ಮಾಲತೇಶಗೌಡ.ಗಂಗೋಳ ಉಪಸ್ಥತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








