ಹುಳಿಯಾರು
ಹುಳಿಯಾರು-ತಿಪಟೂರು ರಸ್ತೆಯಲ್ಲಿ ಬರುವ ಹಂದನಕೆರೆ ಹೋಬಳಿಯ ಮತ್ತಿಘಟ್ಟ ಗ್ರಾಮದ ಪಾರ್ವತಮ್ಮ ದೇವಿ ಮತ್ತು ಬಸವೇಶ್ವರ ಸ್ವಾಮಿಯ 8 ದಿನಗಳ ಜಾತ್ರಾ ಮಹೋತ್ಸವದ ತೆರೆ ಎಳೆಯಲಾಯಿತು.ದ್ವಜಾವರೋಹಣ, ಅಂಕುರಾರ್ಪಣೆ, ಹಣ್ಣು ಕಾಯಿ ಸೇವೆ, ಆರತಿ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನಡೆಸಿ ರುದ್ರಾಭಿಷೇಕ, ಹೂವಿನ ಅಲಂಕಾರದ ನಂತರ ಅಗ್ನಿಕುಂಡ ಮಹೋತ್ಸವ ನಡೆಯಿತು.
ಬಸವೇಶ್ವರ ವೀರಗಾಸೆ ನೃತ್ಯ ಮಂಡಳಿಯ ವೀರಗಾಸೆ ನೃತ್ಯ, ಮಲ್ಲಿಗೆರೆಯ ಕರಿಯಮ್ಮದೇವಿಯ ದೂತರಾಯ ಕುಣಿತದೊಂದಿಗೆ ವೈಭವಯುತವಾಗಿ ರಥೋತ್ಸವ ನಡೆಸಲಾಯಿತು. ಅಡ್ಡಪಲ್ಲಕ್ಕಿ ಉತ್ಸವ, ಬಸವನ ಉತ್ಸವ, ತೀರ್ಥ ಪ್ರಸಾದ, ಅವಂಭೃತ ಸ್ನಾನ, ನಡೆಮುಡಿ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಚಟುವಟಿಕೆಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿ 8 ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.