ತುರುವೇಕೆರೆ:
ತಾಲೂಕಿನ ಅರಳೀಕೆರೆ ಗ್ರಾಮದ ಬೊಮ್ಮಲಿಂಗಸ್ವಾಮಿ ಅವರ ಮಾರುತಿ ವ್ಯಾನ್ ಕಾರು ಸುಟ್ಟು ಭಸ್ಮವಾಗಿರುವ ಘಟನೆ ಶನಿವಾರ ನಡೆದಿದೆ.
ಬೊಮ್ಮಲಿಂಗಸ್ವಾಮಿ ಬೆಳಗ್ಗೆ ಮನೆಯ ಮುಂದೆ ಕಾರು ಚಾಲನೆ ಪ್ರಾರಂಭಿಸುವಾಗ ಇದ್ದಕ್ಕಿದ್ದಂತೆ ಕಾರಿನೊಳಗೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಮಾಲೀಕ ಬೊಮ್ಮಲಿಂಗಸ್ವಾಮಿ ಕಾರು ಇಳಿದು ಓಡಿದ್ದಾನೆ ಸ್ಥಳಕ್ಕೆ ಅಗ್ನಿ ಶಾಮಕ ವಾಹನ ಬರುವುದರೊಳಗಾಗಿ ಕಾರು ಸಂಪೂರ್ಣ ಸುಟ್ಟು ಹೋಗಿದೆ. ಬೊಮ್ಮಲಿಂಗಸ್ವಾಮಿಗೆ ಸಣ್ಣಪುಟ್ಟಗಾಯಗಳಾಗಿದ್ದ ಚಿಕಿತ್ಸೆ ಪಡೆದಿದ್ದಾನೆ. ಡಿ.ವೆಂಕಟಾಚಲ, ದೊಡ್ಡನರಸಪ್ಪ, ನಾಗರಾಜ ಬೆಂಕಿ ಶಮನ ಕಾರ್ಯಚರಣೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
