ಮಕ್ಕಳ ಮೂಲಕ ಪರಿಸರ ಜಾಗೃತಿ ಸುಲಭ

ಚಿತ್ರದುರ್ಗ;

    ಸಣ್ಣ ವಯಸ್ಸಿನಲ್ಲೆ ಮಕ್ಕಳಲ್ಲಿ ಪರಿಸರದ ವಿಚಾರಗಳ ಬಗ್ಗೆ ಮಾಹಿತಿ ನೀಡಿದರೆ,ಮುಂದಿನ ಭವಿಷ್ಯ ಪರಿಸರ ಸ್ನೇಹಿಯಾಗಿ ಬದುಕು ರೂಪಿಸಿಕೊಳ್ಳಲು ಅನುಕೂಲವಾಗುವುದು ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಸ್. ವೈ. ವಟವಟಿ ಅಭಿಪ್ರಾಯ ಪಟ್ಟರು.

     ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಛೇರಿ, ನಗರಸಭೆ, ಅರಣ್ಯ ಇಲಾಖೆ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಚಿತ್ರದುರ್ಗ ವಿಜ್ಞಾನ ಕೇಂದ್ರ, , ಮಹಿಳಾ ಸೇವಾ ಸಮಾಜ, ಸಹನಾ ಮಹಿಳಾ ಸಂಘ, ರೆಡ್ ಕ್ರಾಸ್, ಜಾನ್ ಮೈನ್ಸ, ವೇದಾಂತ ಮೈನ್ಸ, ಜಿಲ್ಲಾ ಯೋಗಾ ಸಂಸ್ಥೆ , ರೋಟರಿ ಕ್ಲಬ್, ಪೋರ್ಟ್, ಇನ್ನರ್ ವೀಲ್ ಕ್ಲಬ್, ಪೋರ್ಟ್, ಲಯನ್ಸ ಕ್ಲಬ್, ವಾಸವಿ ಮಹಿಳಾ ಸಂಘ, ಜಾನ್ ಮೈನ್ಸ್, ಸೃಷ್ಟಿ ಸಾಗರ ಪ್ರಕಾಶನ, ಕಲಾ ಚೈತನ್ಯ ಚಿತ್ರಕಲಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದಿಂದ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

       ಪ್ರತಿ ವರ್ಷ ನಾವುಗಳು ಪರಿಸರ ದಿನಾಚರಣೆಗಳನ್ನ ಆಚರಿಸುತ್ತಿದ್ದೇವೆ, ಇಲ್ಲದಿದ್ದರೆ ಜನರಲ್ಲಿ ಪರಿಸರದ ವಿಚಾರಗಳು ಅನುಷ್ಟಾನಗೊಳಿಸಲು ಅಸಾದ್ಯವಾಗುವುದು. ಜನರಲ್ಲಿ ಅವಿರತವಾಗಿ ಪರಿಸರದ ಬಗ್ಗೆ ಅರಿವು ಕಾರ್ಯಕ್ರಮಗಳನ್ನ ನೀಡುತ್ತಾ ಅವರನ್ನ ಪರಿಸರ ಪ್ರೇಮಿಗಳನ್ನಾಗಿ ಬದಲಾಯಿಸಬೇಕಾಗಿದೆ. ಇಂತಹ ಕೆಲಸಗಳನ್ನ ಮಾಡುವ ಸಂಘಸಂಸ್ಥೆಗಳನ್ನ ನಾವು ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ. ಮಕ್ಕಳೇ ದೇಶದ ಮುಂದಿನ ಪ್ರಜೆಗಳು, ಅವರಲ್ಲಿ ಹೆಚ್ಚಿನ ಪರಿಸರದ ಜಾಗೃತಿ ಮೂಡಿಸ ಬೇಕಾಗಿದೆ ಎಂದರು.

      ನೀರಿಲ್ಲದ ಬದುಕು ದುಸ್ತರವಾದದ್ದು, ಮನೆ, ಮಠ ಕಟ್ಟಿದರು ಸಹ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ, ಜನರು ಊರು ಬಿಡಬೇಕಾದ ಸಂದರ್ಭಗಳು ಹೆಚ್ಚಾಗುತ್ತಿದೆ, ಮನುಷ್ಯ ಬರೀ ಹಣದ ಚಿಂತೆ ಮಾಡಿಕೊಂಡು ಬರುತ್ತಿದ್ದಾನೆ, ಹಣದಿಂದ ನಾವು ಗಾಳಿ, ನೀರು ಕೊಳ್ಳಲಾಗದು, ತಂತ್ರಜ್ಞಾನ ಹೆಚ್ಚಾದಷ್ಟು ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದರು.

