ಕಿತ್ತೂರ ಚೆನ್ನಮ್ಮ ಜಯಂತಿ

ಬ್ಯಾಡಗಿ:

      ಮಹರ್ಷಿ ವಾಲ್ಮೀಕಿ ಹಾಗೂ ವೀರರಾಣಿ ಕಿತ್ತೂರ ಚೆನ್ನಮ್ಮ ಜಯಂತಿಯನ್ನು ಎಲ್ಲ ಸಮುದಾಯದ ಸಹಕಾರದೊಂದಿಗೆ ಅದ್ದೂರಿಯೊಂದಿಗೆ ಹಾಗೂ ವಿಜೃಂಭಣೆಯ ಮೂಲಕ ಆಚರಿಸಲು ತಹಶೀಲ್ದಾರ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

     ಅಧ್ಯಕ್ಷತೆ ವಹಿಸಿದ್ದ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಎ.ಟಿ.ಜಯಕುಮಾರ ಅ.23 ರಂದು ವೀರರಾಣಿ ಕಿತ್ತೂರ ಚೆನ್ನಮ್ಮ ಜಯಂತಿ ಹಾಗೂ ಅ.24 ರಂದು ಮಹರ್ಷಿ ವಾಲ್ಮೀಕಿ ಜಯಂತಿ ನಡೆಸಲು ಸರಕಾರ ಆದೇಶಿಸಿದೆ ಎಂದರು. ಸಭೆಯಲ್ಲಿ ಉಪಸ್ಥಿತರಿದ್ದ ನಿವೃತ್ ಪ್ರಚಾರ್ಯ ಎಸ್.ಎನ್.ಯಮನಕ್ಕನವರ ಮಾತನಾಡಿ ಇತ್ತೀಚೆಗೆ ದಾರ್ಶನಿಕರ ಜಯಂತಿ ಮಹೋತ್ಸವಗಳು ಕಳೆಗುಂದಿದಂತೆ ಕಾಣುತ್ತಿವೆ, ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ಸಾರ್ವಜನಿಕರ ಸಹಭಾಗಿತ್ವ ಕ್ಷೀಣಿಸುತ್ತಿವೆ ಆಚರಣೆಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೇ ಜಾತ್ಯಾತೀತ ಮನೋಭಾವನೆ ಹಾಗೂ ಪಕ್ಷಾತೀತವಾಗಿ ಆಚರಿಸುವಂತಾಗಬೇಕು ಎಂದರು.

     ಶಂಭಣ್ಣ ದಾನಪ್ಪನವರ ಮಾತನಾಡಿ, ದಾರ್ಶನಿಕರ ಜಯಂತಿ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನಡೆಸುವಲ್ಲಿ ತಾಲೂಕಾಡಳಿತ ವಿಫಲವಾಗುತ್ತಿದ್ದು ಅರ್ಥಪೂರ್ಣವಾಗುತ್ತಿಲ ಬೆರಳಿಕೆಯಷ್ಟು ಅಧಿಕಾರಿಗಳು ಶಿಕ್ಷಕರು ಭಾಗವಹಿಸುತ್ತಲಿದ್ದಾರೆ ಹೀಗಾದಲ್ಲಿ ಪೂರ್ವಭಾವಿಸಭೆ ನಡೆಸುವ ಔಚಿತ್ಯವೇನು ಎಂದು ಪ್ರಶ್ನಿಸಿದರು

    ಪುರಸಭಾ ಸದಸ್ಯ ರಾಮಣ್ಣ ಕೋಡಿಹಳ್ಳಿ ಮಾತನಾಡಿ, ಆರೋಪ ಪ್ರತ್ಯಾರೋಪಗಳಿಗಿಂತ ಈಗ ಆಗಬೇಕಾಗಿರುವ ಕಾರ್ಯ ಕ್ರಮವನ್ನು ನಾವೆಲ್ಲರೂ ಸೇರಿ ವಿಜೃಂಭಣೆಯಿಂದ ನಡೆಸೋಣ ಅದಕ್ಕೆ ಸಂಭಂಧಿಸಿದ ಸಲಹೆಗಳನ್ನು ರಾಷ್ಟ್ರೀಯ ಹಬ್ಬ ಗಳ ಆಚರಣಾ ಸಮಿತಿ ಮುಕ್ತವಾಗಿ ಸ್ವಾಗತಿಸುವಂತೆ ಸಲಹೆ ನೀಡಿದರು.

     ಮಾರಿಕಾಂಬ ದೇವಸ್ಥಾನದ ಹತ್ತಿರ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ ಮೆರವಣಿಗೆಯ ಮೂಲಕ ನೂತನವಾಗಿ ನಿರ್ಮಿಸಿರುವ ವಾಲ್ಮೀಕಿ ಸಭಾಭವನಕ್ಕೆ ಸಾಗಿ ಬಳಿಕ ಸಭೆ ನಡೆಸಲು ತೀರ್ಮಾನಿಸಲಾಯಿತು. ಶ್ರೀ ವೀರರಾಣಿ ಕಿತ್ತೂರ ಚೆನ್ಮಮ್ಮ ಭಾವಚಿತ್ರಕ್ಕೆ ನೆಹರೂ ನಗರದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಯ ಮೂಲಕ ಶ್ರೀ ವೀರಭದ್ರೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ಸಾಗಿ ಬಳಿಕೆ ಸಭೆ ನಡೆಸಲು ತೀರ್ಮಾನಿಸಲಾಯಿತು. ಸಾಮಾಜಿಕ, ಶೈಕ್ಷಣಿಕವಾಗಿ ಗಣನೀಯವಾಗಿ ಸಮಾಜದಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲು ಸಭೆ ತೀರ್ಮಾನಿಸಿತು.

     ಸಭೆಯಲ್ಲಿ ವಿರೇಂದ್ರ ಶೆಟ್ಟರ, ಹೊನ್ನೂರಪ್ಪ ಕಾಡಸಾಲಿ, ಮಲ್ಲೇಶಪ್ಪ ಒಳಗುಂದಿ, ಹನುಮಂತಪ್ಪ ನಾಯಕ, ಶಾಂತಣ್ಣ ದೊಡ್ಮನಿ, ತಾಲೂಕಾ ಸಮಾಜ ಕಲ್ಯಾಣಾಧಿಕಾರಿ ಹನುಮಂತಪ್ಪ ಲಮಾಣಿ, ದುಗ್ಗಪ್ಪ, ರಮೇಶ ಕೋಟಿ, ಸೇರಿದಂತೆ ವಾಲ್ಮೀಕಿ ಹಾಗೂ ವಿರಶೈವ ಸಮಾಜದ ಮುಖಂಡರು ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link