ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ

ಬೆಂಗಳೂರು:

       ಕುಖ್ಯಾತ ರೌಡಿ ಸುಶಾಂತ್ ಅಲಿಯಾಸ್ ಪೇಯಿಯ ತಲೆ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿರುವ ದುರ್ಘಟನೆ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಸಂತಪುರದ ಯಾದಾಳಮ್ಮ ದೇವಸ್ಥಾನದ ಬಳಿ ನಡೆದಿದೆ
ಉತ್ತರಹಳ್ಳಿ ವೃತ್ತದ ರೌಡಿ ಸುಶಾಂತ್(32)ನನ್ನು ಮನೆಯಿಂದ ಬೈಕ್‍ನಲ್ಲಿ ಗುರುವಾರ ರಾತ್ರಿ ದುಷ್ಕರ್ಮಿಯೊಬ್ಬ ಕರೆದೊಯ್ದಿದ್ದನು.

       ಅಲ್ಲಿಂದ ಎಲ್ಲಿಗೆ ಹೋದರು ಎನ್ನುವುದು ತಿಳಿದುಬಂದಿಲ್ಲ.ಮುಂಜಾನೆ 3ರ ವೇಳೆ ಯಾದಾಳಮ್ಮ ದೇವಸ್ಥಾನದ ಬಳಿ ಪೇಯಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿರುವುದು ಪತ್ತೆಯಾಗಿದೆ

       ಸುಬ್ರಮಣ್ಯಪುರ ಪೊಲೀಸ್ ಠಾಣೆಯ ರೌಡಿಶೀಟರ್‍ಆಗಿದ್ದ ಸುಶಾಂತ್ ಕೊಲೆ ಸುಲಿಗೆ,ಬೆದರಿಕೆ,ಅಪಹರಣ ಸೇರಿ 15ಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು ಕೆಂಗೇರಿ, ಆರ್.ಆರ್.ನಗರ ಹಾಗೂ ಸುಬ್ರಮಣ್ಯಪುರದ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು.

         ಟೆಂಪೋ ಟ್ರಾವಲರ್ ಚಾಲಕನಾಗಿದ್ದ ಸುಶಾಂತ್ ಸರಿಯಾಗಿ ಕೆಲಸಕ್ಕೆ ಹೋಗದೆ ಗ್ಯಾಂಗ್ ಕಟ್ಟಿಕೊಂಡು ಅಪರಾಧ ಕೃತ್ಯದಲ್ಲಿ ತೊಡಗಿದ್ದು ಹಳೆ ದ್ವೇಷದ ಹಿನ್ನೆಲೆಯಲ್ಲಿ ಇಲ್ಲವೇ ಪ್ರೀತಿಸಿ ವಿವಾಹವಾಗಿದ್ದ ಆಕೆಯು ಬೇರೊಬ್ಬನ ಜೊತೆ ಸಲುಗೆಯಿಂದಿದ್ದು ಈ ವಿಚಾರವಾಗಿ ದ್ವೇಷ ಸಾಧಿಸಿ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ.

       ವಿಷಯ ತಿಳಿಯುತ್ತಿದ್ದಂತೆಯೇ ಸುಬ್ರಮಣ್ಯಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ.

                       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link