      ಜಿಲ್ಲಾ ಅರಣ್ಯ ಅಧಿಕಾರಿಗಳಾದ ಮಂಜುನಾಥ್ ಮಾತನಾಡಿ, ಜನರಿಗೆ ಪರಿಸರದ ಸಂದೇಶಗಳನ್ನ ತಲುಪಿಸುವ ಕಾರ್ಯಕ್ರಮಗಳು ಹೆಚ್ಚಾಗಬೇಕು, ಪರಿಸರದ ನಿಯಮಗಳನ್ನ ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಬದುಕನ್ನ ರೂಪಿಸಿಕೊಳ್ಳಬೇಕು ಎಂದರು.
ಅರಣ್ಯ ನಾಶಮಾಡುತ್ತಾ ನಾವು ಮಳೆ ಕಳೆದುಕೊಳ್ಳುತ್ತಿದ್ದೇವೆ, ದುಶ್ಚಟಗಳು ಸಹ ಪರಿಸರ ವಿರೋಧಿಯಾಗಿವೆ, ಆರೋಗ್ಯವಂತ ಜೀವನ ಮಾಡುವ ಕಲೆಗಳನ್ನ ಜನರಲ್ಲಿ ಬಿತ್ತಬೇಕಾಗಿದೆ ಎಂದರು.

        ಕಾನೂನು ಸೇವೇಗಳ ಪ್ರಾಧೀಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿ ನ್ಯಾ ಟಿ. ಶಿವಣ್ಣ. ವಕೀಲರ ಸಂಘದ ಅಧ್ಯಕ್ಷರಾದ ಶ್ರೀ. ಎಸ್. ವಿಜಯಕುಮಾರ್. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಬಿ.ಎಂ. ಅನಿಲ್ ಕುಮಾರ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ|| ಎನ್. ಜಯಪ್ರಕಾಶ್, ಜಿಲ್ಲಾ ಆರೋಗ್ಯ ಇಲಾಖೆ ಡಾ|| ಪಾಲಾಕ್ಷಪ್ಪ,

       ಮಹಿಳಾ ಸೇವಾ ಸಮಾಜದ ಉಪಾಧ್ಯಕ್ಷರಾದ ಶ್ರೀಮತಿ, ಮೋಕ್ಷ ರುದ್ರಸ್ವಾಮಿ, ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಶಿವರಶ್ಮಿ ಅಕ್ಕನವರು, ಸಹನ ಮಹಿಳಾ ಸಂಘದ ಅಧ್ಯಕ್ಷರಾದ ಡಾ|| ಸುಧಾ, ಡಾ|| ಕೆ. ಕೆ. ಕಮಾನಿ, ಶ್ರೀಮತಿ ಜಲಜ, ಶ್ರೀಮತಿ ಶೈಲಾ ವಿಶ್ವನಾಥ, ಶ್ರೀ. ಜೆ.ವಿ. ಮಂಜುನಾಥ. ಶ್ರೀಮತಿ ಜಯಶ್ರೀ ಷಾ. ಡಾ|| ಹೆಚ್.ಕೆ. ಎಸ್. ಸ್ವಾಮಿ, ನವೀನ್, ಮಹಾಂತೇಶ್, ಕಲ್ಲೇಶ್, ನಾಗರಾಜ್ ಕೊಟ್ಲ ಉಪಸ್ಥಿತರಿದ್ದರು.

      ಶಾಲಾ ಮಕ್ಕಳು ಸ್ಟೀಲ್ ಲೋಟ ಬಳಸಿ, ಪ್ಲಾಸ್ಟಿಕ್ ಲೋಟ ಬೇಡವೆಂದು ಜಾಗೃತಿ ಮೂಡಿಸಿದರು. ಪರಿಸರ ಸಂರಕ್ಷಣೆ ಬಗ್ಗೆ ಮಕ್ಕಳಿಗೆ ಪ್ರತಿಜ್ಞಾ ವಿದಿ ಭೋಧಿಸಲಾಯಿತು, ಬ್ರಹ್ಮಕುಮಾರಿ ಈಶ್ವರಿ ಸಂಸ್ಥೆಯಿಂದ ಭೂಮಿಯನ್ನ ನಗರದಲ್ಲಿ ಮೆರವಣಿಗೆ ಮೂಲಕ ಜನ ಜಾಗೃತಿ ಮೂಡಿಸಿದರು. ಮಕ್ಕಳು ಪರಿಸರದ ಫಲಕಗಳನ್ನ ಪ್ರದರ್ಶಿಸುತ್ತಾ ಜನರಲ್ಲಿ ಪರಿಸರ ಉಳಿಸಿ ಎಂಬ ಘೋಷಣೆಗಳನ್ ಕೂಗಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap